ಮೈಸೂರು: ವಿಶ್ವ ವಿಖ್ಯಾತ ಮೈಸೂರು ಜಂಬು ಸವಾರಿ ಅದ್ದೂರಿಯಾಗಿ ನಡೆದಿದ್ದು, ಇಂದು ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸ್ತಬ್ದ ಚಿತ್ರಗಳು ಕರ್ನಾಟಕದ ಸಂಸ್ಕೃತಿ ಹಾಗೂ ಕಲೆಯನ್ನು ಅನಾವರಣಗೊಳಿಸಿದವು.
ಮೆರವಣಿಗೆಯಲ್ಲಿ ಒಟ್ಟು 100 ಕಲಾತಂಡಗಳು, 42 ಮೆರವಣಿಗೆಯ ವೈಭವ ಹೆಚ್ಚಸಲಿರುವ ಸ್ತಬ್ಧ ಚಿತ್ರಗಳು, 12 ಅಂಬಾರಿ ಹೊತ್ತು ಸಾಗುವ ಅರ್ಜುನನನ್ನೊಳಗೊಂಡ ಗಜಪಡೆ, ಅರ್ಧ ಕಿಲೋ ಮೀಟರ್ ದೂರದ ಬನ್ನಿ ಮಂಟಪಕ್ಕೆ ಮೆರವಣಿಗೆ ಸಾಗಿತು.
मैसूर दशहरा के दौरान मैसूर की सड़कों पर अलग-अलग नज़ारे देखने को मिल रहे है।#मैसूर_दशहरा #Dusshera2018 #HappyDussehra @mediasurya @DG_Doordarshan @DDNational pic.twitter.com/mqQOdFfGiK
— DD-URDU (@UrduDoordarshan) October 19, 2018

ಯಾವ ಯಾವ ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದವು?
- ಚಾಮರಾಜನಗರ: ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು ಸ್ತಬ್ಧಚಿತ್ರ
- ಚಿಕ್ಕಮಗಳೂರು: ಭೂತಾಯಿ ಕಾಫಿ ಕನ್ಯೆ
- ಚಿಕ್ಕಬಳ್ಳಾಪುರ: ವಿದುರಾಶ್ವತ್ಥ
- ಗದಗ್: ಮರಗಳ ಮರು ನೆಡುವಿಕೆ
- ಕಲಬುರಗಿ: ವಿಮಾನ ನಿಲ್ದಾಣ
- ಧಾರಾವಾಡ: ದ.ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ
- ಕೋಲಾರ: ಜಿಲ್ಲಾ ಪಂಚಾಯತ್ ನಡೆ ಅಭಿವೃದ್ದಿ ಕಡೆ
- ವಿಜಯಪುರ: ಗೋಲ್ ಗುಂಬಜ್
- ಚಿತ್ರದುರ್ಗ: ಶ್ರೀಗುರು ತಿಪ್ಪೆರುದ್ರ ಸ್ವಾಮಿಗಳು ನಾಯಕನಹಟ್ಟಿ ಪುಣ್ಯಕ್ಷೇತ್ರ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕರ್ನಾಟಕದ ನವರತ್ನಗಳು
- ಮಂಡ್ಯ: ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು
- ರಾಯಚೂರು: ಯರಮರಸ್ ಶಾಖೋತ್ಪನ್ನ ಕೇಂದ್ರ
- ಬೆಳಗಾವಿ: ಕಿತ್ತೂರು ಚೆನ್ನಮ್ಮ ವೈಭವ
- ಇದರೊಂದಿಗೆ ಹಗಲುವೇಷ, ದಾಲಪಟ, ಗೊಂಬೆ ಕುಣಿತ , ಚಂಡೆಮದ್ದಳೆ, ಗೊರವರ ಕುಣಿತ ಮತ್ತಿತರ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
बुराई पर अच्छाई की विजय का प्रतीक महापर्व विजयादशमी पर विश्व प्रसिद्ध "मैसूर दशहरा" का उत्सव डीडी नेशनल पर जारी है। #मैसूर_दशहरा #Dusshera2018 #HappyDussehra @mediasurya @DG_Doordarshan @DDNational pic.twitter.com/n0k0o8SALs
— DD-URDU (@UrduDoordarshan) October 19, 2018
Discussion about this post