ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಲಹಂಕ: ಇಲ್ಲಿನ ಉಪನಗರದ ವಿಪ್ರ ಸೇವಾ ಟ್ರಸ್ಟ್ ವತಿಯಿಂದ ಜ.24ರ ನಾಳೆ ಭಾನುವಾರ ಶ್ರೀ ಗಾಯತ್ರಿ ಮಹಾಯಜ್ಞವನ್ನು ಆಯೋಜನೆ ಮಾಡಲಾಗಿದೆ.
ಯಲಹಂಕ ಉಪನಗರದ ಎಂಇಸಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ಸ್ವಸ್ತಿವಾಚನ, ಮಹಾಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ದೇವನಾಂದಿ, ಋತ್ವಿಗ್ವರಣ, ಕಲಶಸ್ಥಾಪನೆ, ರುದ್ರಾಭಿಷೇಕ, 10 ಗಂಟೆಯಿಂದ ಶ್ರೀ ಗಾಯತ್ರಿ ಮಹಾಯಜ್ಞ ಪ್ರಾರಂಭವಾಗಲಿದೆ.
ವಿಪ್ರ ಸೇವಾ ಟ್ರಸ್ಟ್ ಮಹಾಪೋಷಕರಾದ ವೇ.ಬ್ರ.ಶ್ರೀ ನಾಗೇಶ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಪೋಷಕರಾದ ವೇ.ಬ್ರ.ಶ್ರೀ ಗಿರೀಶ್ ಶರ್ಮಾ ಅವರ ಅಧ್ವರ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾಹಿತಿಗಾಗಿ 9880441441ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post