Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನೇತ್ಯಾತ್ಮಕ ಭಾವನೆಗಳ ಬಡಿದೆಬ್ಬಿಸಿದ ’ಬುದ್ಧ’ನಿಗೆ ಅನಂತಾನಂತ ನಮನಗಳು

ಬುದ್ದ ಪೂರ್ಣಿಮಾ ತನ್ನಿಮಿತ್ತ ಈ ಸಕಾಲಿಕ ಚಿಂತನ

May 18, 2019
in Special Articles
0 0
0
Share on facebookShare on TwitterWhatsapp
Read - 4 minutes

ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು-ಇವೆಲ್ಲಕ್ಕೂ ಸಂಕೇತ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದು. ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸೊತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದ ಗೌತಮ. ಯಾವುದನ್ನೂ ಸ್ವಂತವೆಂತ ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ. ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಮತಹ ಕಿರುಮಿರು ನಗೆಯನ್ನ ಹೊಳೆಸಬಲ್ಲದು. ಆ ನಿರ್ಮಲ ಧ್ಯಾನಸ್ಥ ಮಂದಹಾಸದಲ್ಲಿ ಆತ ಪೂರ್ಣಚಂದ್ರನಷ್ಟು ಶಾಂತ, ದೇದೀಪ್ಯಮಾನ.

ತನ್ನ ಮಾತುಗಳು ಮನುಷ್ಯನ ಆಂತರಿಕ ಗುಣವನ್ನು ಕುರಿತು ಹೇಳುವುದರಿಂದ ಅವನ್ನು ಗ್ರಹಿಸುವುದು ಲೌಕಿಕದ ಲಾಲಸೆಗಳಲ್ಲಿ ಮುಳುಗಿರುವವರಿಗೆ ಸುಲಭವಲ್ಲ ಅಂತ ಗೌತಮನಿಗೆ ತಿಳಿದಿತ್ತು. ಬಯಕೆಗಳ ಗಾಢಾಂಧಕಾರದಲ್ಲಿ ದಾರಿತಪ್ಪಿದವರಿಗೆ ತನ್ನ ಮಾತು ಪಥ್ಯವಾಗುವುದೆ? ಅಂಥವರಿಗೆ ಉಪದೇಶ ನೀಡಲು ಹೋಗಿ ತಾನು ದಣಿಯಲಾರೆನೆ? ಪ್ರಶ್ನೆಗಳು ಎದುರಾಗಿದ್ದವು. ಅದು ತರ್ಕದ ನಿಲುಕಿಗೆ ಮೀರಿದ್ದು. ಒಳಗಣ್ಣಿಗೆ ಮಾತ್ರ ಸ್ವಷ್ಟವಾಗುವಂಥದ್ದು ಅಂತ ತಿಳಿದಿದ್ದರೂ ಸಹಜೀವಿಗಳ ಬಗ್ಗೆ ಅಮಿತ ಕರುಣೆಯ ಬುದ್ಧ ‘‘ಯಾರ ಆತ್ಮಗಳು ಸತ್ಯವನ್ನು ಕಾಣಲು ತೆರೆದಿರುತ್ತವೋ ಅಂಥವರಿಗೆ ನಾನು ಹೇಳುವುದು ಅರ್ಥವಾದೀತು’’ ಎಂಬ ನಂಬಿಕೆಯಿಂದ ಜನರಲ್ಲಿ ಆತ್ಮಜ್ಞಾನದ ಬಗ್ಗೆ ಒಲವು ಮೂಡಿಸಿದ. ಸಕಲದಲ್ಲಿ ಆತನಿಗಿದ್ದ ಸಮಾನ ಪ್ರೀತಿಯಿಂದಾಗಿ ಆತ ಕಟ್ಟಿದ ಬೌದ್ಧ ಸಂಘ ತಂತಾನೇ ಅಪಾರ ಶಿಸ್ತು, ಸಂಯಮದಲ್ಲಿ, ಭಿಕ್ಷುಗಳ ವಿಚಾರ ಸ್ವಾತಂತ್ರ್ಯಕ್ಕೂ ತಡೆಯಿಲ್ಲದಂತೆ, ಬೆಳೆದುಕೊಳ್ಳುತ್ತದೆ.


ಒಮ್ಮೆ ಝೆನ್ ಗುರು ಲಿಂಜಿ ಭೀಕ್ಷುಗಳನ್ನುದ್ದೇಶಿಸಿ ಮಾತನಾಡುತ್ತ, ‘‘ನಾವು ಯಾವುದೇ ಧಾರ್ಮಿಕ ರೀತಿಯಲ್ಲಿ ವರ್ತಿಸಬೇಕಾದ ಅಗತ್ಯವಿಲ್ಲ. ಸಹಜವಾಗಿದ್ದರಷ್ಟ ಸಾಕು. ಯಾವುದನ್ನೂ ಹುಡುಕುವ ಅಗತ್ಯವೂ ಇಲ್ಲ. ಕಡೆಗೆ ಬುದ್ಧನನ್ನೂ ಕೂಡ. ಎಷ್ಟೆಂದರೂ ಬುದ್ಧ ಎನ್ನುವುದು ಕೇವಲ ಒಂದು ಶಬ್ದ ಅಷ್ಟೆ’’ ಎನ್ನುತ್ತಾನೆ. ಬುದ್ಧ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸಲಿಲ್ಲ ಎಂಬುದರ ನಿರ್ದಿಷ್ಟ ಸಾಕ್ಷಿ ಇದು. ಪೂರ್ಣಚಂದ್ರ ತೇಜಸ್ಸಿನ ಬುದ್ಧ ಅರಮನೆ, ಗುಡಿಸಲು ಎನ್ನದೆ ಎಲ್ಲರ ಅಂಗಳದಲ್ಲೂ ಯಥೇಚ್ಛ ಬೆಳದಿಂಗಳು ಹರಿಸುತ್ತ ನಡೆದ. ರಾಜ ಬಿಂಬಸಾರನೂ, ಕೊಲೆಗಡುಕ ಅಂಗುಲೀಮಾಲನೂ ಅವನ ಕರುಣೆಗೆ ಸಮಾನ ಪಾತ್ರರು!

ಬೆಳದಿಂಗಳನ್ನು ನೋಡಿ ದಣಿವ ಚೇತನ ಪ್ರಾಯಶಃ ಇರಲಾರದು. ಮನಸ್ಸು ಸಂಪೂರ್ಣ ಶಾಂತವಾದಾಗ. ಯೋಗಸೂತ್ರದಲ್ಲಿ ಹೇಳಿರುವಂತೆ ಉಂಟಾಗುವ ಕೇವಲ ಕುಂಭಕ ಅಥವಾ ಕೆಲ ಗಳಿಗೆಗಷ್ಟೆ ಉಸಿರು ಸ್ತಂಭಿತಗೊಳಿಸುವ ಅನುಭವ ಕೊಡುವಂಥದು ಪೌರ್ಣಿಮಿಯ ಚಂದಿರನ ಬೆಳ್ಳಿ ಕಿರಣಗಳು. ಕ್ಷಣಾರ್ಧದಲ್ಲಿ ಒಳಗಣ್ಣನ್ನು ತೆರೆಸಿ, ಬದುಕಿನ ಕ್ಷಣಭಂಗುರತೆ, ಪ್ರಕೃತಿಯ ಅಗಾಧತೆಗಳ ಕುರಿತು ಧೇನಿಸುವಂತೆ ಮಾಡುವಂಥದು.
ಯಾವ ಲೋಭ-ಲಾಭದ ಪ್ರವಾಹವೂ ಕೊಚ್ಚಿಕೊಂಡು ಹೋಗಲಾಗದಂತಹ ದ್ವೀಪದಂತೆ ಆತ್ಮವನ್ನು ಬಲಪಡಿಸಿಕೊಳ್ಳಬೇಕು ಎಂದು ಬುದ್ಧ ತನ್ನ ಅನುಯಾಯಿಗಳಿಗೆ ಹೇಳುವುದು ಕೇಳಿದರೆ ಥಟ್ಟನೆ ಹೊಳೆಯುವುದು ಹುಣ್ಣಿಮೆಯ ಪರಿಪೂರ್ಣ ಚಂದ್ರ. ಪ್ರವಾಹದ ಮೇಲೆ ರಭಸದಿಂದ ಹರಿಯುವ ಪೂರ್ಣಚಂದ್ರ ಬಿಂಬ ಹೊರಗಣ್ಣಿಗೆ ಹೊಯ್ದಾಡಿದಂತೆ, ಮುರಿದಂತೆ ಕಂಡರೂ ವಾಸ್ತವದಲ್ಲಿ ಪ್ರವಾಹದ ಏರಿಳಿತ. ಆವೇಗದಿಂಧ ಅದರ ಪೂರ್ಣತೆಗೆ ಯಾವ ಕುಂದೂ ಬಾರದು. ಅಂತಹ ಅಕ್ಷೀಣ ಜ್ಞಾನದ ಬಲದಿಂದ ಅರಳುವ ನಗೆ ಗೌತಮನದು. ಲೌಕಿಕ ಸುಖ-ದುಃಖ, ಮಾನ-ಅಪಮಾನ, ಸ್ವಂತ-ಪರಗಳ ಸೀಮಿತ ಪರಿಧಿಗೆ ಮೀರಿದ ಬುದ್ಧರಿಗೆ ಮಾತ್ರ ನಿಲುಕವಂಥದು.


ವೈಶಾಖ ಶುದ್ಧ ಪೌರ್ಣಿಮಿಯ ರಾತ್ರಿ ಸಿದ್ಧಾರ್ಥ ಬಿಟ್ಟು ಹೊರಟಿದ್ದು ಅರಮನೆಯನ್ನಲ್ಲ. ಸಹಜೀವಿಗಳೊಂದಿಗೆ ಬೆರೆಯಲಾಗದಂತೆ ಮೇಲು, ಕೀಳು ಎಂಬುದನ್ನು ಸೃಷ್ಟಿಸುವ ಅಧಿಕಾರದ ಗದ್ದುಗೆಯನ್ನು; ಪದವಿ, ಐಶ್ವರ್ಯಗಳಿಂದ ಸುಖ ಸಿಗುತ್ತದೆ ಎಂಬ ಭ್ರಾಂತಿಯನ್ನು ಮನುಷ್ಯನ ಮೂಲಭೂತ ಕೊರತೆಗಳನ್ನು ಅರಸೊತ್ತಿಗೆಯಿಂದ ನೀಗಿಸಲು ಸಾಧ್ಯವಿಲ್ಲ ಎಂಬುದನ್ನು ಸಿದ್ಧಾರ್ಥ ಗಮನಿಸುತ್ತಾನೆ. ರಾಜಕುಮಾರನೆಂಬ ಭ್ರಮಾಕೋಶ ಕಳಚಿ ಜನರಲ್ಲಿಗೆ ಹೋದಾಗ ಮಾತ್ರ ಅವರ ದುಃಖವನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಮನುಕುಲಕ್ಕೆ ಸುಖ ಸಂತೃಪ್ತಿ ದೊರಕುವ ಮಾರ್ಗ ಯಾವುದು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲೆ ಎಂದು ಬೆಳದಿಂಗಳ ಆ ಇರುಳಿನಲ್ಲಿ ಶುದ್ಧೋದನನ ಮಗನ ಪಅದವಿ ತೊರೆದು ಜನರ ನಡುವೆಯೇ ಹುಡುಕಹೊರಟವನು ಸಿದ್ಧಾರ್ಥ.

ಮಾನವರ ದುಃಖವನ್ನು ದೂರಮಾಡುವ ಮುನ್ನ ಅದರ ಮೂಲವನ್ನು ಆತ ಅರಿಯಬೇಕಿತ್ತು. ಆ ಅರಿವಿನ ಹಾದಿ ಹುಡುಕುತ್ತ ಆತ ಮೊದಲು ದೇಹ ದಂಡಿಸಿಕೊಳ್ಳುತ್ತಾನೆ. ಎಷ್ಟೋ ದಿನ ಅನ್ನ, ನೀರು ತೊರೆದು ಪ್ರಕೃತಿಯ ಸರ್ವ ಕಾಠಿಣ್ಯವನ್ನು ತನ್ನನ್ನು ತೆರೆದುಕೊಂಡು ಸತ್ಯ ಅರಿಯಲು ಯತ್ನಿಸುತ್ತಾನೆ. ಮೂಲತಃ ಪ್ರಜ್ಞಾವಂತನಾದ ಆತ, ದೇಹ ದಂಡನೆಯಿಂದ ಹೆಚ್ಚಿನ ಲಾಭವಿಲ್ಲವೆಂದು ಬೇಗ ಕಂಡುಕೊಳ್ಳುತ್ತಾನೆ. ಸುಜಾತಳಿಂದ ಆಹಾರ ಸ್ವೀಕರಿಸಿ ತನ್ನ ಉಪವಾಸ ಅಂತ್ಯಗೊಳಿಸುತ್ತಾನೆ. ಮೋಕ್ಷವನ್ನರಸುತ್ತಿದ್ದಾನೆ ಎಂದು ನಂಬಿ ಅವನೊಂದಿಗೆ ತಪಶ್ಚರ್ಯೆ ಪಾಲಿಸುತ್ತಿದ್ದ ಐದು ಮಂದಿ ಅನುಯಾಯಿಗಳು ಆತ ಕಷ್ಟಗಳಿಗೆ ಮಣಿದು ಲೌಕಿಕಕ್ಕೆ ಮರಳಿದನೆಂದು ಭ್ರಮಿಸಿ ಆತನ ಸಖ್ಯ ತೊರೆದು ಬಿಡುತ್ತಾರೆ.

ಇಷ್ಟರಲ್ಲಿ ಬುದ್ಧನಿಗೆ ತಾನು ನಡೆಯಬೇಕಾದ ಹಾದಿ ಧ್ಯಾನ ಮಾರ್ಗವೆಂದು ಮನವರಿಕೆಯಾಗುತ್ತದೆ. ಜಗತ್ತಿನ ಆಗುಹೋಗುಗಳಿಗೆ, ಮನುಷ್ಯನ ತುಮುಲಗಳಿಗೆ ಕಾರ್ಯಕಾರಣ ಸಂಬಂಧದ ಎಳೆ ಹಿಡಿದು ಧ್ಯಾನಿಸಿ ಆತ ಕಂಡುಕೊಂಡದ್ದು ಅತ್ಯಂತ ಸರಳವೆಂದು ಕಾಣುವ ಆಸೆಯೇ ದುಃಖಕ್ಕೆ ಮೂಲ-ಎಂಬ ಸತ್ಯವನನು.


ತನ್ನ ಹುಟ್ಟಿದ ದಿನವೂ ಆದ ಒಂದು ಪೌರ್ಣಿಮಿಯ ದಿನ ಬೋಧಿವೃಕ್ಷದ ಕೆಳಗೆ, ಜಗತ್ತು ಜ್ಞಾನೋದಯ ಎಂತ ಕರೆಯುವ ಅರಿವಿನ ಬೆಳದಿಂಗಳಿನಲ್ಲಿ ಮಿಂದು ಸಿದ್ದಾರ್ಥ ನಿರ್ಮೋಹಿ ಬುದ್ಧನಾದ.

ಹೀಗೆ ಬುದ್ಧ ಅರಿವಿನ ಪರಮಾನಂದವನ್ನು ಸವಿಯುತ್ತಿದ್ದಾಗ ಒಬ್ಬ ಗರ್ವಿಷ್ಟ ಪಂಡಿತ ನಿಜವಾದ ಪಂಡಿತನೊಬ್ಬನ ಗುಣವಿಶೇಷಗಳೇನು? ಸವಾಲೆಸೆದ. ‘‘ಅಹಂಕಾರದಿಂದ ಮುಕ್ತನಾದವನು, ಶುದ್ಧನಾಗಿದ್ದು ಆತ್ಮ ನಿಗ್ರಹವುಳ್ಳವನು, ತಿಳಿದವನೂ ಜ್ಞಾನಿಯೂ ಆದವನು. ಪಾಪಕೃತ್ಯಗಳನ್ನು ತೊರೆದವನು, ತನ್ನ ವರ್ತನೆಯಿಂದ ಇತರ ಜೀವಿಗಳಿಗೆ ಹಾನಿಯುಂಟು ಮಾಡದವನು ಮತ್ತು ಈ ಎಲ್ಲ ಕಾರಣಗಳಿಂದಾಗಿ ಪೂಜ್ಯನಾದವನು ಮಾತ್ರ ನಿಜವಾದ ಪಂಡಿತ’’ ಎಂದ ಬುದ್ಧ.

ಒಮ್ಮೆ ಟೊಕುಸಾನ್ ಎಂಬ ಭಿಕ್ಷು ರುಟಾನ್ ಎಂಬ ಹಿರಿಯ ಭೀಕ್ಷುವನ್ನು ಭೇಟಿಯಾದ. ಆದಾಗಲೇ ಮುಸ್ಸಂಜೆಯಾಗಿತ್ತು. ಟೊಕುಸಾನ್ ತನ್ನನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ಕೆಲ ಸಮಯದ ಬಳಿಕ, ‘‘ಈಗ ರಾತ್ರಿ ಬಹಳವಾಗಿದೆ. ಮಲಗಿ ವಿಶ್ರಾಂತಿ ತೆಗೆದುಕೋ ಹೋಗು’’ ಅಂತ ರುಟಾನ್ ಅವನನ್ನೆಬ್ಬಿಸಿದ. ಟೊಕುಸಾನ್ ತಲೆಬಾಗಿ, ತೆರಳುವುದಕ್ಕೆಂಬ ಬಾಗಿಲ ಬಳಿ ಹೋದವನು, ‘‘ಹೊರಗೆ ಬಹಳ ಕತ್ತಲೆ’’ ಎಂದು ನಿಂತುಕೊಂಡ. ದೀಪವೊಂದನ್ನು ಹಚ್ಚಿ ಅದನ್ನು ಟೊಕುಸಾನ್‌ಗೆ ಕೊಡಲು ಹೋದ ರುಟಾನ್, ಇನ್ನೇನು ಟೊಕುಸಾನ್ ಅವನ ಕೈಯಿಂದ ದೀಪ ತೆಗೆದುಕೊಳ್ಳಬೇಕು ಎನ್ನುವಾಗ ಅದನ್ನು ಊಡಿ ಆರಿಸಿಬಿಟ್ಟ ಒಡನೆಯೇ ಜ್ಞಾನೋದಯವಾದ ಟೊಕುಸಾನ್ ಬೆಳಿಗ್ಗೆ ಎದ್ದವನೇ ರುಟಾನ್ ಬಳಿ ಬಂದು, ‘‘ಕೇಳಲು ನನ್ನಲ್ಲಿ ಯಾವ ಪ್ರಶ್ನೆಯೂ ಉಳಿದಿಲ್ಲ. ಬರುತ್ತೇನೆ’’ -ಹೊರಟೇಬಿಟ್ಟ… ಎಂಬುದೊಂದು ಝೇನ್ ಕತೆ. ಎಷ್ಟೋ ಬಾರಿ ಅನೇಕ ಪ್ರಶ್ನೆ, ತರ್ಕ, ಜಿಜ್ಞಾಸೆಗಳಿಂಧ ದೊರಕದ ಉತ್ತರ ಯಾವುದೋ ಪುಟ್ಟ ಘಟನೆಯಿಂದ ಕ್ಷಣಮಾತ್ರದಲ್ಲಿ ಹೊಳೆದುಬಿಡಬಹುದು.


ಝೇನ್ ಗುರುವೊಬ್ಬ ಹೇಳುವಂತೆ ಸಂಪೂರ್ಣ ಜ್ಞಾನವನ್ನು ಒಂದು ಕ್ಷಣಮಾತ್ರ, ಒಂದು ಕ್ಷಣ ಮಾತ್ರವೇ, ಸಾಕ್ಷಾತ್ಕರಿಸಿಕೊಳ್ಳಬಹುದು. ಮೋಡ ಕವಿದ ಒಂದು ಹುಣ್ಣಿಮೆಯ ರಾತ್ರಿ ಆಗಸದಲ್ಲಿ ನೋಡ ನೋಡುತ್ತಿರುವಂತೆಯೇ ಮೂಡುವ ದಟ್ಟ ಕಾರ್ಮೋಡಗಳ ನಡುವಿನ ಕಿರು ಅಂತರದಲ್ಲಿ ಪೂರ್ಣ ಚಂದ್ರ ಫಕ್ಕನೆ ಪ್ರತ್ಯಕ್ಷವಾಗಿ ಮತ್ತೆ ಮೋಡದ ಮರೆಗೆ ತೆರಳಿದರೆ ಹೇಗೋ ಹಾಗೆ. ನೋಡುಗನ ಮನಸ್ಸಿನಲ್ಲಿ ಉಳಿಯುವುದು ಕಾರ್ಮೋಡವಲ್ಲ. ಹಾಗೆ ಛಕ್ಕನೆ ದರ್ಶನ ನೀಡಿದ ಪೌರ್ಣಮಿಯ ಚಂದಿರ. ಅರಿವಿಲ್ಲದೇನೇ ಆ ಕ್ಷಣದಲ್ಲಿ ಆಹ್ ಎಂಬ ಉದ್ಗಾರ ಹೊರಟು ಸ್ತಬ್ಧ ನಿಲ್ಲಬಹುದು. ಜಗತ್ತಿನ ಮತ್ತು ತನ್ನ ನಡುವಿನ ಸಂಬಂಧದ ಗೂಢವನ್ನು ಮನುಷ್ಯ ಅರ್ಥಮಾಡಿಕೊಂಡಾಗಲೂ ಇದೇ ಬಗೆಯ ದಿವ್ಯ ಆನಂದದಲ್ಲಿ ಅನುಭವವಾಗುತ್ತದೆ ಎನ್ನುತ್ತಾನೆ ಗೌತಮ.

ಮಾನವ ಜೀವಿತದಲ್ಲಿ ಬರುವ ಹುಣ್ಣಿಮೆಗಳು ಅವೆಷ್ಟೋ. ಎಷ್ಟೆಷ್ಟೊ ಬೆಳದಿಂಗಳ ರಾತ್ರಿಗಳಲ್ಲಿ ಆತ ಅನುಭವಿಸಿದ ನೋವು, ಅಪಮಾನ, ಹತಾಶೆ, ಕ್ರೌರ್ಯಗಳ ನೆರಳಿನಲ್ಲಿ ಬೆಳದಿಂಗಳ ತಂತ್ರ ಕಿರಣಗಳೂ ಆತನಿಗೆ ಬೇನೆ ತರಲು ಸಾಧ್ಯವಿದೆ. ಪ್ರಕ್ಷುಬ್ಧ ಮನಸ್ಸಿನ ಎಲ್ಲ ನೇತ್ಯಾತ್ಮಕ ಭಾವನೆಗಳನ್ನು ಬಡಿದೆಬ್ಬಿಸಿ ನಿಟ್ಟುಸಿರಿಡುವಂತೆ ಮಾಡುವ ಆ ಎಲ್ಲ ಧಗೆಯ ಬೆಳದಿಂಗಳ ರಾತ್ರಿಗಳಲ್ಲಿ ಮತ್ತದೇ ಬುದ್ಧನ ಸ್ನೇಹಮಯಿ, ಪ್ರಶಾಂತ ಬೆಳದಿಂಗಳಿನಂತಹ ಅರಿವಿನ ನಗಯಷ್ಟೆ ಸಾಂತ್ವನ, ಸ್ಥೈರ್ಯ ನೀಡಬಲ್ಲದು. ಅಂತಹ ಪ್ರತಿ ಬೆಳದಿಂಗಳ ಜ್ಞಾನಿಗೆ, ಗುರುವಿಗೆ ಶರಣು.

ಲೇಖನ: ಡಾ.ಗುರುರಾಜ ಪೋಶೆಟ್ಟಿಹಳ್ಳಿ

Tags: Buddha PurnimaKannada ArticleLord BuddhaSpecial Articleಡಾ.ಗುರುರಾಜ ಪೋಶೆಟ್ಟಿಹಳ್ಳಿಪೌರ್ಣಿಮಿಬುದ್ಧ ಪೂರ್ಣಿಮಾಭಗವಾನ್ ಬುದ್ಧಹುಣ್ಣಿಮೆ
Previous Post

ಬೆಂಗಳೂರ ಬಾನಂಗಳದಲ್ಲಿ ಪ್ರಜ್ವಲಿಸುತ್ತಿರುವ ಕರಾವಳಿ ಬಾಲಪ್ರತಿಭೆ ಆಯುಷ್ ಬಗ್ಗೆ ನೀವು ತಿಳಿಯಲೇಬೇಕು

Next Post

Crime News: ಸಾಗರ ರಸ್ತೆ ಅಪಘಾತ, ಸ್ಥಳದಲ್ಲೇ ಓರ್ವ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Crime News: ಸಾಗರ ರಸ್ತೆ ಅಪಘಾತ, ಸ್ಥಳದಲ್ಲೇ ಓರ್ವ ಸಾವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025

ಪಾಕಿಸ್ತಾನಿಗಳನ್ನು ಗಡಿಪಾರು ಮಾಡಲು ರಾಜ್ಯಪಾಲರು ತಕ್ಷಣ ನಿರ್ದೇಶನ ನೀಡಬೇಕು: ದತ್ತಾತ್ರಿ ಮನವಿ

May 8, 2025

ಹಾವೇರಿ | ನಿಂತಿದ್ದ ಲಾರಿಗೆ ಕಾರು ಡಿಕ್ಕಿ | 6 ಜನರು ಸ್ಥಳದಲ್ಲೇ ಸಾವು

May 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025

ಪಾಕಿಸ್ತಾನಿಗಳನ್ನು ಗಡಿಪಾರು ಮಾಡಲು ರಾಜ್ಯಪಾಲರು ತಕ್ಷಣ ನಿರ್ದೇಶನ ನೀಡಬೇಕು: ದತ್ತಾತ್ರಿ ಮನವಿ

May 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!