ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಪಾಶ್ಚಿಮಾತ್ಯ ಪ್ರವಾಹ ನಮ್ಮ ಸನಾತನ ಸಂಸ್ಕøತಿಯನ್ನು ಕೊಚ್ಚಿಕೊಂಡು ಹೋಗುತ್ತಿದೆ. ಕೇವಲ ವಿದ್ಯೆಗಳು ಮಾತ್ರವಲ್ಲ, ಉಡುಗೆ- ತೊಡುಗೆ, ಭಾಷೆ, ಸಂಸ್ಕøತಿ-ಸಂಸ್ಕಾರ ಕೂಡಾ ನಶಿಸಿಹೋಗುತ್ತಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾ
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 30ನೇ ದಿನವಾದ ಶುಕ್ರವಾರ ಬೆಂಗಳೂರಿನ ಲೆಕ್ಕಪರಿಶೋಧಕ ರಾಮಕೃಷ್ಣ ಹೆಗಡೆ ಕಲ್ಲಬ್ಬೆ ಅವರಿಂದ ಸರ್ವಸೇವೆ ಸ್ವೀಕರಿಸಿ ಸ್ವಭಾಷಾ ಸಂದೇಶ ನೀಡಿದರು.

ಪಾಶ್ಚಾತ್ಯ ಪ್ರವಾಹವನ್ನು ಎದುರಿಸಿ ಗಟ್ಟಿಯಾಗಿ ನಿಂತು ನಮ್ಮತನ ಮೆರೆಯಬೇಕು; ಜೀವನ ತನ್ನತನದತ್ತ ತಿರುಗಬೇಕು. ನಮ್ಮ ಪೂರ್ವಜರು ನಮ್ಮನ್ನು ಒಪ್ಪುವಂತೆ ಬದುಕುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಪರಕೀಯ ಶಬ್ದಗಳು ರೋಗಾಣುಗಳಂತೆ ನಮ್ಮ ಭಾಷೆಯಲ್ಲಿ ನುಸುಳಿವೆ. ಇದರಿಂದ ನಮ್ಮತನವೇ ನಶಿಸಿ ಹೋಗುವಂತಾಗಿದೆ ಎಂದರು. ಪಾಶ್ಚಿಮಾತ್ಯ ಪ್ರವಾಹ ನಮ್ಮನ್ನು ಕೊಚ್ಚಿಕೊಂಡು ಹೋಗದಂತೆ ತಡೆದು ಗಟ್ಟಿಯಾಗಿ ಎದುರಿಸಿ, ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಭಾಷೆಯನ್ನು ಉಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ ಕರೆಂಟ್ ಎಂಬ ಪದ ಕೈಬಿಡಲು ಕರೆ ನೀಡಿದರು. ಕರೆಂಟ್ ಎಂದರೆ ವರ್ತಮಾನ ಅಥವಾ ಪ್ರವಾಹ ಎಂಬ ಅರ್ಥ. ಆದರೆ ಕನ್ನಡದ ಮಧ್ಯೆ ವಿದ್ಯುತ್ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ.

ಕನ್ನಡ ಉಳಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಸಿನ ಸಂಘ ಎಂಬ ಸಂಘ ಅಸ್ತಿತ್ವದಲ್ಲಿತ್ತು. ಒಂದು ಇಂಗ್ಲಿಷ್ ಪದ ಬಳಕೆಗೆ ಒಂದು ರೂಪಾಯಿ ದಂಡ ವಿಧಿಸುವ ಒಂದು ಕನ್ನಡಪ್ರೇಮಿಗಳ ಸಂಘ ಅದಾಗಿತ್ತು. ಹೀಗೆ ಕನ್ನಡವನ್ನು ಉಳಿಸುವ ಪ್ರಯತ್ನ ಹಿಂದೆಯೂ ನಡೆದಿತ್ತು ಎಂದು ಉಲ್ಲೇಖಿಸಿದರು.
ಒಂದೊಮ್ಮೆ ನಿರಂತರವಾಗಿ ಚಾತುರ್ಮಾಸ್ಯ ನಡೆಯುತ್ತಿದ್ದ ನೆಲದಲ್ಲಿ ಗುರುಪರಂಪರೆಯ ಸುಳಿವೇ ಇಲ್ಲದ ಪರಿಸ್ಥಿತಿ ಉಂಟಾಗಿತ್ತು. ಇದೀಗ ಮತ್ತೆ ಮಲ್ಲಿಕಾರ್ಜುನ ದೇವಾಲಯ ಜೀರ್ಣೋದ್ಧಾರವಾಗಿದೆ. ಪುನರ್ನವ, ಪುನರುತ್ಥಾನ ಆರಂಭವಾಗಿದೆ. ಮತ್ತೆ ಮಠ ಪುಣ್ಯ ನೆಲದಲ್ಲಿ ತಲೆ ಎತ್ತಿ ನಿಂತಿದೆ. ಗುರುದೃಷ್ಟಿ ಅರಸಿ ಬಂದ ಎಲ್ಲ ಶಿಷ್ಯಭಕ್ತರಿಗೆ ರಾಮನ ಪರಮಾನುಗ್ರಹ ಲಭ್ಯವಾಗಲಿ ಎಂದು ಆಶೀರ್ವದಿಸಿದರು.
ದೇಶಭಂಡಾರಿ ಸಮಾಜ ಇಂದು ಕಡೆಗಣಿಸಲ್ಪಟ್ಟಿದೆ. ತಲೆಮಾರುಗಳಿಂದ ಪೀಠದ ಸೇವೆ ಮಾಡುತ್ತ ಬಂದಿರುವ ಮರಾಠಿ ಮತ್ತು ದೇಶಭಂಡಾರಿ ಸಮಾಜಕ್ಕೆ ಸುವರ್ಣ ಕಾಲ ಬರಲಿ ಎಂದು ಆಶಿಸಿದರು. ಮಠದ ಅಭ್ಯುದಯಕ್ಕೆ ರಾಮಾನುಗ್ರಹ ಹಾಗೂ ಕಾರ್ಯಕರ್ತರ ಶ್ರಮ, ಸಮರ್ಪಣೆ ಕಾರಣ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post