ಕಲ್ಪ ಮೀಡಿಯಾ ಹೌಸ್ | ಭರಮಸಾಗರ |
ಪಟ್ಟಣದಲ್ಲಿ ಭಾನುವಾರ ಶ್ರೀ ರಾಮನವಮಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು.
ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಬುಡರನಾಳು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ವಿನಾಯಕ ದೇವಸ್ಥಾನದ ಮುಂದೆ ರಾಮದೇವರ ದೊಡ್ಡ ಭಾವಚಿತ್ರ ಪ್ರತಿಷ್ಟಾಪಿಸಿ ಪೂಜಿಸಿ ಸಾರ್ವಜನಿಕರಿಗೆ ಪಾನಕ ಕೋಸಂಬರಿ ವಿತರಿಸಿದರು. ನಂತರ ದೊಡ್ಡ ಪೇಟೆ ಮೂಲಕ ಶ್ರೀ ರಾಮನ ಭಾವಚಿತ್ರವನ್ನು ಶಿವಯೋಗಿಮಂದಿರ, ಶ್ರೀ ರಾಘವೇಂದ್ರ ಕೃಪಾಶ್ರಮ, ದೊಡ್ಡಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜಿಸಿ ಮೆರವಣಿಗೆ ನಡೆಸಿದರು.
Also Read: ದೆಹಲಿ ಜೆಎನ್’ಯು ಗಲಾಟೆ: ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್’ಐಆರ್
ದೊಡ್ಡಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಅಂಗವಾಗಿ ಬೆಳಿಗ್ಗೆಯಿಂದಲೇ ಧಾರ್ಮಿಕ ಪೂಜಾಕಾರ್ಯ, ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಅಲಂಕಾರ, ಶ್ರೀ ರಾಮದೇವರ ಭಾವಚಿತ್ರಕ್ಕೆ ಷೋಡಷೋಪಚಾರ ಪೂಜೆ, ಮಂಗಳಾರತಿ, ಅಷ್ಟಾವಧಾನ, ಮಹಿಳೆಯರಿಂದ ತೊಟ್ಟಿಲಿಗೆ ಉಡಿಯಕ್ಕಿ ನೆರೆದ ಭಕ್ತರಿಗೆ ಪಾನಕ ಕೋಸಂಬರಿ ವಿತರಣೆ, ಲಾಲಿ ಸೇವೆ ನಡೆಸಲಾಯಿತು.
Also Read: ಸಿಲಿಕಾನ್ ಸಿಟಿಯಲ್ಲಿ ಮಲೆನಾಡಿಗರ ಸ್ನೇಹ ಸಮ್ಮಿಲನ: ಯಾರೆಲ್ಲಾ ಪಾಲ್ಗೊಂಡಿದ್ದರು?
ದೇವಸ್ಥಾನ ಕಮಿಟಿ ಖಜಾಂಚಿ ಎಸ್.ಜಿ. ಗುರುರಾಜರಾವ್ ಹಾಗೂ ಬಿ.ಜೆ. ರಾಮಚಂದ್ರ ಶ್ರೀ ರಾಮನ ಬಗ್ಗೆ ಪ್ರವಚನ ನೀಡಿದರು. ಬಿ. ಮಲ್ಲಾರಿರಾವ್, ಕಿಟ್ಟಣ್ಣ, ಪುಟ್ಟಕ್ಕ, ದತ್ತಾತ್ರಿ, ವಿಜಯ ಕುಮಾರ್, ಭಾರತಮ್ಮ, ನಂಜುಂಡರಾವ್, ವೀಣಾ, ನಾಗರತ್ನ, ಲಕ್ಷ್ಮೀ, ಕುಸುಮ, ಭವ್ಯ, ವಾಗ್ದೇವಿ, ಚೈತನ್ಯ, ಮುರಳಿಧರ್, ಅನಂತಪದ್ಮರಾವ್, ವಿಜಯಲಕ್ಷ್ಮೀ, ಅಕ್ಷತಾ, ಶ್ರೀಪಾದ, ಇತರರು ಇದ್ದರು.
ಶ್ರೀ ರಾಘವೇಂದ್ರ ಕೃಪಾಶ್ರಮದಲ್ಲಿ ಶ್ರೀ ರಾಮನವಮಿ ಆಚರಣೆ ಆಚರಿಸಲಾಯಿತು. ರಾಯರ ಬೃಂದಾವನಕ್ಕೆ ವಿಷೇಷ ಪೂಜೆ ನಂತರ ಶ್ರೀ ರಾಮದೇವರ ಭಾವಚಿತ್ರಕ್ಕೆ ಪೂಜಿಸಿ ಪಾನಕ ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಶ್ರೀರಾಮರಕ್ಷಾ ಮಂತ್ರಪಠಣ ಶ್ರೀ ರಾಮಾಯಣ ಸುಂದರಕಾಂಡ ವ್ಯಾಖ್ಯಾನ ನಡೆಯಿತು. ಸಂಜೆ ಪ್ರವಚನ, ಭಜನೆ ಏರ್ಪಡಿಸಲಾಗಿತ್ತು. ಕೃಪಾಶ್ರಮದ ಸದಸ್ಯರು ಪಾಲ್ಗೊಂಡಿದ್ದರು.
(ವರದಿ: ಎಂ.ಎಂ. ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post