No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಭಕ್ತಿಮಾರ್ಗದಿಂದ ಮುಕ್ತಿ ಖಚಿತ: ರಾಘವೇಶ್ವರ ಭಾರತೀ ಶ್ರೀ

kalpa News by kalpa News
August 9, 2024
in ಉತ್ತರ ಕನ್ನಡ
0
ಭಕ್ತಿಮಾರ್ಗದಿಂದ ಮುಕ್ತಿ ಖಚಿತ: ರಾಘವೇಶ್ವರ ಭಾರತೀ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಭಕ್ತಿಮಾರ್ಗವನ್ನು ಅನುಸರಿಸಿದವರಿಗೆ ಮುಕ್ತಿ ಖಚಿತ. ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ #Raghaweshwara Bharathi Shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಗುರುವಾರ ಜೀವಯಾನ ಮಾಲಿಕೆಯಲ್ಲಿ ‘ಯಮನನ್ನು ಗೆದ್ದವರುಂಟೇ’ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.
ಅಮೃತತ್ವವನ್ನು ಕಳೆದುಕೊಂಡ ಪ್ರತಿ ಜೀವವೂ ಅಮರತ್ವಕ್ಕಾಗಿ ಹಪಹಪಿಸುತ್ತಿರುತ್ತದೆ. ಇದು ಪ್ರತಿ ಜೀವದ ಆಳ, ಗಾಢ ಬಯಕೆ. ಶಾಶ್ವತವಾಗಿ ಬದುಕಬೇಕು ಎಂಬ ಉದ್ದೇಶದಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಬದುಕಲು ಬಯಸುವವರು ಎಷ್ಟು ಕಾಲ ಬದುಕಿದರೂ, ಅನಿವಾರ್ಯವಾದ ಮೃತ್ಯುವನ್ನು ಮುಂದೂಡುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ ಎಂದು ಹೇಳಿದರು.

Also read: ವೈಜ್ಞಾನಿಕ ಚಿಂತನೆಯತ್ತ ಹೆಜ್ಜೆಹಾಕಲು ವಿಜ್ಞಾನದ ಅರಿವು ಅಗತ್ಯ: ಜ್ಞಾನೇಶ್ ಅಭಿಪ್ರಾಯ

ನಮಗೆ ಕ್ಲೇಶವಾದ್ದನ್ನು ಬೇರೆಯವರಿಗೆ ಮಾಡಬಾರದು. ಅಮರತ್ವಕ್ಕೆ ತಪಸ್ಸು ಮಾಡಿದ ರಾವಣ ಬೇರೆಯವರನ್ನು ಕ್ರೂರವಾಗಿ ಸಾಯಿಸಲು ಬಯಸುತ್ತಾನೆ. ಇದೇ ರಾಕ್ಷಸತ್ವ. ಇಂಥ ರಾವಣ, ಯಮನ ಜತೆ ಯುದ್ಧಕ್ಕೆ ಮುಂದಾದ. ವ್ಯವಸ್ಥೆ ಏರ್ಪಡಿಸುವ ಮತ್ತು ವ್ಯವಸ್ಥೆಯ ಭಂಜಕರ ನಡುವಿನ ಸಂಘರ್ಷ ಇದಾಗಿತ್ತು ಎಂದು ವಿವರಿಸಿದರು.

Kalahamsa Infotech private limitedಮೃತ್ಯುಕಾರಕವಾದ ಕಾಲದಂಡದೊಂದಿಗೆ ರಥಾರೂಢನಾಗಿ ಯಮ ಯುದ್ಧಕ್ಕೆ ಸಜ್ಜಾಗುತ್ತಾನೆ. ಕಾಲಕ್ಕೆ ಬಂದ ಕ್ರೋಧದಿಂದ ದೇವರೂ ಭೀತಗೊಂಡರು. ಯಮನ ಪರಿವಾರ ನೋಡಿದ ರಾವಣನ ಅಮಾತ್ಯರು ಯುದ್ಧ ಅಸಾಧ್ಯ ಎಂದು ಹೇಳಿ ಕಾಲಿಗೆ ಬುದ್ಧಿ ಹೇಳಿದರು. ಆದರೆ ರಾವಣ ಧೈರ್ಯದಿಂದ ಕಾಲನನ್ನು ಎದುರಿಸಿದ. ರಾವಣನ ಮರ್ಮಸ್ಥಾನಗಳನ್ನು ಯಮ ಕತ್ತರಿಸಿದ. ರಾವಣ ನಿಶ್ಚೇತನಾಗಿ ಬೀಳುತ್ತಾನೆ. ಎಚ್ಚೆತ್ತುಕೊಂಡು ಯಮನ ಮೇಲೆ ಬಾಣಪ್ರಹಾರ ಮಾಡಿದ. ಘೋರ ಕದನದಲ್ಲಿ ಯಮನ ಮುಂದೆ ರಾವಣದ ಆಟ ನಡೆಯಲಿಲ್ಲ. ಆದರೆ ವರಬಲ ಇದ್ದ ರಾವಣ ಸಾಯಲಿಲ್ಲ ಎಂದು ಬಣ್ಣಿಸಿದರು.

ಇಡೀ ಯಮಲೋಕವನ್ನು ರಾವಣ ಬಾಣಗಳಿಂದ ಮುಚ್ಚಿದಾಗ ಸಿಟ್ಟುಗೊಂಡು ಬಿಟ್ಟ ಉಸಿರಿನಿಂದ ಧೂಮಕರಾಳವಾದ ಧೂಪಾಗ್ನಿಗೆ ಮೃತ್ಯು ಹಾಗೂ ಕಾಲ ಸಂತಸಗೊಂಡರು. ಮೂರು ಲೋಕವನ್ನೂ ಮುಕ್ಕುವ ಸಾಮಥ್ರ್ಯದ ಮೃತ್ಯು ಯಮನಲ್ಲಿ ರಾವಣನನ್ನು ಕೊಲ್ಲಲು ಅವಕಾಶ ಬೇಡುತ್ತಾನೆ. ಆದರೆ ಅದಕ್ಕೊಪ್ಪದ ಯಮ ತಾನೇ ರಾವಣನನ್ನು ಸಾಯಿಸುತ್ತೇನೆ ಎಂದು ಹೇಳಿ ಅಮೋಘವಾದ ಕಾಲದಂಡಕ್ಕೆ ಕೈಹಾಕುತ್ತಾನೆ. ಕಾಲದಂಡದ ಪ್ರಯೋಗದಿಂದ ಸಾಯದವರು ಯಾರೂ ಇಲ್ಲ ಎಂದು ಹೇಳಿದರು.

https://kalpa.news/wp-content/uploads/2024/04/VID-20240426-WA0008.mp4

ಯಮ ರಾವಣನ ಮೇಲೆ ಕಾಲದಂಡವನ್ನು ಎತ್ತಿದಾಗ ಬ್ರಹ್ಮ ಪ್ರತ್ಯಕ್ಷನಾಗಿ ರಾವಣನನ್ನು ಕೊಲ್ಲದಂತೆ ಆದೇಶ ನೀಡುತ್ತಾನೆ. ನೀನು ಕಾಲದಂಡ ಎತ್ತಿದರೆ ರಾವಣ ಸಾಯುತ್ತಾನೆ. ಇದರಿಂದ ಸೃಷ್ಟಿ ಅಥವಾ ಬ್ರಹ್ಮ ಸುಳ್ಳಾಗುತ್ತದೆ ಎಂದು ಬ್ರಹ್ಮ ಹೇಳುತ್ತಾನೆ. ಲೋಕದ ಪಿತಾಮಹನನ್ನು ಗೌರವಿಸಿ, ಯಮ ಸಂಯಮ ಸಾಧಿಸಿ, ದಂಡವನ್ನು ಹಿಂದಕ್ಕೆ ಸೆಳೆಯುತ್ತಾನೆ. ಯಮ ತನ್ನ ಪರಿವಾರದೊಂದಿಗೆ ಅದೃಶ್ಯವಾದಾಗ ರಾವಣ ಗೆದ್ದೆನೆಂದು ಬೀಗಿದ. ರಾವಣನಿಗೆ ಸಾವಿನ ಕಾಲ ಸನ್ನಿಹಿತವಾಗದ ಕಾರಣ ರಾವಣ ಸಾಯಲಿಲ್ಲ ಎಂದು ವಿವರಿಸಿದರು.

ಯಮನಿಗೆ ಬೆಚ್ಚದ ಬೆದರದ ರಾವಣ, ರಾಮನನ್ನು ನೋಡುವ ಮೊದಲೇ ರಾಮ-ಲಕ್ಷ್ಮಣರ ಬಗ್ಗೆ ಭಯ ಹೊಂದಿದ್ದ. ಲಂಕೆಯಲ್ಲಿ ನಡೆಯುತ್ತಿದ್ದ ರಾಮ-ರಾವಣರ ಸಮರದಲ್ಲಿ ಹಲವು ಮಂದಿ ರಾಕ್ಷಸರು ಮೃತಪಟ್ಟರೂ, ಕಪಿಸೈನ್ಯದ ಯಾರೂ ಸಾಯಲಿಲ್ಲ. ಯಮನನ್ನು ಗೆದ್ದ ಅಹಂಕಾರದಲ್ಲಿದ್ದ ರಾವಣನಿಗೆ ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾವಿನ ಸರಮಾಲೆ ರಾವಣನಿಗೆ ಎದುರಾಯಿತು. ಇಂದ್ರಜಿತು ಅಳಿದಾಗ ರಾವಣ ತತ್ತರಿಸಿದ. ಯಮಧರ್ಮನನ್ನು ಒಪ್ಪಿ, ಆತನೇ ಸರ್ವಶ್ರೇಷ್ಠ ಎಂದು ರಾವಣ ಕೂಡ ಒಪ್ಪಿಕೊಂಡದ್ದನ್ನು ಉದಾಹರಿಸಿದರು.

ರಾಮ-ರಾವಣರ ಯುದ್ಧದ ಕೊನೆಯಲ್ಲಿ ರಾವಣ ಸಂಹಾರಕ್ಕೆ ರಾಮ ಯುದ್ಧ ಮಾಡಿದರೆ, ಸಾವಿನ ಪ್ರತೀಕ್ಷೆಯಿಂದ ರಾವಣ ಯುದ್ಧ ಮಾಡುತ್ತಿದ್ದ. ರಾಮನ ಬ್ರಹ್ಮಾಸ್ತ್ರ ರಾವಣದ ಎದೆಯನ್ನು ಬೇಧಿಸುತ್ತದೆ. ಆ ಬಾಣವನ್ನು ಯಮನಂತಿತ್ತು ಎಂದು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಸಾವನ್ನು ರಾವಣನ ದಾರಿಯಿಂದ ಗೆಲ್ಲಲಾಗದು ಎನ್ನುವುದನ್ನು ರಾಮಾಯಣ ನಿರೂಪಿಸಿದೆ. ಹೀಗೆ ರಾವಣನ ಸಾವು ಕೂಡಾ ಒಂದು ಪಾಠ ಎಂದು ಬಣ್ಣಿಸಿದರು.

ಸೋಲು ಕೂಡಾ ಹಿನ್ನಡೆಯಲ್ಲ; ಅದು ಸೋಪಾನ, ಮಾಕಾರ್ಂಡೇಯನ ಮಾರ್ಗದಿಂದ ಯಮನನ್ನು ಗೆಲ್ಲಬಹುದು ಎನ್ನುವುದನ್ನು ನಮ್ಮ ಪುರಾಣ ತೋರಿಸಿಕೊಟ್ಟಿದೆ. ಅಂತರಂಗದಿಂದ ಶಿವನನ್ನು ತಬ್ಬಿಕೊಂಡಾಗ ಯಮನ ಭಯವಿಲ್ಲ. ಕಾಲಕಾಲನನ್ನು ಆಶ್ರಯಿಸಿದರೆ ಯಮನಿಂದ ಮುಕ್ತಿ ಪಡೆಯಬಹುದು. ಶಕ್ತಿಮಾರ್ಗದಿಂದ ಆಗದ್ದನ್ನು ಮಾರ್ಕಾಂಡೇಯ ಭಕ್ತಿಮಾರ್ಗದಿಂದ ಗೆದ್ದು ತೋರಿಸಿದ ಎಂದು ಹೇಳಿದರು.

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ಜಿ.ಎಸ್.ಹೆಗಡೆ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಪುಳು, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಕೇಂದ್ರೀಯ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಕಾರ್ಯದರ್ಶಿ ರವೀಂದ್ರ ಭಟ್ ಸೂರಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news                                                     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaweshwara Bharathi ShriUttara Kannadaಗೋಕರ್ಣಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ
Share231Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವೈಜ್ಞಾನಿಕ ಚಿಂತನೆಯತ್ತ ಹೆಜ್ಜೆಹಾಕಲು ವಿಜ್ಞಾನದ ಅರಿವು ಅಗತ್ಯ: ಜ್ಞಾನೇಶ್ ಅಭಿಪ್ರಾಯ

Next Post

ಗಮನಿಸಿ! ಆ.10ರಂದು ಶಿವಮೊಗ್ಗದ ಈ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ

kalpa News

kalpa News

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಆ.10ರಂದು ಶಿವಮೊಗ್ಗದ ಈ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL