ಕಲ್ಪ ಮೀಡಿಯಾ ಹೌಸ್ | ಚನ್ನರಾಯಪಟ್ಟಣ(ಹಾಸನ) |
ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್’ಗಳಿಗೆ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿ ಅವರಿಗೆ ಕಾಂಗ್ರೆಸ್ ಯುವ ಮುಖಂಡ ವರುಣ್ ಚಕ್ರವರ್ತಿ ಮನವಿ ಮಾಡಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಹಾಸನ ನಗರಸಭೆ ವತಿಯಿಂದ ಎಲ್ಲಾ ವಾರ್ಡ್’ಗಳಲ್ಲಿ ನಾಮಫಲಕ ಅಳವಡಿಸಿರುವಂತೆ ಚನ್ನರಾಯಪಟ್ಟಣ ತಾಲೂಕು 23 ವಾರ್ಡ್’ಗಳಿಗೂ ರಸ್ತೆ ಹೆಸರು, ವಾರ್ಡ್ ನಂಬರ್ ಬೋರ್ಡ್ ಅಳವಡಿಸುವುದು ಅವಶ್ಯವಾಗಿದೆ ಎಂದಿದ್ದಾರೆ.
Also read: ಶಿವಮೊಗ್ಗ | ಮುಂದುವರೆದ ಭಾರೀ ಮಳೆ | 4 ಮನೆ ಗೋಡೆ ಕುಸಿತ
ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಪುರಸಭೆಗೆ ಅರ್ಥವಾಗದ ವಿಷಯವೇನಲ್ಲ. ಪ್ರತಿನಿತ್ಯ ಸಾವಿರಾರು ಮಂದಿ ಚನ್ನರಾಯಪಟ್ಟಣಕ್ಕೆ ವ್ಯಾಪಾರ ವಹಿವಾಟು ಇತರೆ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಅವರಿಗೆ ಬೇಕಾದ ವಿಳಾಸ ಹುಡುಕಲು ಪರದಾಡುತ್ತಾರೆ. ಹಾಲಿ ವಾಸ ಇರುವ ನಿವಾಸಿಗಳಿಗೆ ಬಹುತೇಕ ಯಾವ ವಾರ್ಡಿನಲ್ಲಿ ಇದ್ದೇವೆ ಎಂಬುದು, ಅವು ಯಾವ ರಸ್ತೆಯಲ್ಲಿ ಇದ್ದೇವೆ ಎಂಬುದು ಗೊಂದಲ ಗೂಡಾಗಿದೆ. ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್’ಗಳಲ್ಲಿ ಮತ್ತು ರಸ್ತೆಗಳಲ್ಲಿ ವಾರ್ಡ್ ವಿವರ ತಿಳಿಸುವ ಹೆಸರು ಇರುವುದಿಲ್ಲ ಎಂದಿದ್ದಾರೆ.
ಈ ಹಿಂದೆ ಅಳವಡಿಸಲಾಗಿದ್ದ ನಾಮಫಲಕಗಳು ನಶಿಸಿಹೋಗಿವೆ. ಇದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ವಾರ್ಡ್’ಗಳಲ್ಲಿ ಮಾಹಿತಿ ಫಲಕಗಳನ್ನು ಶೀಘ್ರ ಅಳವಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಜಬಿ, ರೈತ ಸಂಘದ ರವಿ, ಪ್ರೇಮ, ಸೀನ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post