ಕಲ್ಪ ಮೀಡಿಯಾ ಹೌಸ್ | ಜಾರ್ಜ್‌ಟೌನ್, ಗಯಾನಾ |
ಡಾ. ಶಶಿ ತರೂರ್, #Shashi Taroor ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ಸರ್ವಪಕ್ಷ ನಿಯೋಗದ ಸದಸ್ಯರು, ಗಯಾನಾ ಗಣರಾಜ್ಯದ ಉಪಾಧ್ಯಕ್ಷ ಘನತೆವೆತ್ತ ಭರತ್ ಜಗ್ದೇವ್ #Bharath Jagdev ಅವರನ್ನು ಭೇಟಿ ಮಾಡಿದ್ದು, ಈ ವೇಳೆ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನಿಲುವು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ#Tejaswi Surya ತಿಳಿಸಿದ್ದಾರೆ.
ಉಪಾಧ್ಯಕ್ಷ ಜಗ್ದೇವ್ ಅವರು ಈ ಹಿಂದೆ 12 ವರ್ಷಗಳ ಕಾಲ ಗಯಾನಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಪ್ರದೇಶದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು. ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಸ್ಪಷ್ಟವಾಗಿ ಖಂಡಿಸಿ, ಭಾರತದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು. ಭಾರತ-ಗಯಾನಾ ನಡುವೆ ಹಲವು ಕ್ಷೇತ್ರಗಳಲ್ಲಿನ ಸಹಯೋಗದ ಬಗ್ಗೆಯೂ ಈ ಸಂದರ್ಭದಲ್ಲಿ ಉಭಯ ನಾಯಕರು ಚರ್ಚಿಸಿದರು.

ಗಯಾನಾ ಹೊಸ ತೈಲ ನಿಕ್ಷೇಪಗಳನ್ನು ಕಂಡುಕೊಳ್ಳುತ್ತಿದ್ದು, ಶೇ. 30ರಷ್ಟು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಭಾರತೀಯ ವ್ಯವಹಾರಗಳಿಗೆ ಇಲ್ಲಿ ಅಪಾರ ಅವಕಾಶಗಳಿವೆ. ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸಮನ್ವಯದ ಈ ಕ್ಷೇತ್ರಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ.” ಎಂದು ತಿಳಿಸಿದರು.

“ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಲು ಮತ್ತು ಶಾಂತಿಯನ್ನು ಎತ್ತಿಹಿಡಿಯಲು ಜಗತ್ತು ಒಂದಾಗಬೇಕು. ಆಪರೇಷನ್ ಸಿಂದೂರ್ ನಂತಹ ನಿರ್ಣಾಯಕ ಕ್ರಮಗಳ ಮೂಲಕ ಭಾರತ ಈ ಜಾಗತಿಕ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಟೆಕ್ಸಿಲಾ, ಭಾರತ-ಗಯಾನಾ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿದೆ. 2010ರಿಂದ ಇಲ್ಲಿಯವರೆಗೆ 538ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಮತ್ತು 76 ಭಾರತೀಯ ಅಧ್ಯಾಪಕರು ಹಾಗೂ ಸಿಬ್ಬಂದಿಯನ್ನು ಇದು ಆತಿಥ್ಯ ವಹಿಸಿದೆ. 234 ಕ್ಕೂ ಹೆಚ್ಚು ಭಾರತೀಯ ಪದವೀಧರರು ಪ್ರಸ್ತುತ ಗಯಾನಾದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ” ಎಂದು ತಿಳಿಸಿದರು.

ಈ ಉಪಕ್ರಮವು ಭಯೋತ್ಪಾದನೆಯ ವಿರುದ್ಧ ಭಾರತದ ಬಲವಾದ ನಿಲುವನ್ನು ಜಗತ್ತಿಗೆ ತಲುಪಿಸಲು ಮತ್ತು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಜಾಗತಿಕ ಬೆಂಬಲವನ್ನು ಪಡೆಯಲು ಭಾರತ ಸರ್ಕಾರವು ಕೈಗೊಂಡ ಬಹು-ದೇಶಗಳ ಅಭಿಯಾನದ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post