ಇಸ್ಲಾಮಾಬಾದ್: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್’ಗೆ ಸಾಕ್ಷಿ ಕೇಳುತ್ತಿದ್ದವರಿಗೆ ಈಗ ಮತ್ತೊಂದು ಮಹತ್ವದ ಪುರಾವೆ ದೊರೆತಿದ್ದು, ಅಮೆರಿಕಾದ ಹೋರಾಟಗಾರರೊಬ್ಬರು ಇದನ್ನು ಪ್ರಕಟಿಸಿದ್ದಾರೆ.
ಗಿಲ್ಗಿಟ್’ನಲ್ಲಿರುವ ಅಮೆರಿಕಾದ ಹೋರಾಟಗಾರ ಸೆಂಗೆ ಹಸ್ನಾನ್ ಸೆರಿಂಗ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದಿದ್ದಾರೆ.
ಈ ಘಟನೆ ಕುರಿತಂತೆ ವೀಡಿಯೋವೊಂದನ್ನೂ ಸಹ ಹಾಕಿರುವ ಅವರು, ಪಾಕಿಸ್ಥಾನ ಸೇನೆ ಹಲವು ಶವಗಳನ್ನು ಖೈಬರ್ ಪಕ್ತುಂಕ್ವಾ ಮತ್ತು ಅದರ ಸುತ್ತಮುತ್ತಲಿನ ಬುಡಕಟ್ಟು ಪ್ರಾಂತ್ಯಗಳಿಗೆ ರವಾನೆ ಮಾಡಿತ್ತು ಎಂದಿದ್ದಾರೆ.
#Pakistan military officer admits to "martyrdom" of more than 200 militants during Indian strike on #Balakot. Calls the terrorists Mujahid who receive special favors/ sustenance from Allah as they fight to support PAK government [against enemies]. Vows to support families pic.twitter.com/yzcCgCEbmu
— #SengeSering ས།ཚ། (@SengeHSering) March 13, 2019
Discussion about this post