No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಭಾರತದ ನಾಗರಿಕರ ಮೇಲೆ ದಾಳಿ | ಪಾಕಿಸ್ತಾನಕ್ಕೆ ದಿಟ್ಟ ಪ್ರತಿಕ್ರಿಯೆ

ಗಯಾನಾ ರಾಷ್ಟ್ರೀಯ ಅಸೆಂಬ್ಲಿ ಉದ್ದೇಶಿಸಿ ಸಂಸದ ತೇಜಸ್ವೀ ಸೂರ್ಯ ಭಾಷಣ

kalpa News by kalpa News
May 27, 2025
in ರಾಷ್ಟ್ರೀಯ
0
ಭಾರತದ ನಾಗರಿಕರ ಮೇಲೆ ದಾಳಿ | ಪಾಕಿಸ್ತಾನಕ್ಕೆ ದಿಟ್ಟ ಪ್ರತಿಕ್ರಿಯೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಜಾರ್ಜ್‌ಟೌನ್, ಗಯಾನಾ  |

ಭಾರತದ ನಾಗರಿಕರ ಮೇಲೆ ದಾಳಿ ನಡೆಸಿ, ನಂತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದ ಉಗ್ರಗಾಮಿಗಳಿಗೆ & ಅದರ ಪೋಷಕ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ದಿಟ್ಟ ಪ್ರತಿಕ್ರಿಯೆ ನೀಡುವ ಮೂಲಕ ಪ್ರದಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಸರ್ಕಾರ ಭಾರತದ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂಬ ಸಂದೇಶ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ #MP Tejaswi Surya ಗಯಾನಾ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ಧೇಶಿಸಿ ಮಾತನಾಡುತ್ತ ತಿಳಿಸಿದರು.

ಆಪರೇಶನ್‌ ಸಿಂದೂರ #Operation Sindoora ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲು & ನಂತರದ ಬೆಳವಣಿಗೆಗಳ ಕುರಿತಾಗಿ ಜಾಗತಿಕ ಅಭಿಪ್ರಾಯ & ಸಂವಹನಕ್ಕಾಗಿ ಅಮೆರಿಕಾಗೆ ಭೇಟಿ ನೀಡಿರುವ ಸರ್ವಪಕ್ಷ ನಿಯೋಗದ ಭಾಗವಾಗಿ ಗಯಾನ ಕ್ಕೆ ತೆರಳಿರುವ ತಂಡವು, ಗಯಾನಾದ ಅಧ್ಯಕ್ಷ ಮೊಹಮ್ಮದ್‌ ಇರ್ಫಾನ್‌ ಅಲಿ, ಪ್ರಧಾನ ಮಂತ್ರಿ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಫಿಲಿಪ್ಸ್ ಮತ್ತು ಉಪಾಧ್ಯಕ್ಷ ಭರತ್ ಜಗ್ದೇವ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಶ್ರೀ ಮನ್ಜೂರ್ ನಾದಿರ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ಒಗ್ಗಟ್ಟಿನ ನಿಲುವನ್ನು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿನ ‘ಶೂನ್ಯ ಸಹಿಷ್ಣುತೆ’ ಸಿದ್ಧಾಂತವನ್ನು ತಿಳಿಸಿತು. ಇದೇ ಸಂದರ್ಭದಲ್ಲಿ ಡಾ. ಶಶಿ ತರೂರ್‌ ರವರ ನೇತೃತ್ವದಲ್ಲಿನ ತಂಡವು ಜಾರ್ಜ್‌ಟೌನ್‌ನಲ್ಲಿರುವ ಐತಿಹಾಸಿಕ ಪ್ರೊಮೆನೇಡ್ ಗಾರ್ಡನ್ಸ್ ಗೆ ಭೇಟಿ ನೀಡಿ, ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, 1838 ರಲ್ಲಿ ಮೊದಲ ಭಾರತೀಯರನ್ನು ಗಯಾನಾಗೆ ಕರೆತಂದ ಹಡಗು ‘ವಿಟ್ಬಿ’ಯ ಕಂಚಿನ ಪ್ರತಿಕೃತಿಗೆ ಗೌರವ ಸಲ್ಲಿಸುವ ಮೂಲಕ ಆರಂಭಿಕ ಭಾರತೀಯ ವಲಸಿಗರಿಗೆ ನಮನ ಸಲ್ಲಿಸಿದ್ದು ಗಮನಾರ್ಹ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸೂರ್ಯ, “ ಭಾರತ ಮತ್ತು ಗಯಾನಾ ಸಂಬಂಧವು ಸಾಂಸಕೃತಿಕ ಮತ್ತು ಐತಿಹಾಸಿಕ ನೆಲೆಗಟ್ಟಿನ ಮೇಲೆ ನಿರ್ಮಾಣವಾಗಿದ್ದು, ಉಭಯ ದೇಶಗಳು ಆಳವಾದ ಸ್ನೇಹವನ್ನು ಹಂಚಿಕೊಂಡಿವೆ. ವ್ಯಾಪಾರ, ಇಂಧನ, ಕೃಷಿ ಮತ್ತು ಶಿಕ್ಷಣದಲ್ಲಿ ಹೆಚ್ಚುತ್ತಿರುವ ಸಹಕಾರದೊಂದಿಗೆ, ನಮ್ಮ ಪಾಲುದಾರಿಕೆ ಆಳ ಮತ್ತು ಉದ್ದೇಶ ಎರಡರಲ್ಲೂ ವಿಸ್ತರಿಸುತ್ತಿದೆ.

ನಮ್ಮ ಭೇಟಿಯ ಸಂದರ್ಭದಲ್ಲಿ, ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ನಮ್ಮ ವಿರೋಧವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಭಾರತದ ಸೂಕ್ತ ಪ್ರತಿಕ್ರಿಯೆಯ ಅಗತ್ಯತೆಯನ್ನು ವಿವರಿಸಿದ್ದೇವೆ. ಗಯಾನಾ ಭಾರತದ ಕ್ರಿಯೆಗೆ ಸಹಾನುಭೂತಿ & ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹ. ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ತಾತ್ವಿಕ ನಿಲುವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ-ಪ್ರಾಯೋಜಿತ ಭಯೋತ್ಪಾದನೆಗೆ ಭಾರತವು ನಿರ್ಧಿಷ್ಟ ದಾಳಿ ನಡೆಸುವ ಮುಖಾಂತರ ನೀಡಿರುವ ಪ್ರತಿಕ್ರಿಯೆ ಬಗ್ಗೆ ಗಯಾನಾದ ನಾಯಕರಿಗೆ ವಿವರಿಸಲಾಗಿದ್ದು, ಗಯಾನಾ ವು ಭಾರತದ ಭದ್ರತಾ ಸವಾಲುಗಳನ್ನು ಅರ್ಥಮಾಡಿಕೊಂಡಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ ಎಂಬ ಸಂದೇಶ ಗಯಾನಾದ ಪ್ರತಿನಿಧಗಳು ವ್ಯಕ್ತಪಡಿಸಿದ್ದು ವಿಶೇಷ “ಎಂದು ಸಂಸದ ಸೂರ್ಯ ರವರು ವಿವರಿಸಿದರು.
ಕಳೆದ ಒಂದು ದಶಕದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ-ಗಯಾನಾ ಸ್ನೇಹ- ಸಂಬಂಧಗಳು ಹಲವು ರಂಗಗಳಲ್ಲಿ ಧನಾತ್ಮಕ ರೀತಿಯಲ್ಲಿ ವೃದ್ಧಿಯಾಗುತ್ತಿದ್ದು, ಎರಡೂ ದೇಶಗಳು ಇಂಧನ, ಶಿಕ್ಷಣ, ಕೃಷಿ, ಸಂಶೋಧನೆ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆಯುತ್ತಿರುವುದು ವಿಶೇಷ. ಇಂದು, ಗಯಾನಾದ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರು ಭಾರತೀಯ ಮೂಲದವರಾಗಿದ್ದು, ಹೆಚ್ಚಿನ ಆರಂಭಿಕ ವಲಸಿಗರು ತಮ್ಮ ಬೇರುಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದೊಂದಿಗೆ ಗುರುತಿಸುತ್ತಾರೆ. ಭಾರತದೊಂದಿಗಿನ ಅವರ ನಿರಂತರ ಸಾಂಸ್ಕೃತಿಕ ಸಂಪರ್ಕವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದ್ದಾರೆ.

ಸರ್ವಪಕ್ಷ ನಿಯೋಗವು, ಗಯಾನಾದ ವಿವಿಧ ನಾಯಕರಗಳನ್ನು ಭೇಟಿಯಾಗಿ ಈ ಕೆಳಕಂಡ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿ ಮನವರಿಕೆ ಮಾಡಿಕೊಟ್ಟಿದ್ದು, “ ಪಾಕಿಸ್ತಾನವನ್ನು, ಭಾರತದೊಂದಿಗೆ ಸಮಾನಾಂತರವಾಗಿ ನೋಡುವುದು ನಿಜಕ್ಕೂ ಅಸಾಧ್ಯ. ಎಲ್ಲ ರಂಗಗಳಲ್ಲಿಯೂ ಭಾರತ ಮುಂದಿದೆ. ಭಾರತದೊಂದಿಗಿನ ವ್ಯಾಪಾರ, ವ್ಯವಹಾರ,ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಪಾಲುದಾರಿಕೆ ಜಗತ್ತಿನ ಪ್ರಗತಿಗೆ ಪೂರಕ. ಅದೇ ಪಾಕಿಸ್ತಾನ ದೊಂದಿಗಿನ ನಂಟು, ಅಭಿವೃದ್ಧಿಯ ಹಿನ್ನಡೆ, ಭಯೋತ್ಪಾದನೆಗೆ ಪ್ರೇರಣೆಗೆ ಮಾತ್ರ ಸೀಮಿತವಾಗಲಿದೆ. ಭಾರತ ಯುವ, ಉತ್ಸಾಹೀ ಪಡೆಯೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾದರೆ, ಪಾಕಿಸ್ತಾನ ತನ್ನ ಯುವ ಸಮೂಹವನ್ನು ಉಗ್ರಗಾಮಿ ಕೃತ್ಯಗಳಿಗೆ ದೂಡುತ್ತಿದೆ. ವಿಶ್ವವು ಭಾರತದ ಶಕ್ತಿ, ಪಾಕಿಸ್ತಾನದ ಕುಟಿಲ ನೀತಿಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಹೆಜ್ಜೆ ಇಡುವ ಅಗತ್ಯತೆ ಇದೆ” ಎಂಬುದರ ಕುರಿತು ವಿವರಿಸಲಾಯಿತು ಎಂದು ಸಂಸದ ಸೂರ್ಯ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: Georgetown / GuyanaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaMP Tejaswi SuryaNews_in_KannadaNews_KannadaOperation SindooraPM Narendra Modiಆಪರೇಶನ್‌ ಸಿಂದೂರಗಯಾನಾಜಾರ್ಜ್‌ಟೌನ್ಪ್ರದಾನಿ ನರೇಂದ್ರ ಮೋದಿಸಂಸದ ತೇಜಸ್ವಿ ಸೂರ್ಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ | ಸಚಿವ ಶರಣ್ ಪ್ರಕಾಶ್ ಪಾಟೀಲ್

Next Post

ಅಮವಾಸ್ಯೆ ಪ್ರಯುಕ್ತ ಹನುಮಂತ ದೇವರ ಸನ್ನಿಧಿಯಲ್ಲಿ ಪವಿತ್ರ ತೀರ್ಥಸ್ನಾನ

kalpa News

kalpa News

Next Post
ಅಮವಾಸ್ಯೆ ಪ್ರಯುಕ್ತ ಹನುಮಂತ ದೇವರ ಸನ್ನಿಧಿಯಲ್ಲಿ ಪವಿತ್ರ ತೀರ್ಥಸ್ನಾನ

ಅಮವಾಸ್ಯೆ ಪ್ರಯುಕ್ತ ಹನುಮಂತ ದೇವರ ಸನ್ನಿಧಿಯಲ್ಲಿ ಪವಿತ್ರ ತೀರ್ಥಸ್ನಾನ

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL