ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗಾಂಧಿನಗರ: ವಿವಿಧ ರಾಜ್ಯಗಳಲ್ಲಿ ಹಲವು ನಗರಗಳ ಹೆಸರನ್ನು ಬದಲಿಸಿ ಐತಿಹಾಸಿಕ ಹೆಜ್ಜೆಯನ್ನಿರಿಸಿದ್ದ ಬಿಜೆಪಿ ಸರ್ಕಾರ ಈಗ ಡ್ರಾಗನ್ ಫ್ರೂಟ್ ಹೆಸರನ್ನು ಬದಲಾವಣೆ ಮಾಡಿದೆ.
ಈ ಕುರಿತಂತೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆದೇಶ ಹೊರಡಿಸಿದ್ದು, ಡ್ರಾಗನ್ ಫ್ರೂಟ್’ನ ಹೆಸರನ್ನು ಕಮಲಂ ಎಂದು ಬದಲಾವಣೆ ಮಾಡಿದ್ದಾರೆ.
ಗುಜರಾತ್‌ನ ಕಚ್ಛ್, ನವಸಾರಿ ಮತ್ತು ಇತರ ಭಾಗಗಳಲ್ಲಿನ ರೈತರು ಡ್ರ್ಯಾಗನ್ ಹಣ್ಣನ್ನು ಬೆಳೆಯುತ್ತಿದ್ದಾರೆ. ಹೀಗಾಗಿ, ಇದಕ್ಕೆ ಸ್ಥಳೀಯ ಹೆಸರು ಇರಬೇಕು ಎಂದು ರೈತರು ಕೋರಿದ್ದರು. ಹೀಗಾಗಿ, ಹೆಸರು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಕಮಲಂ ಎಂಬ ಪದವು ಸಂಸ್ಕೃತ ಪದವಾಗಿದ್ದು, ಇದು ಕಮಲದ ಹೂವಿನಂತೆಯೇ ಆಕಾರ ಹೊಂದಿದೆ. ಆದ್ದರಿಂದ ನಾವು ಇದನ್ನು ಕಮಲಂ ಎಂದು ಕರೆಯಲು ನಿರ್ಧರಿಸಿದ್ದೇವೆ. ಹಣ್ಣಿನ ಮರುನಾಮಕರಣದ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post