ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಬದುಕಿನಲ್ಲಿ ಒಂದು ದಿನವನ್ನು ಆದರ್ಶವಾಗಿಸಲು ಸಾಧ್ಯವಾದರೆ ಇಡೀ ಜೀವನ ಆದರ್ಶವಾಗಲು ಸಾಧ್ಯ. ಹೀಗೆ ಅಸಾಧ್ಯ ಎನಿಸಿದ್ದನ್ನು ಸಾಧಿಸಲು ದಿನಚರಿಯೇ ಸಾಧನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾ
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಗುರುವಾರ ‘ದಿನಚರ್ಯ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ನಾನು ಇಂದು ತಪ್ಪು ಮಾಡುವುದಿಲ್ಲ ಎಂಬ ವ್ರತವನ್ನು ಪಾಲಿಸಿದರೆ ಇಡೀ ಜೀವನವನ್ನು ತಪ್ಪಿಲ್ಲದೇ ಸಾಗಿಸಲು ಸಾಧ್ಯ ಎಂದರು.

ದೂರಯಾತ್ರೆಯ ಬದುಕಿನಲ್ಲಿ ದಿನಗಳೇ ಹೆಜ್ಜೆಗಳು. ಒಂದು ಹೆಜ್ಜೆ ತಪ್ಪಿದರೂ ಬದುಕಿನಲ್ಲಿ ನಮ್ಮನ್ನು ಬೇರೆಡೆಗೆ ಒಯ್ಯಬಹುದು. ಪಥ ತಪ್ಪಿದರೆ ಗುರಿ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಹೆಜ್ಜೆಯನ್ನೂ ಸರಿಯಾಗಿ ಇಡುವುದು ಅಗತ್ಯ; ಅಂತೆಯೇ ಗೋಡೆ ಸರಿಯಾಗಬೇಕಾದರೆ ಇಟ್ಟಿಗೆ ಜೋಡಿಸುವುದು ಸರಿಯಾಗಬೇಕು. ಒಂದು ಇಟ್ಟಿಗೆಯ ಮೇಲೆ ಮತ್ತೊಂದು ಓರೆಯಾದರೆ ಇಡೀ ಗೋಡೆಯೇ ಓರೆಯಾಗುತ್ತದೆ. ಜೀವನದಲ್ಲೂ ಮಾಡುವ ಒಂದೊಂದು ತಪ್ಪೂ ಜೀವನ ಓರೆಕೋರೆಯಾಗಲು ಕಾರಣವಾಗುತ್ತದೆ ಎಂದು ಹೇಳಿದರು.

ಸನ್ಯಾಸಿಯಾದವನು ಎಂಟು ತುತ್ತು, ವಾನಪ್ರಸ್ಥರು ಹದಿನಾರು, ಗೃಹಸ್ಥರು ಮೂವತ್ತೆರಡು ತುತ್ತು ಆಹಾರ ಸೇವಿಸಬೇಕು ಎಂಬ ಉಲ್ಲೇಖ ಪುರಾಣಗಳಲ್ಲಿದೆ. ಬ್ರಹ್ಮಚಾರಿಗಳು ಯಥೇಚ್ಛ ಆಹಾರ ಸೇವಿಸಬಹುದು. ಆಹಾರ ಹಿತ ಮಿತವಾಗಬೇಕಾದರೆ ದಿನಚರಿಯಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಡಿದರು.
ಬೆಳಿಗ್ಗೆ ಎದ್ದತಕ್ಷಣ ಮೊಸರು, ತುಪ್ಪ, ಕನ್ನಡಿ, ಬಿಳಿ ಸಾಸಿವೆ, ಬಿಲ್ವಪತ್ರೆ, ಗೋರೂಚನ, ಮಾಲೆಗಳ ದರ್ಶನ- ಭಾವಸ್ಪರ್ಶನ ಶುಭಕರ. ಧೀರ್ಘಾಯುಷ್ಯದ ಇಚ್ಛೆ ಇದ್ದಲ್ಲಿ ತುಪ್ಪದಲ್ಲಿ ತನ್ನ ಮುಖ ನೋಡಿಕೊಳ್ಳಬೇಕು. ಅದು ಶುಭದಿನದ ಹಾದಿಗೆ ಹೂವು ಚೆಲ್ಲಿದಂತೆ ಎಂಬ ಯೋಗ ರತ್ನಾಕರದ ಸಾಲುಗಳನ್ನು ಉಲ್ಲೇಖಿಸಿದರು.

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿದ್ವಾನ್ ಸತ್ಯನಾರಾಯಣ ಶರ್ಮಾ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ, ಪರಂಪರಾ ಗುರುಕುಲ ಪ್ರಾಚಾರ್ಯ ನರಸಿಂಹ ಭಟ್, ಶ್ರೀಕಾರ್ಯದರ್ಶಿ ಮಧು ಜಿ.ಕೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post