ಭದ್ರಾವತಿ: ಶಾಸಕರ ಅಧಿಕಾರದ ಅವಧಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅವಶ್ಯವಿದ್ದಲ್ಲಿ ಸರಕಾರದ ಅನುದಾನ ನೀಡಿದ್ದೇನೆ ವಿನಃ ನನ್ನ ಸ್ವಂತ ಹಣವಲ್ಲ. ನೀಡಿರುವ ಅನುದಾನವು ಗುಣಮಟ್ಟದ ಕಾಮಗಾರಿಯೊಂದಿಗೆ ಸದ್ಬಳಕೆಯಾಗಬೇಕೆಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.
ಹಳೇನಗರದ ಪತ್ರಿಕಾ ಭವನದಲ್ಲಿ 10 ಲಕ್ಷ ರೂ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಭವನದ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಅವಧಿಯಲ್ಲಿ ನೀಡಿರುವ ಅನುದಾನವು ಸಮಾಜದ ಒಳಿತಿಗಾಗಿ ನೀಡಲಾಗಿದೆ. ಅಂದು ನೀಡಿದ ಅನುದಾನಗಳಿಗೆ ಹಾಲಿ ಶಾಸಕರು ಎಲ್ಲೆಡೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಹಣ ನೀಡುವುದು ಮುಖ್ಯವಲ್ಲ. ಅದು ಸದ್ಭಳಕೆ ಆದಾಗ ಮಾತ್ರ ಸಮಾಜ ಉದ್ದಾರ ಸಾಧ್ಯವಾಗುತ್ತದೆ. ಪತ್ರಿಕಾ ಭವನವು ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಗೆ ನೀಡಿರುವ ಅನುದಾನಗಳಿಂದ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳು ನಿಗದಿತ ವೇಳೆಗೆ ಪೂರ್ಣಗೊಳ್ಳಲಿ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಒಳ್ಳೆಯ ಹೆಸರುಗಳಿಸಲಿ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಬಾಬು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಕೆ.ಎನ್. ಶ್ರೀಹರ್ಷ ರವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರೆ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಹರ್ಷ ಸ್ವಾಗತಿಸಿ, ಗಂಗಾನಾಯ್ಕ ವಂದಿಸಿದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಸುಬ್ಬಾರೆಡ್ಡಿ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಎಚ್.ಕೆ. ಶಿವಶಂಕರ್, ಆನಂದಕುಮಾರ್, ಬದ್ರಿನಾರಾಯಣ, ಸುಭಾಶ್‌ರಾವ್ ಸಿಂದ್ಯಾ, ಸುದರ್ಶನ್, ಮೋಹನ್ ಕುಮಾರ್, ಬಸವರಾಜ್, ಆರ್.ವಿ. ಕೃಷ್ಣ, ಅನಂತಕುಮಾರ್, ಸಯೀದ್ ಖಾನ್, ಫಿಲೋಮಿನ, ರವಿಂದ್ರನಾಥ್, ಶೈಲೇಶ್ ಕೋಠಿ, ಮಂಜುನಾಥ್ ಕೂಡ್ಲಿಗೆರೆ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post