ಏನಾಗುತ್ತಿದೆ ರಾಜ್ಯದಲ್ಲಿ? ನಾವೇನು ಪ್ರಜಾಪ್ರಭುತ್ವದ ಅಡಿಯಲ್ಲಿರುವ ವ್ಯವಸ್ಥೆಯಲ್ಲಿದ್ದೇವೋ ಅಥವಾ ಯಾರೋ ಮಾವೋವಾದಿಗಳ, ನಕ್ಸಲರ ಹಿಡಿತದಲ್ಲಿರುವ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೋ?
ಅಲ್ಲರೀ ಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನಾಚಿಕೆಯಾಗುವುದಿಲ್ಲವೇನ್ರಿ ನಿಮಗೆ. ನಿಮ್ಮ ರಾಜಕೀಯ ದ್ವೇಷ ಏನಾದರೂ ಇರಲಿ, ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ರಾಜ್ಯದ ಜನರಿಗೆ ದಂಗೆಯೇಳಲು ನಾನೇ ಕರೆ ನೀಡುತ್ತೇನೆ ಎನ್ನುತ್ತೀರಲ್ಲ ನೀವೇನು ಮುಖ್ಯಮಂತ್ರಿಯೋ ಅಥವಾ ಸರ್ವಾಧಿಕಾರಿಯೋ?
ನೆನಪಿರಲಿ, ರಾಜ್ಯದ ಜನರೇನು ನಿಮಗೆ ಪೂರ್ಣಾ ಬಹುಮತ ನೀಡಿ ಸರ್ಕಾರ ರಚಿಸಲು ಹೇಳಿದ್ದಲ್ಲ. ನಿಮ್ಮ ರಕ್ತದಲ್ಲೇ ಬಂದಿರುವ ಅಧಿಕಾರ ದಾಹದ ತೀವ್ರತೆ ನೈತಿಕತೆಯನ್ನೆಲ್ಲಾ ಗಾಳಿಗೆ ತೂರುವಂತೆ ಮಾಡಿ, ಅಕ್ರಮವಾಗಿ ಕಾಂಗ್ರೆಸ್ ಜೊತೆಯಲ್ಲಿ ಸಖ್ಯ ಬೆಳೆಸಿ, ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿದ್ದೀರಿ. ಹೀಗಿರುವಾಗ, ನಿಮ್ಮ ವರಸೆ ಹೇಗಿದೆ ಎಂದರೆ ಪೂರ್ಣ ಬಹುಮತ ಅಲ್ಲ, ಇಡಿಯ ರಾಜ್ಯದಲ್ಲಿ ನಿಮ್ಮದೇ ಸರ್ವಾಧಿಕಾರತ್ವ ಎಂಬ ದುರಹಂಕಾರದ ಮಾತುಗಳನ್ನು ಆಡುತ್ತಿದ್ದೀರಲ್ಲ ಸ್ವಾಮಿ.
ರಾಜ್ಯದ ಜನ ನಿಮಗೆ ಪೂರ್ಣಾಧಿಕಾರ ನೀಡದೇ ಇದ್ದರೂ ನೀವಿಗ ಮುಖ್ಯಮಂತ್ರಿಯಾಗಿರುವ ಕಾರಣ ನಿಮ್ಮ ಹಿಂಬಾಲಕರು ನಿಮ್ಮನ್ನು ಅನುಸರಿಸುತ್ತಿರುತ್ತಾರೆ. ಹೀಗಿರುವಾಗ, ಬಿಜೆಪಿ ವಿರುದ್ದ ರಾಜ್ಯದ ಜನರನ್ನು ಎತ್ತಿಕಟ್ಟಿ ದಂಗೆಯೇಳುವಂತೆ ಮಾಡುತ್ತೇನೆ ಎಂದರೆ, ಇದರಿಂದ ಪ್ರೇರಿತರಾಗಿ ನಿಮ್ಮ ಹಿಂಬಾಲಕರು ರಾಜ್ಯದಲ್ಲಿ ಅಶಾಂತಿ ಸೃಷ್ಠಿಸಿ, ಕಾನೂನು ಸುವ್ಯವಸ್ತೆ ಹಾಳಾದರೆ ಅದಕ್ಕೆ ಕಾರಣ ನೀವೇ ಆಗಿರುತ್ತೀರಿ.
ಮಾನ್ಯ ಗೌರವನ್ವಿತ ರಾಜ್ಯಪಾಲರೇ ದಯವಿಟ್ಟು ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಸ್ವಾಮಿ….
ಕುಮಾರಸ್ವಾಮಿಯವರು ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ನಿವಾಸದ ಮುಂದೆ ನಿಮ್ಮ ಹಿಂಬಾಲಕರು ಹಾಗೂ ಕಾಂಗ್ರೆಸ್ಸಿಗರು ಭಾರೀ ಗದ್ದಲ ನಡೆಸಿದ್ದು ಇದಕ್ಕೆ ನಿಮ್ಮ ಹೇಳಿಕೆಯ ಪರಿಣಾಮವೇ ಯಾಕಾಗಿರಬಾರದು. ಇದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿತವೇ?
ಕುಮಾರಸ್ವಾಮಿಯವರು ನೀಡಿದ ಹೇಳಿಕೆ ಭಾರತೀಯ ದಂಡ ಸಂಹಿತೆ 153 ಹಾಗೂ 153ಎ ಅಡಿಯಲ್ಲಿ ಸ್ಪಷ್ಟ ಉಲ್ಲಂಘನೆಯಾಗುತ್ತದೆ.
ಹೀಗಿದೆ ಐಪಿಸಿ 153:
Wantonly giving provocation with intent to cause riot—if rioting be committed—if not committed.—Whoever malignantly, or wantonly, by doing anything which is illegal, gives provocation to any person intending or knowing it to be likely that such provocation will cause the offence of rioting to be committed, shall, if the offence of rioting be committed in consequence of such provocation, be punished with imprisonment of either description for a term which may extend to one year, or with fine, or with both; and if the offence of rioting be not committed, with imprisonment of either description for a term which may extend to six months, or with fine, or with both.
Section 153A in The Indian Penal Code:
Promoting enmity between different groups on grounds of religion, race, place of birth, residence, language, etc., and doing acts prejudicial to maintenance of harmony.
ಮುಖ್ಯಮಂತ್ರಿಯಂತಹ ಪ್ರಭಾವಿ ಹುದ್ದೆಯಲ್ಲಿರುವ ಕುಮಾರಸ್ವಾಮಿಯವರು ನೀಡಿರುವ ಈ ಹೇಳಿಕೆಯಿಂದ ರಾಜ್ಯದಲ್ಲೇನಾದರೂ ದಂಗೆ ಆರಂಭವಾಗಿ ಕಾನೂನು ಸುವ್ಯವಸ್ತೆಗೆ ಧಕ್ಕೆ ಬಂದರೆ ಅದಕ್ಕೆ ನೇರವಾಗಿ ಕುಮಾರಸ್ವಾಮಿ ಅವರೇ ಹೊಣೆಗಾರರಾಗುತ್ತಾರೆ ಎನ್ನುವುದು ಸ್ಪಷ್ಟ.
ಅಲ್ಲದೇ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಳಜಗಳ ಹಾಗೂ ಅಧಿಕಾರ ಉಳಿಸಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿವೆಯೇ ಹೊರತು ರಾಜ್ಯದ ಅಭಿವೃದ್ದಿ ಕಾರ್ಯಗಳ ಕುರಿತಾಗಿ ನಿರ್ಲಕ್ಷ ತೋರಿವೆ. ಇಂತಹ ಕೀಳು ರಾಜಕೀಯ ಮಾಡಿಕೊಂಡು ಸಮಯ ವ್ಯರ್ಥ ಮಾಡುತ್ತಿರುವ ಇವರಿಂದಾಗಿ ಸಾವಿರಾರು ಕೋಟಿ ರೂ. ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ.
ಸಂವಿಧಾನ ನೀಡಿರುವ ಅವಕಾಶವನ್ನು ಬಳಸಿಕೊಂಡು, ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಹಣ ಹಾಗೂ ಸಮಯವನ್ನು ಬಳಸದೇ, ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿರುವ ಇವರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಗೌರವಾನ್ವಿತ ರಾಜ್ಯಪಾಲರೇ, ರಾಜ್ಯದಲ್ಲಿ ಅಶಾಂತಿ ಹಾಗೂ ಅರಾಜಕತೆ ಸೃಷ್ಠಿಯಾಗುವ ಮುನ್ನ ನಿಮ್ಮ ಅಧಿಕಾರ ಬಳಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿ ಎಂಬುದು ರಾಜ್ಯದ ಜನತೆಯ ಒತ್ತಡವಾಗಿದೆ.
ಇನ್ನು, ರಾಜ್ಯದ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ತರುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅವರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
ಸಂವಿಧಾನ ಹೇಳಿರುವಂತೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ನಮ್ಮ ರಾಜ್ಯದ ಹೆಮ್ಮೆಯ ಪೊಲೀಸ್ ಇಲಾಖೆ ಸಾಬೀತು ಮಾಡಬೇಕಿದೆ.
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post