ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯತ್ತಿದ್ದು, 11 ಗಂಟೆ ವೇಳೆಗೆ ಬಿಜೆಪಿ 158 ಸ್ಥಾನಗಳಲ್ಲಿ, ಕಾಂಗ್ರೆಸ್ 15, ಎಎಪಿ 7 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
182 ಸ್ಥಾನಗಳ ಗುಜರಾತ್’ನಲ್ಲಿ 11 ಗಂಟೆ ವೇಳೆಗೆ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಭರ್ಜರಿಯಾಗಿ ಓಡುತ್ತಿದ್ದರೆ, ಕಾಂಗ್ರೆಸ್ ಮುಗ್ಗರಿಸಿ ಬಿದ್ದಿದ್ದು, ಎಎಪಿ ಎರಡಂಕಿ ಮುಟ್ಟುವಲ್ಲಿಯೂ ಕುಂಟುತ್ತಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಗುಜರಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪP್ಷÀಕ್ಕೆ ದೊಡ್ಡ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಕಳೆದ ಬಾರಿಯ 117 ರಿಂದ 151 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು. ಕಾಂಗ್ರೆಸ್ ಸಂಖ್ಯೆ 51ರಿಂದ 16ಕ್ಕೆ ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದವು. ಹೊಸ ಸೇರ್ಪಡೆಯಾದ ಎಎಪಿ ಪ್ರಚಾರವು ಪP್ಷÀಕ್ಕೆ ಭರವಸೆ ಹುಟ್ಟುಹಾಕಿದ್ದು, ಅದಕ್ಕೆ ಎರಡರಿಂದ 13 ಸ್ಥಾನಗಳು ಬರಬಹುದು ಎಂದು ನಿರೀಕ್ಷಿಸಲಾಗಿತ್ತು.
ಮತ ಎಣಿಕೆ ಇನ್ನೂ ಮುಂದುವರೆದಿದ್ದು, ಮಧ್ಯಾಹ್ನ ವೇಳೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. 27 ವರ್ಷದಿಂದ ಬಿಜೆಪಿ ಗುಜರಾತ್’ನಲ್ಲಿ ಅಧಿಕಾರದಲ್ಲಿದ್ದು, ಈ ನಾಗಾಲೋಟ ಮುಂದುವರೆಯುತ್ತದೆಯೇ ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















