ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಣಿಪಾಲ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಯಮ ಸಡಿಲ ಮಾಡಿ, ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ, ರಾಜ್ಯದೆಲ್ಲೆಡೆ ವೈನ್ ಸ್ಟೋರ್’ಗಳ ಮುಂದೆ ಜನರ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲದ ವೈನ್ ಸ್ಟೋರ್’ಗಳ ಮುಂದೆ ಹುಡುಗರಿಗಿಂತಲೂ ಹುಡುಗಿಯರೇ ಹೆಚ್ಚಾಗಿ ನಿಂತಿರುವುದು ಕಂಡು ಬಂದಿದೆ.
ಮಣಿಪಾಲದ ಪ್ರಮುಖ ರಸ್ತೆಯಲ್ಲಿರುವ ವೈನ್ ಸ್ಟೋರ್’ಗಳ ಮುಂದೆ ವಿದ್ಯಾರ್ಥಿನಿಯರೇ ಸಾಲುಗಟ್ಟಿ ನಿಂತು, ಮದ್ಯ ಖರೀದಿಸಿದ್ದು, ಈ ವೇಳೆ ಸಾಮಾಜಿಕ ಅಂತರವವನ್ನೂ ಸಹ ಸರಿಯಾದ ರೀತಿಯಲ್ಲಿ ಪಾಲಿಸಿಲ್ಲ ಎಂಬುದು ಗಮನಾರ್ಹ ಸಂಗತಿ.
ರಾಜ್ಯದಾದ್ಯಂತ ಇದೇ ಪರಿಸ್ಥಿತಿ
ಇನ್ನು, ರಾಜ್ಯದಾದ್ಯಂತ ಮತ್ತೆ ಆರಂಭವಾಗಿರುವ ಮದ್ಯದ ಅಂಗಡಿಗಳ ಮುಂದೆ ಗಂಡಸರು ಮಾತ್ರವಲ್ಲ ಹೆಂಗಸರೂ ಸಹ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದ್ದು, ನಾಗರಿಕ ಸಮಾಜವನ್ನು ಅಣಕಿಸುವಂತಿತ್ತು.
Get in Touch With Us info@kalpa.news Whatsapp: 9481252093





Discussion about this post