ಗೌರಿಬಿದನೂರು: ತಾಲೂಕಿನ ಬೇವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎನ್. ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ವೈ.ಎಂ. ಗಂಗಪ್ಪ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿರುವ ಚುನಾವಣಾಧಿಕಾರಿ ಲಿಯಾಖತ್ ಅಲೀಖಾನ್, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಎನ್. ನಾಗರಾಜ್ 7 ಮತಗಳು, ಪಿ. ನಾಗರಾಜು 4 ಹಾಗೂ ಶನಿವಾರಮ್ ರೆಡ್ಡಿ 2 ಮತಗಳನ್ನು ಪಡೆದಿದ್ದಾರೆ ಎಂದರು.

ಹೆಚ್ಚಿನ ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಎನ್. ನಾಗರಾಜ್ ಅವರನ್ನು ಅಧ್ಯಕ್ಷ ಹಾಗೂ ವೈ.ಎನ್. ಗಂಗಪ್ಪ ರವರನ್ನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಜಿ. ಗಂಗಪ್ಪ, ಲಕ್ಷ್ಮಮ್ಮ, ಎಂ. ಗಂಗಪ್ಪ, ಗೀತ, ಗಂಗಾಧರ್, ಸಿದ್ದರಾಜು, ಕೃಷ್ಣಮೂರ್ತಿ, ಆನಂದ್, ರಾಜಾರಾವ್, ನರಸಪ್ಪ ಹಾಗೂ ಕಾರ್ಯದರ್ಶಿ ಬಿ.ಜಿ. ಮಂಜುನಾಥ್, ಮುಖಂಡರಾದ ಸಿದ್ದೇಗೌಡ, ನರಸಿಂಹಮೂರ್ತಿ, ಎಂ.ಡಿ. ಗೋಪಿ, ಆರ್.ರವಿ, ಬಿ.ಎನ್. ನಾರಾಯಣಪ್ಪ, ಎ. ಗಂಗಾದರಪ್ಪ, ಗಂಗಾಧರಪ್ಪ, ಶಿವಶಂಕರ್, ಬಿ.ಕೆ.ಗೋಪಿ, ರಾಮಾಂಜಿನಪ್ಪ, ಮಲ್ಲೇಶ್, ಮೂರ್ತಿ, ಶಿವಪ್ಪ ಇದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
















