ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಮಂಗಳೂರು-ಸುಬ್ರಹ್ಮಣ್ಯ ನಡುವಿನ ಪ್ಯಾಸೆಂಜರ್ ರೈಲುಗಳನ್ನು ಪ್ರಾಯೋಗಿಕವಾಗಿ ನೇರಳಕಟ್ಟೆ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ಮಾಹಿತಿ ನೀಡಿದ್ದು, ವಿವರ ಇಂತಿದೆ.
2026ರ ಜನವರಿ 26ರ ಇಂದಿನಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 56627/56628 #MangaloreCentral ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ರೈಲಿಗೆ ನೇರಳಕಟ್ಟೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ನಿಮಿಷದ ನಿಲುಗಡೆಯನ್ನು ನೀಡಲು ನಿರ್ಧರಿಸಲಾಗಿದೆ.
ಮಂಗಳೂರು ಸೆಂಟ್ರಲ್’ನಿಂದ #SubrahmanyaRoad ಸುಬ್ರಹ್ಮಣ್ಯ ರೋಡ್ ಗೆ ತೆರಳುವ ರೈಲು (ಸಂಖ್ಯೆ 56627) ಸಂಜೆ 06:49ಕ್ಕೆ ನೇರಳಕಟ್ಟೆ ನಿಲ್ದಾಣಕ್ಕೆ ಬಂದು, 06:50ಕ್ಕೆ ಪ್ರಯಾಣ ಮುಂದುವರೆಸಲಿದೆ. ಅದೇ ರೀತಿ ಸುಬ್ರಹ್ಮಣ್ಯ ರೋಡ್’ನಿಂದ ಮಂಗಳೂರು ಸೆಂಟ್ರಲ್ ಗೆ ಮರಳುವ ರೈಲು (ಸಂಖ್ಯೆ 56628) ರಾತ್ರಿ 09:41ಕ್ಕೆ ನೇರಳಕಟ್ಟೆ ನಿಲ್ದಾಣಕ್ಕೆ ಆಗಮಿಸಿ, 09:42ಕ್ಕೆ ಅಲ್ಲಿಂದ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















