ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ(ಎನ್’ಐಎ)ಗೆ ಸಾಕ್ಷಿ ದೊರೆತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಸ್ಫೋಟದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಹಿನ್ನೆಲೆಯಲ್ಲಿ ಕಳೆದ ವಾರ ಎನ್’ಐಎ ಕೈಗೆತ್ತಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ತಂಡಕ್ಕೆ, ಪಾಕ್ ವಿರುದ್ಧ ಸ್ಪಷ್ಟ ಸಾಕ್ಷಿಗಳು ದೊರೆತಿವೆ ಎಂದು ಹೇಳಲಾಗಿದೆ.
ಸ್ಫೋಟದ ಹೊಣೆ ಹೊತ್ತಿರುವ ಜೈಷ್ ಇ ಮೊಹಮದ್ ಉಗ್ರ ಸಂಘಟನೆಯದ್ದೆ ಕೃತ್ಯ ಎಂದು ಸಾಬೀತು ಮಾಡಲು, ಜೈಷ್ ಸಂಘಟನೆಗೆ ಪಾಕಿಸ್ಥಾನ ಹಾಗೂ ಅಲ್ಲಿನ ಸ್ಥಳೀಯರು ಸಂಪೂರ್ಣ ಸಹಕಾರ ನೀಡಿರುವ ಕುರಿತಾಗಿ ತನಿಖೆ ವೇಳೆ ಸಾಕ್ಷಿ ದೊರೆತಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟಿಯ ಮಾಧ್ಯಮದೊಂದಿಗೆ ಮಾತನಾಡಿರುವ ಉನ್ನತಾಧಿಕಾರಿಗಳು, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಹೆಜ್ಜೆ ಗುರುತುಗಳು ಇರುವುದಕ್ಕೆ ನಮಗೆ ಸ್ಪಷ್ಟ ಸಾಕ್ಷಿಗಳು ದೊರೆತಿವೆ. ಸ್ಫೋಟಗೊಳಿಸಿದ ಕಾರಿನಲ್ಲಿ ತುಂಬಿಸಲಾಗಿದ್ದ 25 ಕೆಜಿ ಆರ್’ಡಿಎಕ್ಸ್ ಗಡಿಯನ್ನು ದಾಟಿ ಬಂದಿದೆ ಎಂದರೆ ಅದಕ್ಕೆ ಸ್ಥಳೀಯರು ಹಾಗೂ ಪಾಕ್ ಬೆಂಬಲಿಗರ ಸಹಕಾರವಿಲ್ಲದೇ ಆಗಲು ಸಾಧ್ಯವಿಲ್ಲ. ಇಂತಹ ಕೃತ್ಯಕ್ಕೆ ಪಾಕ್ ಸಹಕಾರ ಇದೆ ಎಂಬದಕ್ಕೆ ನಮಗೆ ಸಾಕ್ಷಿ ದೊರೆದಿದ್ದು, ಇದರ ತನಿಖೆಯನ್ನು ಮುಂದುವರೆಸಿದ್ದೆವೆ ಎಂದಿದ್ದಾರೆ.
Discussion about this post