ಯಥಾರ್ಥ ಸತ್ಯವೇ ಧರ್ಮದ ಮೂಲ ಕಾರಣ – ವಸ್ತುವಿನ ಸ್ವಭಾವ ಹೇಗಿದೆಯೋ ಅದನ್ನು ಹಾಗೆ ಕಂಡುಕೊಳ್ಳುವುದು. ಧರ್ಮವಿಲ್ಲದೇ ಮೋಕ್ಷವಿಲ್ಲ, ಧರ್ಮವಿದ್ದಕಡೆ ಮೋಕ್ಷ ತಾನಾಗಿಯೇ ಒಂದುಗೂಡಿ ಬರುತ್ತದೆ.
ಯಥಾರ್ಥ ಜ್ಞಾನವಿಲ್ಲದಿರೆ ಮೋಕ್ಷ ಸಾಧ್ಯವಿಲ್ಲ!
ಅಧಿಕಾರಿ – ವಿಷಯ – ಸಂಬಂಧ ಪರಸ್ಪರ ಅನೋನ್ಯಭಾವ. ಗೀತೆಯು ಮೋಕ್ಷಾಸಕ್ತರಿಗೆ ಮೋಕ್ಷಪ್ರಾಪ್ತಿಗಾಗಿಯೂ ಮತ್ತು ಜೀವನದ ಉತ್ಕೃಷ್ಟ ಸ್ಥಿತಿಯ ಪ್ರಾಪ್ತಿಗೆ ಸಾಧನ.
ಮೋಕ್ಷ- ಮೋಕ್ಷಪ್ರಾಪ್ತಿ
ಜೀವನ-ಜೀವನ ಪ್ರಾಪ್ತಿ
1) ಅಧಿಕಾರಿ: ಗೀತೆಯ ವ್ಯಾಸಂಗಕ್ಕೆ ಅಧಿಕಾರಿ ಯಾರು?
ಯಾರು: ಲೋಕ ಜೀವನದ ಕಷ್ಟಗಳನ್ನು, ಬಿಕ್ಕಟ್ಟುಗಳನ್ನೂ ಪರಿಹರಿಸಿಕೊಳ್ಳುವುದರಲ್ಲಿ ಉತ್ಸುಕನಾಗಿ; ಜೀವನದಲ್ಲಿ ತನ್ನ ಯಾವ ವರ್ತನೆ ನಡವಳಿಕೆಗಳಿಂದ ಜೀವನ ಸಾರ್ಥಕವಾದೀತು ಎಂಬ ಉತ್ಸುಕತೆಯಿಂದ ಕೂಡಿದವನು.
ಗುಣಗಳು: ಆಶಾಪರಿಮಿತಿ, ಸಂಯಮ, ತತ್ವಜ್ಞಾನದ ಇಚ್ಛೆ ಅಥವಾ ಅಂತರಂಗ ಸಿದ್ಧತೆ.
2) ವಿಷಯ: ಗೀತೆಯ ವಿಷಯ ವಿಶ್ವತತ್ವ. ಜೀವ ಜಗತ್ ಗುಣ, ಸ್ವರೂಪ, ಲಕ್ಷಣ, ಸಂಬಂಧ ಈಶ್ವರ
3) ಸಂಬಂಧ: 3 ವಿಧ.
1) ಬೋಧಕ- ಬೋಧ್ಯ ಸಂಬಂಧ – ವ್ಯಾಸಂಗಿ – ಗ್ರ್ರಂಥ
2) ಸಮನ್ವಯ – ಸಮನ್ವೇಯ ಸಂಬಂಧ – ಗೀತ – ಶಾಸ್ತ್ರ (ಬೇರೆ) ಉಪದೇಶ
3) ಸಂಸ್ಕಾರಕ – ಸಂಸ್ಕಾರ್ಯ ಸಂಬಂಧ – ಉಪದೇಶ – ಅನುಷ್ಠಾನ
4) ಪ್ರಯೋಜನ
ಎ) ಗೀತಾನುವರ್ತನೆಯಿಂದ ಜಗತ್ಬಾರವು ಲಘುವಾಗುತ್ತದೆ.
ಬಿ) ತತ್ವಪವೇಕದಿಂದ ನಾನಾ ವಸ್ತುಗಳ ತಾರತಮ್ಯ ನಿರ್ಣಿತವಾಗುತ್ತದೆ.
ಸಿ) ಮೋಹ ಬ್ರಾಂತಿ ನಿವಾರಣೆ.
ಐಹಿಕ ಜೀವನದಲ್ಲಿದ್ದರೂ ವಸ್ತು, ಮನ, ವಾಹನಗಳ ಬಗೆಗೆ ನಿರ್ಣಿತವಾಗಿ ವಾರಿಜದ ಅಂದರೆ ಹೆಸರಿನ ಮೇಲಿನ ಸರೋಜದ ಸ್ಥಿತಿಪ್ರಾಪ್ರತವಾಗುತ್ತದೆ.
ಫಲ
1) ಮನ ಪ್ರಸನ್ನತೆ
2) ಸಂಕಷ್ಟಗಳ ಪರಿಹಾರ
3) ಒಟ್ಟಾರೆ ಸರ್ವದುಃಖ ನಿವಾರಣೆ ಹಾಗೂ ಶಾಂತಿ
ಅರಿಕೆ –
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಬಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ. ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಭಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.
ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2 ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ k.ajaykiran@gmail.com ಗೆ ಇಮೇಲ್ ಮಾಡಿ.
Discussion about this post