ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಜಂಬು ಸವಾರಿ ಅದ್ದೂರಿಯಾಗಿ ಸಾಗಿದ್ದು, ದೇಶ ವಿದೇಶಗಳಿಂದ ಆಗಮಿಸಿರುವ ಲಕ್ಷಾಂತರ ಮಂದಿ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಜಯದಶಮಿ ಅಂಗವಾಗಿ ಜಂಬೂ ಸವಾರಿಗೂ ಮುನ್ನ ಮಧ್ಯಾಹ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಆನಂತರ ಶುಭ ಕುಂಭ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ತರುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಜಂಬೂ ಸವಾರಿಗೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಅವರು ಇಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಜೊತೆಗಿದ್ದರು @DrParameshwara @GTDevegowda pic.twitter.com/8c4OJykLSu
— CM of Karnataka (@CMofKarnataka) October 19, 2018
ಜಂಬೂಸವಾರಿ ಮೆರವಣಿಗೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು 5 ಸಾವಿರದ 284 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿ ಮೊಬೈಲ್ ಕಮಾಂಡೋ ಭದ್ರತೆ ಒದಗಿಸಲಾಗಿದೆ.
ಜಂಬೂ ಸವಾರಿಯ ನೇರ ಪ್ರಸಾರವನ್ನು ಚಂದನ ವಾಹಿನಿಯಲ್ಲಿ ನೇರವಾಗಿ ವೀಕ್ಷಿಸಲು ಮೈಸೂರು ನಗರದ 22 ಕಡೆಗಳಲ್ಲಿ ಎಲ್ ಸಿಡಿ ಪರದೆ ಅಳವಡಿಸಲಾಗಿದೆ. ಕೆ ಆರ್ ವೃತ್ತದ ಬಳಿ 4 ಪರದೆಗಳು, ಸಯ್ಯಾಜಿ ರಾವ್ ಮಾರ್ಗ ಮೂಲಕ ಬನ್ನಿಮಂಟಪದವರೆಗೆ 22 ಪರದೆಗಳನ್ನು ಅಳವಡಿಸಲಾಗಿದೆ.
LIVE NOW!
The world famous Mysore #Dussehra – Jumbo Sawari, on @DDNational & Live-Stream on https://t.co/OtYSCilV6j #Vijayadashmi pic.twitter.com/Dw29vz4ndh— Doordarshan National (@DDNational) October 19, 2018
Discussion about this post