ಕಲ್ಪ ಮೀಡಿಯಾ ಹೌಸ್ | ಗೊಂಡಾ |
ಚಂಡೀಗಢ ದಿಬ್ರುಗಢ ಎಕ್ಸ್’ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿದ್ದು, ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಬಳಿಯಲ್ಲಿ ನಡೆದಿದೆ.
VIDEO | A few bogies of Dibrugarh Express derailed near UP’s Gonda railway station earlier today. Details awaited. pic.twitter.com/SfJTfc01Wp
— Press Trust of India (@PTI_News) July 18, 2024
ಮೋತಿಗಂಜ್- ಜಿಲ್ಹಾಹಿ ರೈಲು ನಿಲ್ದಾಣಗಳ ನಡುವೆ 15904 ಸಂಖ್ಯೆಯ ಚಂಡೀಗಢ- ದಿಬ್ರುಗಢ ಎಕ್ಸ್’ಪ್ರೆಸ್ ರೈಲು ಹಳಿತಪ್ಪಿದ್ದು, ಈ ವೇಳೆ ರೈಲಿನ ಹಲವು ಬೋಗಿಗಗಳಿಗೆ ಹಾನಿಯಾಗಿದೆ.
ಬುಧವಾರ ರಾತ್ರಿ 11.35ಕ್ಕೆ ಚಂಡೀಗಢ ನಿಲ್ದಾಣದಿಂದ ಹೊರಟಿದ್ದ ರೈಲು ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು. ಮಾರ್ಗಮಧ್ಯೆ ಹಲವು ಕೋಚ್’ಗಳು ಹಳಿ ತಪ್ಪಿದ ಪರಿಣಾಮ ದುರಂತರ ಸಂಭವಿಸಿದೆ.
Also read: ಹಾಸನ | ಚನ್ನರಾಯಪಟ್ಟಣ ವಾರ್ಡ್’ಗಳಿಗೆ ನಾಮಫಲಕ ಅಳವಡಿಸಿ | ವರುಣ್ ಚಕ್ರವರ್ತಿ ಮನವಿ
ಗೋಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಚರಣೆ ಮುಂದುವರಿದಿದೆ.
ಪ್ರಯಾಣಿಕರು ತಮ್ಮ ಸರಂಜಾಮುಗಳನ್ನು ಹಿಡಿದುಕೊಂಡು ಹಳಿಯ ಬದಿಗಳಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post