ಇಸ್ಲಾಮಾಬಾದ್: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರನ್ನು ಕಳೆದುಕೊಂಡ ನಂತರ ಪಾಕಿಸ್ಥಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಬಿಗಿ ನಿಲುವಿನಿಂದ ಕಂಗೆಟ್ಟು ಹೋಗಿರುವ ಶತ್ರುರಾರಾಷ್ಟ್ರ, ಶಾಂತಿಗಾಗಿ ಒಂದು ಅವಕಾಶ ನೀಡಿ ಎಂದು ಅಂಗಲಾಚುತ್ತಿದೆ.
ಈ ವಿಚಾರದಲ್ಲಿ ಭಾರತದ ಬಳಿ ಅಂಗಲಾಚುತ್ತಿರುವ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್, ಪುಲ್ವಾಮಾ ದಾಳಿ ವಿಚಾರದಲ್ಲಿ ಭಾರತ ಸಾಕ್ಷಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೆವೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ಆದರೆ, ಭಾರತದೊಂದಿಗಿನ ಶಾಂತಿಗಾಗಿ ಒಂದು ಅವಕಾಶ ನೀಡಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೆವೆ ಎಂದು ಬೇಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿದೆ ಎಂಬುದು ಮೇಲ್ನೊಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ನೇರ ಯುದ್ಧ ಘೋಷಣೆ ಮಾಡುವ ವಿಚಾರದಲ್ಲಿ ಮೋದಿ ಸರ್ಕಾರ ಮುಂದಾಗದೇ ಇದ್ದರೂ, ಅದಕ್ಕೆ ಪರ್ಯಾಯವಾದ ರಣತಂತ್ರ ರೂಪಿಸುತ್ತಿದೆ. ಪಾಕಿಸ್ಥಾನದ ಕುತಂತ್ರವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿ, ವಿಶ್ವದ ಮುಂದೆ ಅದನ್ನು ಏಕಾಂಗಿಯನ್ನಾಗಿಸಲು ಅಗತ್ಯ ಕಾರ್ಯತಂತ್ರ ಮಾಡುತ್ತಿದೆ.
Discussion about this post