ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ಮಾವಿನಕಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್. ರವಿಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎನ್. ಅಶ್ವತ್ಥರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5 ವರ್ಷದ ಅವದಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಸಂಘದ ಅಭಿವೃದ್ಧಿಗಾಗಿ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಒಮ್ಮತದಿಂದ ಶ್ರಮಿಸಬೇಕಾಗಿದೆ. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವ ಮೂಲಕ ರೈತರ ಬಾಳಿಗೆ ಆಸರೆಯಾಗಿರುವ ಸಹಕಾರ ಸಂಘವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ಕಾರ ಮತ್ತು ಹಾಲು ಒಕ್ಕೂಟದ ವತಿಯಿಂದ ರೈತರಿಗೆ ಸಿಗುವ ಸಂಪೂರ್ಣ ಸೌಲಭ್ಯಗಳನ್ನು ಒದಗಿಸಲು ಬದ್ಧರಾಗಿದ್ದು, ಪ್ರತಿಯೊಬ್ಬ ಹೈನುದಾರರ ಹಿತ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಮುಖಂಡರಾದ ಎಸ್.ಎಚ್. ನರಸಿಂಹ ಮಾತನಾಡಿ, ಈ ಹಿಂದಿನಿಂದಲೂ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘವು ಎಲ್ಲಾ ನಿರ್ದೇಶಕರ ಮತ್ತು ಹೈನುದಾರರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗ್ರಾಮದಲ್ಲಿನ ಸಾಕಷ್ಟು ಕುಟುಂಬಗಳು ಜೀವನ ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿದಿನ ಪೂರೈಕೆ ಮಾಡುವ ಹಾಲಿನ ಗುಣಮಟ್ಟದಲ್ಲಿ ಮೌಲ್ಯತೆಯನ್ನು ಕಾಪಾಡುವ ಮೂಲಕ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಎಂ.ಎಚ್. ಚಂದ್ರಣ್ಣ, ಚಿನ್ನಪ್ಪ, ಎಂ.ಎನ್. ನಾರಾಯಣರೆಡ್ಡಿ, ಎಂ.ಎನ್. ರಮೇಶ್, ಎಂ.ಸಿ. ರಾಮಕೃಷ್ಣಪ್ಪ, ಸಿದ್ದಲಿಂಗಪ್ಪ, ದಾಳಪ್ಪ, ಎಂ.ಕೆ. ಅಶೋಕ್, ಲಕ್ಷ್ಮೀನಾರಾಯಣ, ಜಯರಾಮಕ್ಕ, ಎಂ.ಎನ್. ಶಾಂತಮ್ಮ, ಮುಖಂಡರಾದ ಎಂ.ಜಿ. ರವೀಂದ್ರರೆಡ್ಡಿ, ಎಂ.ಬಿ. ನಾರಾಯಣರೆಡ್ಡಿ, ಎಂ.ಎಚ್.ರಾಜಣ್ಣ, ಅಶ್ವತ್ಥ ರೆಡ್ಡಿ, ಡೇರಿಯ ಕಾರ್ಯದರ್ಶಿ ಎಂ.ಕೆ. ಶ್ರೀವತ್ಸ, ಶ್ರೀನಿವಾಸಮೂರ್ತಿ, ಸಿಬ್ಬಂದಿಗಳಾದ ರಾಮರೆಡ್ಡಿ, ಗಂಗರೆಡ್ಡಿ, ಮಾರುತಿ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post