ಕಲ್ಪ ಮೀಡಿಯಾ ಹೌಸ್ | ಗಂಗಾವತಿ |
ತಡರಾತ್ರಿ ಊಟ ಇಲ್ಲ ಎಂದು ಹೇಳಿದ್ದಕ್ಕೆ ಇಡಿ ಹೊಟೇಲ್’ಗೆ(ಡಾಬಾ) ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗೊಂದಿ ಬಳಿಯಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ.
ತಡರಾತ್ರಿ 11 ಗಂಟೆ ನಂತರ ಹೊಟೇಲ್’ಗೆ ಆಗಮಿಸಿದ ಕಿಡಿಗೇಡಿಗಳು ಊಟ ಕೇಳಿದ್ದಾರೆ. ಇಷ್ಟೊತ್ತಿಗೆ ಊಟ ಇಲ್ಲ ಎಂದು ಹೇಳಿದ್ದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ದಾಂಧಲೆ ನಡೆಸಿ, ಗಿಡಸಲು ಮಾದರಿಯಲ್ಲಿದ್ದ ಹೊಟೇಲ್’ನ 11 ಕೋಣೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ತತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರು ಹೊಟೇಲ್ ಸಿಬ್ಬಂದಿಯನ್ನು ರಕ್ಷಿಸಿ, ಬೆಂಕಿ ನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post