Saturday, March 25, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಹಾಮಾರಿ ನಂತರದ ಭಾರತದ ಆರ್ಥಿಕತೆಯ ಹುಡುಕಾಟದಲ್ಲಿ ಬಜೆಟ್‌ 2022

ಕೋವಿಡ್‌ ಪೂರ್ವದ ಬೆಳವಣಿಗೆಯ ಹಾದಿಗೆ ಮರಳುವ ಹರಸಾಹಸ

February 1, 2022
in Special Articles
0 0
0
Share on facebookShare on TwitterWhatsapp
Read - 5 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಕೇಂದ್ರ ಸರಕಾರದ ಯೋಜನೆಗಳು, ಖರ್ಚು, ವೆಚ್ಚ, ಹೂಡಿಕೆ, ಸಾಲ, ಆದಾಯದ ಮೂಲಗಳನ್ನು ವಿವರಿಸುವ ವಾರ್ಷಿಕ ಆಯವ್ಯಯದ ಮೇಲೆ ಎಲ್ಲರ ಚಿತ್ತವಿದೆ. ಬಜೆಟ್‌ ಮಂಡನೆ ಸರಕಾರದ ಯಶಸ್ಸು-ವೈಫಲ್ಯಗಳ ಮುಖವಾಣಿಯಂತೆ ಕಂಡರೂ ಅದರ ಪರಿಣಾಮ ದೇಶದ ಪ್ರತೀ ಪ್ರಜೆಯ ಮೇಲೂ ಆಗುತ್ತಿರುತ್ತದೆ. ಮುಂಗಡ ಪತ್ರಕ್ಕೆ ದೇಶದ, ದೇಶವಾಸಿಗಳ ಚಿತ್ರಣವನ್ನು ಬದಲಾಯಿಸುವ ಹೊಣೆಗಾರಿಕೆಯಿರುತ್ತದೆ. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಂಗೆಟ್ಟಿದ ದೇಶದ ಆರ್ಥಿಕತೆ ಸಂಕಷ್ಟದ ಸ್ಥಿತಿಯಿಂದ ಹೊರಬರುವ ಪ್ರಯತ್ನದಲ್ಲಿದೆ. ದೇಶದ ಆರ್ಥಿಕ ಚೇತರಿಕೆ ಜನರ ಲಸಿಕೀಕರಣ ಮತ್ತು ಮುಂದಿನ ಕೋವಿದ್‌ ಅಲೆಗಳ ತೀವ್ರತೆಗಳ ಮೇಲೆ ಅವಲಂಭಿತವಾಗಿದೆ.‌ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ನವ ಭಾರತದ ಬುನಾದಿಗಳನ್ನು ಭದ್ರಪಡಿಸುವ ಮತ್ತು ಮಹಾಮಾರಿ ನಂತರದ ಆರ್ಥಿಕತೆಯನ್ನು ನಿರೂಪಿಸುವ ಮಹತ್ವದ ಜವಾಬ್ದಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮೇಲಿದೆ. ಕೊರೊನಾ ಕಾಲದ ಎರಡನೇ ಬಜೆಟ್‌ ಎಲ್ಲರಿಗೂ ಚೇತೋಹಾರಿಯಾಗಬಲ್ಲದೇ ಎಂಬ ಸವಾಲು ಎಲ್ಲರ ಮುಂದಿದೆ.

2021-22:
2022ರ ಕೇಂದ್ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತ 2021-22ನೇ ವಿತ್ತೀಯ ವರ್ಷದಲ್ಲಿ 9.2% ರಿಯಲ್ ಜಿಡಿಪಿ‌ (ಒಟ್ಟು ದೇಶಿಯ ಉತ್ಪಾದನೆ) ಬೆಳವಣಿಗೆಯ ದರವನ್ನು ಸಾಧಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ದರ ೭.೩% ಆಗಿತ್ತು. ಹಾಗಾಗಿಯೇ ಬೆಳವಣಿಗೆ “V- Shape Curve” ರೀತಿ ಕಾಣುತ್ತದೆ. ಕೋವಿದ್‌ ನಂತರದ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಯ ದರ ದೊಡ್ಡ ಸಕಾರಾತ್ಮಕ ಜಿಗಿತದಂತೆ ಕಾಣಬಹುದು. ಆದರೆ ವಾಸ್ತವದಲ್ಲಿ ಮಹಾಮಾರಿ ಪೂರ್ವದ ಕಾಲಕ್ಕೆ ಹೋಲಿಸಿದರೆ ಕೋವಿಡ್ ಮಹಾಮಾರಿ ಕಾರಣದಿಂದ‌ ಭಾರತೀಯ ಅರ್ಥವ್ಯವಸ್ಥೆ ಸಂಕುಚಿತಗೊಂಡಿದೆ. ಹೀಗೆ ಸಂಕುಚಿತಗೊಂಡಿರುವ ಸಮಯದಲ್ಲಿ ಸಣ್ಣ ಬೆಳವಣಿಗೆಯೂ ದೊಡ್ಡದಾಗಿ ಕಾಣುತ್ತದೆ.2019-20ನೇ ವಿತ್ತೀಯ ವರ್ಷದ ರಿಯಲ್ ಜಿಡಿಪಿ ‌145..6 ಲಕ್ಷಕೋಟಿ ರೂಪಾಯಿಗಳಾಗಿತ್ತು. ಆದರೆ ಇತ್ತೀಚಿನ NSO(ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ) ಮುನ್ನೋಟದ ಅಂದಾಜಿನ ಪ್ರಕಾರ  2021-22ನೇ ಸಾಲಿನ ರಿಯಲ್‌ ಜಿಡಿಪಿ ಕೇವಲ 147.5 ಲಕ್ಷಕೋಟಿ ರೂಪಾಯಿಗಳು. 2019-20ಕ್ಕೆ ಹೋಲಿಸಿದರೆ ಈಗ ಆಗಿರುವುದು ಕೇವಲ 1.26% ಬೆಳವಣಿಗೆ ಅಷ್ಟೇ. 2014-2019ರ ಅವಧಿಯಲ್ಲಿ ಭಾರತ ಸರಾಸರಿ 7.1% ಬೆಳವಣಿಗೆಯ ದರವನ್ನು ಹೊಂದಿತ್ತು. ಒಂದು ವೇಳೆ ಇದೇ ಬೆಳವಣಿಗೆ ದರ ಮುಂದುವರೆದಿದ್ದಲ್ಲಿ 2022ರ ಹೊತ್ತಿಗೆ ಭಾರತದ ಒಟ್ಟು ದೇಶಿಯ ಉತ್ಪಾದನೆ ಮೊತ್ತ 167.1 ಲಕ್ಷಕೋಟಿಯನ್ನು ತಲುಪಬೇಕಿತ್ತು. ಇದು 2022ರ ಜಿಡಿಪಿಗಿಂತ 20 ಲಕ್ಷಕೋಟಿ ಹೆಚ್ಚು. ವಾಸ್ತವದಲ್ಲಿ ಇದು ಮಹಾಮಾರಿ ಭಾರತದ ಆರ್ಥಿಕತೆಯ ಮೇಲೆ ಮಾಡಿರುವ ಗಂಭೀರ ಪರಿಣಾಮ ಹಾಗೂ ದೇಶಕ್ಕಾದ ಬೃಹತ್‌ ನಷ್ಟವನ್ನು ವಿವರಿಸುವ ಸರಳವಾದ ಅಂಕಿ ಸಂಖ್ಯೆ.

ಈ ಸಂಕಷ್ಟವನ್ನು ಮೀರಲು ಭಾರತ ಮುಂದಿನ 5-6 ವರ್ಷಗಳ ಕಾಲ ದ್ವಿಗುಣವಾಗಿ ವೃದ್ಧಿಸಬೇಕಾಗಿದೆ. ಕನಿಷ್ಟ 9.5% ರಿಂದ 10% ಬೆಳವಣಿಗೆ ದರವನ್ನು ಸಾಧಿಸಬೇಕು. ಅದಕ್ಕಾಗಿ ಹೆಚ್ಚಿನ ಸರಕಾರಿ-ಖಾಸಗಿ ಬಂಡವಾಳ ಹೂಡಿಕೆ, ರಫ್ತು, ಕೃಷಿ-ಕೈಗಾರಿಕೆ-ಸೇವಾ ವಲಯಗಳ ಕ್ಷಿಪ್ರ ಬೆಳವಣಿಗೆ ಬೃಹತ್‌ ಪ್ರಮಾಣದಲ್ಲಿ ನಡೆಯಬೇಕಿದೆ. ಆಗ ಅದು ಮಹಾಮಾರಿ ಪೂರ್ವದ ಭಾರತದ ಬೆಳವಣಿಗೆ ದರಕ್ಕೆ ಹೊಂದಿಕೆಯಾಗಬಹುದು. ಇಲ್ಲವಾದರೆ ವಿಶ್ವದ ಮುಂಚೂಣಿ ಆರ್ಥಿಕತೆಗಳ ಸಾಲಿನಲ್ಲಿ ನಿಲ್ಲುವುದು ಬಿಡಿ, ದೇಶದ ಜನರ ಆಶೋತ್ತರಗಳನ್ನು ಪೂರೈಸುವುದೇ ಕಷ್ಟವಾಗಬಹುದು. ಎಲ್ಲರ ಆಶಯದಂತೆ ಮಹಾಮಾರಿ ಕೊನೆಗೊಂಡರೂ ಅದು ವಿಶ್ವಕ್ಕೆ, ದೇಶಕ್ಕೆ, ಆರ್ಥಿಕತೆಯ ಮೇಲೆ ಉಳಿಸಿರುವ ಕರಾಳ ಛಾಯೆ ಭವಿಷ್ಯದಲ್ಲೂ ಬಾಧಿಸುತ್ತಿರುತ್ತದೆ. ಆದರೆ ಎದುರಾಗುವ ಸವಾಲುಗಳನ್ನು ಶೋಕಗೀತೆಯಾಗಿಸದೆ ಅದನ್ನು ಸಮರ್ಥವಾಗಿ ಎದುರಿಸುವ ಹೊಣೆಗಾರಿಕೆ ಸರಕಾರ-ಮಾರುಕಟ್ಟೆ-ಜನರು ಮತ್ತು ಈ ಬಾರಿಯ ಬಜೆಟ್‌ ಮೇಲಿದೆ.ಕುಂಠಿತಗೊಂಡಿರುವ ವಿಶ್ವ ಮಾರುಕಟ್ಟೆ, ಖಾಸಗಿ ಹೂಡಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹೊತ್ತಿನಲ್ಲಿ ಸರಕಾರವೇ ಆ ಜವಾಬ್ದಾರಿಯನ್ನು ಹೊರಬೇಕು. ಸರಕಾರದ ಬೃಹತ್‌ ಹೂಡಿಕೆ, ಕೋವಿಡ್‌ ಕಾಲದ ಸಾಮಾಜಿಕ ವಲಯಗಳಲ್ಲಿನ ಹಣಕಾಸಿನ ಹಂಚಿಕೆ, 102 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿಯಂತಹ ಯೋಜನೆಗಳು ದೇಶದಲ್ಲಿ ಬೇಡಿಕೆ, ಉದ್ಯೋಗ, ಅಭಿವೃದ್ಧಿಯನ್ನು ಹೊತ್ತು ತರಲಿವೆ. ಇಂತಹ ಮತ್ತಷ್ಟು ಯೋಜನೆಗಳಿಗೆ, ಆರ್ಥಿಕತೆಯನ್ನು ಪುನಚ್ಛೇತನಗೊಳಿಸುವ ಪ್ರಯತ್ನಗಳಿಗೆ ಸರಕಾರ ಹೆಚ್ಚಿನ ಸಾಲದ ಮೊರೆ ಹೋಗಬೇಕಾಗಬಹುದು. ಆದರೆ ಸರಕಾರದ ಏರ್‌ ಇಂಡಿಯಾದಂತಹ ಸರಕಾರಿ ಸಂಸ್ಥೆಗಳ ಪೂಂಜೀಕರಣ(disinvestment)ದ ಯಶಸ್ಸು ಸರಕಾರದ ಸಾಲದ ಪ್ರಮಾಣ, ವಿತ್ತೀಯ ಕೊರತೆಯನ್ನು ತಗ್ಗಿಸುವಲ್ಲಿ ಸಹಾಯ ಮಾಡಬಹುದು.

ವಿತ್ತೀಯ ಕೊರತೆ ಮತ್ತು ಆರ್ಥಿಕ ಪುನಶ್ಛೇತನದ ಸವಾಲುಗಳು:
ಹೆಚ್ಚಿನ ಸುಧಾರಣೆಗೆ ಸಾಲ ಮಾಡುವುದು ಅಗತ್ಯವಾಗಬಹುದು. ಸವಾಲಿನ ಸಮಯದಲ್ಲಿ, ಬದುಕನ್ನು ಪುನರ್ನಿಮಿಸುವ ಸಮಯದಲ್ಲಿ ಅದು ಅನಿವಾರ್ಯ. ಸರಕಾರಗಳು ಮಾಡುವ ಸಾಲಗಳು ಹೂಡಿಕೆಗೆ ಬಳಕೆಯಾದಾಗ ಅದರಿಂದ ಲಾಭ ಒದಗುತ್ತದೆ. ಸಾಲ ಸೇವನೆಗೆ ಬಳಕೆಯಾದರೆ ಸಾಲದ ಮೊತ್ತ ಹಿಗ್ಗುತ್ತಾ ಸಾಗುತ್ತದೆ. ಇದು ದೇಶದ ಹಾಗೂ ದೇಶವಾಸಿಗಳ ಮೇಲೆ ಸಾಲದ ಹೊರೆಗೆ ಕಾರಣವಾಗುತ್ತದೆ. ಹಾಗಾಗಿ ಸಾಲಮಾಡುವ ಸರಕಾರಗಳಿಗೆ ವಿತ್ತೀಯ ಕೊರತೆ ಒಂದು ರೀತಿಯಲ್ಲಿ “necessary evil.” 2003ರ FRBM ಕಾಯ್ದೆ ಬೇಕಾಬಿಟ್ಟಿ ಮಾಡುವ ಸಾಲವನ್ನು ನಿಯಂತ್ರಿಸುವಂತೆ ಮಾಡಿದೆ.ಪ್ರಸಕ್ತ ಸಾಲಿನ ತೆರಿಗೆ ಸಂಗ್ರಹಣೆಯ ಬೆಳವಣಿಗೆ ಅಂದಾಜು 34%. ಇದು ನಾಮಿನಲ್‌ ಜಿಡಿಪಿ ಬೆಳವಣಿಗೆ ದರಕ್ಕಿಂತ ಹೆಚ್ಚು. ಇದರಿಂದ ಕಳೆದ ಬಾರಿಯ ಬಜೆಟ್‌ ನ ಅಂದಾಜು ಮೊತ್ತ ಸುಮಾರು 3.6 ಲಕ್ಷಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗಬಹುದು. ಹೆಚ್ಚಿನ ಪೂಂಜೀಕರಣ ಸರಕಾರದ ಖರ್ಚು, ಹೂಡಿಕೆ ಮತ್ತು ಸಾಮಾಜಿಕ ವಲಯದ “safety net and consumption”ಗೆ ಪೂರಕವಾಗಬಹುದು. ಮೇಲಾಗಿ ಈ ಆದಾಯ ಸರಕಾರದ 2022ನೇ ಆರ್ಥಿಕ ಸಾಲಿನ ವಿತ್ತೀಯ ಕೊರತೆಯ ಗುರಿ 6.8% of GDP ತಲುಪುವುದು ಸಾಧ್ಯವಾಗಲಿದೆ. ಮುಂದಿನ ವರ್ಷಕ್ಕೆ ಅದು 6%(6-6.5%) ಗುರಿಯನ್ನು ಹಾಕಿಕೊಳ್ಳಬಹುದು ಅಥವಾ ಹೆಚ್ಚಿನ ಬೇಡಿಕೆ ನಿರಮಿಸಲು ಬೇಕಾದ ಹೂಡಿಕೆಗಾಗಿ ತುಸು ಹೆಚ್ಚುವರಿ ಸಾಲವನ್ನು ತೆಗೆದುಕೊಳ್ಳಬಹುದು. ಮತ್ತು ಯಾವುದೇ ಊಹಾತಿತ ಬೆಳವಣಿಗೆಗಳು ನಡೆಯದಿದ್ದಲ್ಲಿ 2025-26ರ ಹೊತ್ತಿಗೆ ಜಿಡಿಪಿಯ ೪%ಗೆ ಇಳಿಸುವುದು ಸಾಧ್ಯ. ಆದರೆ ಅದಕ್ಕೆ ಈಗಿನಿಂದಲೇ ಕಾಯಕಲ್ಪವನ್ನು ಹಾಕಿಕೊಳ್ಳುವುದು ಉತ್ತಮ. “Asset Monetisation ಮತ್ತು Disinvestment ಸರಕಾರ ಸಧ್ಯಕ್ಕೆ ನೆಚ್ಚಿರುವ ಮಾರ್ಗ. ಸದೃಢ ಆರ್ಥಿಕತೆಗೆ ಸಮರ್ಥ ವಿತ್ತೀಯ ಶಿಸ್ತು ಅನಿವಾರ್ಯ.V-shape Recovery or K-Shape Recovery:
ಮೊದಲ ಲಾಕ್‌ಡೌನ್‌ ಅವಧಿಯಲ್ಲಿ ಜಿಡಿಪಿ ನಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿತ್ತು ಆದರೆ ಕಳೆದೆರಡು ವರ್ಷಗಳಲ್ಲಿ ಆದ ಸಣ್ಣ ಚೇತರಿಕೆಯೂ ಮಹತ್ವದ ಜಿಗಿತದಂತೆಯೇ “V” ತೋರಿತ್ತು. ಆದರೆ Oxfam ಸೇರಿದಂತೆ ಅನೇಕ ವಿತ್ತ ತಜ್ಞರ ಪ್ರಕಾರ ಈ ಬೆಳವಣಿಗೆ ಹೆಚ್ಚು ಅಸಮಾನತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದು ಕಾರ್ಪೋರೆಟ್‌ ವಲಯ, ದೊಡ್ಡ ಉದ್ಯಮಗಳು ಈ ಹೊಡೆತದಿಂದ ಪಾರಾಗಿ ಉತ್ತಮವಾದ ಬೆಳವಣಿಗೆ ಕಾಣುತ್ತಿವೆ. ಆದರೆ ಅದೇ ಹೊತ್ತಿಗೆ ಕಾರ್ಮಿಕ ಕೇಂದ್ರಿತ, ಅನೌಪಚಾರಿಕ ವಲಯ, MSMEಗಳಲ್ಲಿ ನಿರುದ್ಯೋಗ, ಬಡತನ, ನಷ್ಟವನ್ನು ಎದುರಿಸುವಂತೆ ಮಾಡಿದೆ ಎಂದು ಹೇಳುತ್ತಿವೆ. ಒಂದು ಸಕಾರಾತ್ಮಕ ಬೆಳವಣಿಗೆ ಮತ್ತೊಂದು ನಕಾರಾತ್ಮಕ ಬೆಳವಣಿಗೆ ಹೀಗಾಗಿ ಇದೊಂದು ರೀತಿ ಅಸಮಾನ “K” ರೇಖೆಯಂತೆ ತೋರುತ್ತದೆ.

ಈ ಅಂತರವನ್ನು ತಗ್ಗಿಸಲು ಸರಕಾರ ಉತ್ಪಾದನಾ ಆಧಾರಿತ ಪ್ರೋತ್ಸಾಹ,  ಆತ್ಮನಿರ್ಭರ ಭಾರತದಂತಹ ಸ್ವಾವಲಂಭಿ ಯೋಜನೆಗಳು, ಸಾಮಾಜಿಕ ಸುರಕ್ಷತೆಯನ್ನು ಒದಗಿಸುವ, ಮೂಲಸೌಕರ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ವಲಯಗಳಲ್ಲಿ ಹೆಚ್ಚಿನ ಹೂಡಿಕೆಯ ಮೂಲಕ ಆರ್ಥಿಕತೆಯಲ್ಲಿ ಹೊಸ ಉದ್ಯೋಗ, ಬೇಡಿಕೆಯನ್ನು ಸೃಷ್ಟಿಸುವ ಪ್ರಯತ್ನವನ್ನು ಮುಂದುವರೆಸಲಿದೆ. ಕೊರೊನಾ ಕಾಲದ ಅಸಹಜ ಲಾಭಕ್ಕೆ ತೆರಿಗೆಯನ್ನು ವಿಧಿಸಿ ಅದರಿಂದ ಸಾಮಾಜಿಕ ಭದ್ರತೆ ಒದಗಿಸುವ ಪ್ರಯತ್ನಗಳಿಂದ ಮಧ್ಯಮವರ್ಗದ ಮತ್ತು ಪ್ರಾಮಾಣಿಕ ತೆರಿಗೆದಾರರ ಹೊರೆಯನ್ನು ತಗ್ಗುವಂತೆ ಮಾಡಬಹುದು.

2022-23:
ಆರ್ಥಿಕ ಸಮೀಕ್ಷೆಯ ಪ್ರಕಾರ, ಸಾಮಾನ್ಯ ಮಾನ್ಸೂನ್‌, ಕೋವಿಡ್‌ ಹೊಸ ಅಲೆಗಳ ಅಪಾಯ ಎದುರಾಗದಿದ್ದಲ್ಲಿ, ಜಾಗತಿಕ ತೈಲ ಬೆಲೆ ಪ್ರತೀ ಬ್ಯಾರೆಲ್‌ಗೆ ಸುಮಾರು 70-75 ಡಾಲರ್‌ ಮೊತ್ತವನ್ನು ಕಾಯ್ದುಕೊಂಡಲ್ಲಿ, ಮತ್ತು ಜಾಗತಿಕ ಕೇಂದ್ರೀಯ ಬ್ಯಾಂಕ್‌ಗಳ ಜಾಗತಿಕ ದ್ರವೀಕರಣದ ಹಿಂತೆಗೆತ, ಸರಕಾರದ ಪೂರೈಕೆ ವ್ಯವಸ್ಥೆಯ ಸುಧಾರಣೆ, ಹಾಗೂ ಸಾಮನ್ಯ ಸ್ಥಿತಿಗಳು ಹಾಗೇ ಮುಂದುವರೆದಲ್ಲಿ 2022-23ರ ಆರ್ಥಿಕ ಸಾಲಿನಲ್ಲಿ 8-8.5% ರಿಯಲ್‌ ಜಿಡಿಪಿ ಬೆಳವಣಿಗೆಯ ದರವನ್ನು ಕಾಣಲಿದೆ. ಆರ್ಥಿಕತೆಯನ್ನು ಹೀಗೆಯೇ ನಡೆಯುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲ ಬದಲಾವಣೆ, ಬೆಳವಣಿಗೆ ಆರ್ಥಿಕತೆಯ ಮೇಲೆ ಪ್ರತ್ಯಕ್ಷ ಪರೋಕ್ಷ ಪ್ರಭಾವವನ್ನು ಬೀರುತ್ತಿರುತ್ತದೆ. ಅದಕ್ಕನುಗುಣವಾಗಿ ಬಜೆಟ್‌ ಹೊರತಾಗಿಯೂ ಆರ್ಥಿಕ ನಿರ್ಧಾರಗಳು ಕಾಲದಿಂದ ಕಾಲಕ್ಕೆ ಸಂರಚನೆಯಾಗುತ್ತಿರುತ್ತವೆ. ಕೋವಿಡ್‌ ಮೊದಲ ಅಲೆಯ ಹೊಡೆತದ ಪರಿಣಾಮ ಎದುರಾದಾಗಲೇ ಆರ್ಥಿಕ ಪುನಶ್ಚೇತನ, ಬೇಡಿಕೆಯ ಹೆಚ್ಚಿಕೆ, ಆತ್ಮನಿರ್ಭರ ಭಾರತದ ಕಾಯಕಲ್ಪಗಳು ರೂಪುಪಡೆದಿದ್ದು. ಹಾಗಾಗಿ ಬಜೆಟ್‌ನಲ್ಲಿ ಘೋಷಿಸುವುದೇ ಅಂತಿಮವಲ್ಲ.ಸುಮಾರು ಐದಾರು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತಿರುವ ಹೊತ್ತಿಗೆ, ಭಾರತವನ್ನು ಆಮದು ಕೇಂದ್ರಿತ ಮಾರುಕಟ್ಟೆಯಿಂದ ದೇಶದ ಆರ್ಥಿಕತೆಗೆ ಇಂಬು ನೀಡುವ ರಫ್ತು ಕೇಂದ್ರಿತ  ಆರ್ಥಿಕತೆಯನ್ನಾಗಿಸುವುದು ಕಾಲದ ತುರ್ತಾಗಿದೆ. ಇದಕ್ಕಿರುವ ನಿಯಂತ್ರಣ ವ್ಯವಸ್ಥೆ, ಪೂರೈಕೆ ವ್ಯವಸ್ಥೆ ಹಾಗೂ ರಾಚನಿಕ ಸಮಸ್ಯೆಗಳನ್ನು ಸುಧಾರಿಸಬೇಕಿದೆ. ಬ್ಯಾಂಕಿಂಗ್‌ ವಲಯದ ಏರುತ್ತಿರುವ NPAs ಗಳಿಗೆ ಬ್ಯಾಡ್‌ ಬ್ಯಾಂಕ್‌ ಉತ್ತರವಾಗಬಲ್ಲದು. ಬ್ಯಾಂಕಿಂಗ್‌ ಮತ್ತು ವಿತ್ತೀಯ ವಲಯದ ಸುಧಾರಣೆಗಳು ಮುಂದುವರೆಯಲಿವೆ. ಕೃಷಿ ವಲಯದ ಭಿನ್ನ ಸುಧಾರಣೆಗಳು, ರೈತರ ಬೇಡಿಕೆಗಳಿಗೆ ಹಾದಿಯಾಗಬಹುದು. ಆರೋಗ್ಯ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಸಕಾರಣದಿಂದ ಹೆಚ್ಚಿನ ಹೂಡಿಕೆ ಅನಿವಾರ್ಯ. ಹೊಸ ತಂತ್ರಜ್ಞಾನ ಆವಿಷ್ಕಾರಗಳ ಫಲವಾಗಿ ಸೇವಾವಲಯ, ಸ್ಟಾಸ್ಟ್‌ಅಪ್‌ಗಳ ಜೊತೆಗೆ ಉತ್ಪಾದನಾ ವಲಯಗಳಲ್ಲೂ ಯುನಿಕಾರ್ನ್‌ಗಳ ಸಂಖ್ಯೆ ಹೆಚ್ಚಬೇಕು. ಹಾಗೆಯೇ ಹೆಚ್ಚು ಹೆಚ್ಚು ಉದ್ಯಮಿಗಳು ಸ್ವಾವಲಂಭಿಗಳಾಗಿ ಹೊರಹೊಮ್ಮಬೇಕು. ಅದಕ್ಕಾಗಿ ಹೆಚ್ಚಿನ ಹೂಡಿಕೆ ಮತ್ತು ಸುಧಾರಣೆಗಳ ಮೂಲಕ ಸರಕಾರದ ಅನೇಕ ಯೋಜನೆಗಳು ಎಲ್ಲರಿಗೂ ತಲುಪುವಂತಾಗಬೇಕು. ಕಳೆದ ಕೆಲವು ವರ್ಷಗಳಂತೆ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಯೋಜನೆಗಳು ಈ ಬಾರಿ ಮತ್ತು ಮುಂದಿನ ಕೆಲವು ವರ್ಷಗಳು ಮುಂದುವರೆಯಲಿವೆ. ಇದರ ಜೊತೆಗೆ ಖಾಸಗಿ ಬಂಡವಾಳ ಹೂಡಿಕಗೆ ಪೂರಕ ವಾತಾವರಣ ನಿರ್ಮಾಣದ ಕಾರ್ಯಗಳು ಮುಂದುವರೆಯುವ ಸಾಧ್ಯತೆಯಿದೆ.

ಇದು ಪಂಚರಾಜ್ಯಗಳ ಚುನಾವಣಾ ವರ್ಷ. 2024ರ ಚುನಾವಣೆಗೆ ಇನ್ನೆರೆಡೇ ವರ್ಷ. ಚುನಾವಣೆ, ರೈತರ ಮನವೊಲಿಕೆ, ಇತ್ಯಾದಿ ಜನಪ್ರಿಯ ಯೋಜನೆಗಳೊಂದಿಗೆ ವಿಶ್ವದ ಮುಂಚೂಣಿ ಆರ್ಥಿಕತೆಯಾಗಿ ಹೊರಹೊಮ್ಮುವ ಆಶಯ ಇತ್ಯಾದಿ ಸಂಗತಿಗಳಿಗೆ ಉತ್ತರಿಸುವ ಪ್ರಯತ್ನ ಇದಾಗಲಿದೆ. ಇದರೊಂದಿಗೆ  ಸ್ವಾತಂತ್ರ್ಯದ ಅಮೃತ ಮಹೋತ್ಸದದ ಸಂದರ್ಭದಲ್ಲಿ ನವಭಾರತಕ್ಕೆ ಭದ್ರ ಬುನಾದಿ, ಮಧ್ಯಮ ಅವಧಿಯಲ್ಲಿ ಮಹಾಮಾರಿ ನಂತರದ ಆರ್ಥಿಕತೆಯನ್ನು ಕಟ್ಟುವ, ಆರ್ಥಿಕತೆಯನ್ನು ಮರಳಿ ಸಹಜ ಸ್ಥಿತಿಗೆ ತರುವ ಪ್ರಯತ್ನಗಳು, ಹೂಡಿಕೆ, ಉದ್ಯೋಗ, ಅರ್ಥವ್ಯವಸ್ಥೆಯ ಸುಧಾರಣೆ, ಕ್ಷಿಪ್ರವಾಗಿ ಬದಲಾಗುತ್ತಿರುವ ಆರ್ಥಿಕ ವಲಯಗಳ ಕ್ರಾಂತಿಗೆ ಅನುಗುಣಾವಾಗಿ ಭಾರತವನ್ನು ಸಜ್ಜುಗೊಳಿಸುವ ಅನಿವಾರ್ಯತೆ, ಆರೋಗ್ಯ, ಶಿಕ್ಷಣ, ನಗರ-ಗ್ರಾಮೀಣಾಭಿವೃದ್ಧಿ ಮತ್ತು ನರೇಗಾ ಮಾದರಿಯಲ್ಲಿ ನಗರ ಪ್ರದೇಶಗಳಲ್ಲೂ ಉದ್ಯೋಗ ಮತ್ತು ಬೇಡಿಕೆಯನ್ನು ಪುಷ್ಠೀಕರಿಸುವ ಸಂಗತಿಗಳು ಈ ಬಾರಿಯ ಬಜೆಟ್ ನ ಕೇಂದ್ರವಾಗಿರಲಿದೆ. ತತ್ಕಾಲೀನ ಸವಾಲು, ಮುಂದಿನ ೩-೪ ವರ್ಷಗಳ ಮಧ್ಯಮ ಅವಧಿಯ ಅವಶ್ಯಕತೆಗಳು ಮತ್ತು ಸರ್ಕಾರದ ಛಾಪನ್ನು ಸ್ಥಾಪಿಸುವ ಮಹಾಮಾರಿ ನಂತರದ ಭವಿಷ್ಯವನ್ನು ನಿರ್ಮಿಸುವ ಹೊಣೆಗಾರಿಕೆಗಳು ಬಹುಮುಖ್ಯ. ಒಟ್ಟಿನಲ್ಲಿ ಇದು ಕೋವಿಡ್‌ ಕಾಲದ ಹಾನಿಯನ್ನು ಸರಿದೂಗಿಸಿ, ದೇಶದ ಆರ್ಥಿಕತೆಯನ್ನು ಮರಳಿ ಕಟ್ಟುವ ಅವಕಾಶ-ಅನಿವಾರ್ಯತೆಯ ಐತಿಹಾಸಿಕ ಮಹತ್ವವಿರುವ ಬಜೆಟ್‌.

-ಶ್ರೇಯಾಂಕ ಎಸ್‌ ರಾನಡೆ 

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Budget 2022-23BudgetBytesCorona VirusCovid19Economic SurveyGDPGovt of IndiaIndian Budget 2022-23Kannada News WebsiteLatest News KannadaMonetary yearNSOಆರ್ಥಿಕ ಸಮೀಕ್ಷೆಕೋವಿಡ್19ಚುನಾವಣೆಜಿಡಿಪಿ ‌ನಿರ್ಮಲಾ ಸೀತಾರಾಮನ್ಬಜೆಟ್‌ 2022-23ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆವಿತ್ತೀಯ ವರ್ಷ
Previous Post

ಸರ್ವೋದಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಕನಸುಕಂಡವರು ಮಹಾತ್ಮಾ ಗಾಂಧೀಜಿ...

Next Post

ಗುಡ್ ನ್ಯೂಸ್: ಎಲ್’ಪಿಜಿ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗುಡ್ ನ್ಯೂಸ್: ಎಲ್’ಪಿಜಿ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಬೆಳಗಾವಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

March 25, 2023
Internet Image

ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟ: ಯಾವ ಸಮುದಾಯಕ್ಕೆ ಎಷ್ಟು ಟಿಕೇಟ್ ನೀಡಲಾಗಿದೆ?

March 25, 2023

ಗಮನಿಸಿ! ಮಾರ್ಚ್ 26-27ರಂದು ಶಿವಮೊಗ್ಗದಲ್ಲಿ ನೀರು ಬರಲ್ಲ

March 25, 2023

ತೀರ್ಥಹಳ್ಳಿ ಸಂತೆ ಮಾರುಕಟ್ಟೆಯಲ್ಲಿ ಪೊಲೀಸ್ ಪೇದೆ ಸಾವು: ಹತ್ಯೆ ಶಂಕೆ?

March 25, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಳಗಾವಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

March 25, 2023
Internet Image

ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟ: ಯಾವ ಸಮುದಾಯಕ್ಕೆ ಎಷ್ಟು ಟಿಕೇಟ್ ನೀಡಲಾಗಿದೆ?

March 25, 2023

ಗಮನಿಸಿ! ಮಾರ್ಚ್ 26-27ರಂದು ಶಿವಮೊಗ್ಗದಲ್ಲಿ ನೀರು ಬರಲ್ಲ

March 25, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!