ಕಲ್ಪ ಮೀಡಿಯಾ ಹೌಸ್ | ಜಾರ್ಜ್‌ಟೌನ್, ಗಯಾನಾ |
ಭಾರತದ ನಾಗರಿಕರ ಮೇಲೆ ದಾಳಿ ನಡೆಸಿ, ನಂತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದ ಉಗ್ರಗಾಮಿಗಳಿಗೆ & ಅದರ ಪೋಷಕ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ದಿಟ್ಟ ಪ್ರತಿಕ್ರಿಯೆ ನೀಡುವ ಮೂಲಕ ಪ್ರದಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಸರ್ಕಾರ ಭಾರತದ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂಬ ಸಂದೇಶ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ #MP Tejaswi Surya ಗಯಾನಾ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ಧೇಶಿಸಿ ಮಾತನಾಡುತ್ತ ತಿಳಿಸಿದರು.
ಆಪರೇಶನ್ ಸಿಂದೂರ #Operation Sindoora ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲು & ನಂತರದ ಬೆಳವಣಿಗೆಗಳ ಕುರಿತಾಗಿ ಜಾಗತಿಕ ಅಭಿಪ್ರಾಯ & ಸಂವಹನಕ್ಕಾಗಿ ಅಮೆರಿಕಾಗೆ ಭೇಟಿ ನೀಡಿರುವ ಸರ್ವಪಕ್ಷ ನಿಯೋಗದ ಭಾಗವಾಗಿ ಗಯಾನ ಕ್ಕೆ ತೆರಳಿರುವ ತಂಡವು, ಗಯಾನಾದ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ, ಪ್ರಧಾನ ಮಂತ್ರಿ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಫಿಲಿಪ್ಸ್ ಮತ್ತು ಉಪಾಧ್ಯಕ್ಷ ಭರತ್ ಜಗ್ದೇವ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಶ್ರೀ ಮನ್ಜೂರ್ ನಾದಿರ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ಒಗ್ಗಟ್ಟಿನ ನಿಲುವನ್ನು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿನ ‘ಶೂನ್ಯ ಸಹಿಷ್ಣುತೆ’ ಸಿದ್ಧಾಂತವನ್ನು ತಿಳಿಸಿತು. ಇದೇ ಸಂದರ್ಭದಲ್ಲಿ ಡಾ. ಶಶಿ ತರೂರ್ ರವರ ನೇತೃತ್ವದಲ್ಲಿನ ತಂಡವು ಜಾರ್ಜ್‌ಟೌನ್‌ನಲ್ಲಿರುವ ಐತಿಹಾಸಿಕ ಪ್ರೊಮೆನೇಡ್ ಗಾರ್ಡನ್ಸ್ ಗೆ ಭೇಟಿ ನೀಡಿ, ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, 1838 ರಲ್ಲಿ ಮೊದಲ ಭಾರತೀಯರನ್ನು ಗಯಾನಾಗೆ ಕರೆತಂದ ಹಡಗು ‘ವಿಟ್ಬಿ’ಯ ಕಂಚಿನ ಪ್ರತಿಕೃತಿಗೆ ಗೌರವ ಸಲ್ಲಿಸುವ ಮೂಲಕ ಆರಂಭಿಕ ಭಾರತೀಯ ವಲಸಿಗರಿಗೆ ನಮನ ಸಲ್ಲಿಸಿದ್ದು ಗಮನಾರ್ಹ.

ನಮ್ಮ ಭೇಟಿಯ ಸಂದರ್ಭದಲ್ಲಿ, ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ನಮ್ಮ ವಿರೋಧವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಭಾರತದ ಸೂಕ್ತ ಪ್ರತಿಕ್ರಿಯೆಯ ಅಗತ್ಯತೆಯನ್ನು ವಿವರಿಸಿದ್ದೇವೆ. ಗಯಾನಾ ಭಾರತದ ಕ್ರಿಯೆಗೆ ಸಹಾನುಭೂತಿ & ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹ. ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ತಾತ್ವಿಕ ನಿಲುವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ-ಪ್ರಾಯೋಜಿತ ಭಯೋತ್ಪಾದನೆಗೆ ಭಾರತವು ನಿರ್ಧಿಷ್ಟ ದಾಳಿ ನಡೆಸುವ ಮುಖಾಂತರ ನೀಡಿರುವ ಪ್ರತಿಕ್ರಿಯೆ ಬಗ್ಗೆ ಗಯಾನಾದ ನಾಯಕರಿಗೆ ವಿವರಿಸಲಾಗಿದ್ದು, ಗಯಾನಾ ವು ಭಾರತದ ಭದ್ರತಾ ಸವಾಲುಗಳನ್ನು ಅರ್ಥಮಾಡಿಕೊಂಡಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ ಎಂಬ ಸಂದೇಶ ಗಯಾನಾದ ಪ್ರತಿನಿಧಗಳು ವ್ಯಕ್ತಪಡಿಸಿದ್ದು ವಿಶೇಷ “ಎಂದು ಸಂಸದ ಸೂರ್ಯ ರವರು ವಿವರಿಸಿದರು.

ಸರ್ವಪಕ್ಷ ನಿಯೋಗವು, ಗಯಾನಾದ ವಿವಿಧ ನಾಯಕರಗಳನ್ನು ಭೇಟಿಯಾಗಿ ಈ ಕೆಳಕಂಡ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿ ಮನವರಿಕೆ ಮಾಡಿಕೊಟ್ಟಿದ್ದು, “ ಪಾಕಿಸ್ತಾನವನ್ನು, ಭಾರತದೊಂದಿಗೆ ಸಮಾನಾಂತರವಾಗಿ ನೋಡುವುದು ನಿಜಕ್ಕೂ ಅಸಾಧ್ಯ. ಎಲ್ಲ ರಂಗಗಳಲ್ಲಿಯೂ ಭಾರತ ಮುಂದಿದೆ. ಭಾರತದೊಂದಿಗಿನ ವ್ಯಾಪಾರ, ವ್ಯವಹಾರ,ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಪಾಲುದಾರಿಕೆ ಜಗತ್ತಿನ ಪ್ರಗತಿಗೆ ಪೂರಕ. ಅದೇ ಪಾಕಿಸ್ತಾನ ದೊಂದಿಗಿನ ನಂಟು, ಅಭಿವೃದ್ಧಿಯ ಹಿನ್ನಡೆ, ಭಯೋತ್ಪಾದನೆಗೆ ಪ್ರೇರಣೆಗೆ ಮಾತ್ರ ಸೀಮಿತವಾಗಲಿದೆ. ಭಾರತ ಯುವ, ಉತ್ಸಾಹೀ ಪಡೆಯೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾದರೆ, ಪಾಕಿಸ್ತಾನ ತನ್ನ ಯುವ ಸಮೂಹವನ್ನು ಉಗ್ರಗಾಮಿ ಕೃತ್ಯಗಳಿಗೆ ದೂಡುತ್ತಿದೆ. ವಿಶ್ವವು ಭಾರತದ ಶಕ್ತಿ, ಪಾಕಿಸ್ತಾನದ ಕುಟಿಲ ನೀತಿಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಹೆಜ್ಜೆ ಇಡುವ ಅಗತ್ಯತೆ ಇದೆ” ಎಂಬುದರ ಕುರಿತು ವಿವರಿಸಲಾಯಿತು ಎಂದು ಸಂಸದ ಸೂರ್ಯ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post