ಕಲ್ಪ ಮೀಡಿಯಾ ಹೌಸ್ | ಗೋಕರ್ಣ/ ಬೆಂಗಳೂರು |
ಭಾರತೀಯ ಭವ್ಯ ಪರಂಪರೆಯನ್ನು ಭಾವಿ ಪೀಳಿಗೆಯಲ್ಲಿ ಉಳಿಸಿ ಬೆಳೆಸುವ ಮಹತ್ಸಂಕಲ್ಪದೊಂದಿಗೆ ಶ್ರೀರಾಮಚಂದ್ರಾಪುರಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ 2023-24ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಗುರುಕುಲದಲ್ಲಿ ನಾಲ್ಕರಿಂದ ಹನ್ನೆರಡನೇ ತರಗತಿವರೆಗೆ ವಸತಿಯುತ ಶಿಕ್ಷಣ ಸೌಲಭ್ಯವಿದ್ದು, ಜಾತಿ ಮತಗಳ ಬೇಧವಿಲ್ಲದೇ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನವಿರುವ ದೇಶದ ಏಕೈಕ ಗುರುಕುಲ ಇದಾಗಿದ್ದು, ಪಠ್ಯದ ಜತೆಗೆ ಜೀವನ ಮೌಲ್ಯಗಳಿಗೂ ಒತ್ತು ನೀಡಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಇಲ್ಲಿನ ಶಿಕ್ಷಣ ನೆರವಾಗಲಿದೆ.

ವಿವರಗಳಿಗೆ ದೂರವಾಣಿ: 9449495247, 9449595248 ಸಂಪರ್ಕಿಸಬಹುದು. ಇ-ಮೇಲ್: office@vishnuguptavvv.
ವೆಬ್‍ಸೈಟ್: www.vishnuguptavv.












Discussion about this post