ಕಲ್ಪ ಮೀಡಿಯಾ ಹೌಸ್ | ಗುಜರಾತ್ |
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿಯೂ ಸಹ ವಿಜಯಮಾಲೆ ಧರಿಸಿದರೆ ಈಗಿರುವ ಹಂಗಾಮಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ CM Bhupendra Patel ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ನಾಡಿನ ಸಂಸ್ಕೃತಿ, ಸಮಾನ ನಾಗರಿಕ ಸಂಹಿತೆ, ಸರ್ದಾರ್ ಪಟೇಲ್ ವಿಚಾರದ ವಿವಾದಗಳು, ಜಮ್ಮು ಕಾಶ್ಮೀರ-ಪಂಜಾಬ್’ನಂತಹ ಗಡಿ ಭಾಗದ ಪ್ರದೇಶಗಳಲ್ಲಿನ ಪರಿಸ್ಥಿತಿ, ಭಾರತದ ಅಂತಾರಾಷ್ಟ್ರೀಯ ನಿಲುವು, ಗಡಿ ಕಾಳಜಿ, ಆಂತರಿಕ ಭದ್ರತೆ ಮತ್ತು 2024 ರ ಲೋಕಸಭಾ ಚುನಾವಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಶಾ ಮಾತನಾಡಿದ್ದಾರೆ.
Also read: ಶ್ರದ್ಧಾಳ ದೇಹದ ತುಂಡು ಫ್ರಿಡ್ಜ್’ನಲ್ಲಿರುವಾಗಲೇ ಬೇರೊಬ್ಬಳನ್ನು ಕರೆ ತಂದಿದ್ದ ಅಫ್ತಾಬ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಿಸ್ಸಂಶಯವಾಗಿ ಭೂಪೇಂದ್ರ ಪಟೇಲ್ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post