ಕಲ್ಪ ಮೀಡಿಯಾ ಹೌಸ್ | ಗುಜರಾತ್ |
ಗುಜರಾತ್ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಗೃಹಮಂತ್ರಿ ಅಮಿತ್ ಶಾರವರು ಗುಜರಾತಿನ ಬೋಟಾಡ್ ಜಿಲ್ಲೆಯ ಸಾರಂಗಪುರ ದೇವಸ್ಥಾನದಲ್ಲಿ 54 ಅಡಿ ಎತ್ತರದ ಭವ್ಯ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದರು
ತಮ್ಮ ಟ್ವೀಟ್ ಸರಣಿಗಳಲ್ಲಿ ಗೃಹಮಂತ್ರಿಗಳು ‘ಪಂಚ ಧಾತುಗಳಿಂದ ಮಾಡಲ್ಪಟ್ಟ ಈ ಭವ್ಯ ಮೂರ್ತಿ ಭಾರತೀಯ ವಾಸ್ತು ಶಿಲ್ಪ ಮತ್ತು ಕಲೆಯ ಒಂದು ಅದ್ಭುತ ಉದಾಹರಣೆ. ಈ ಮೂರ್ತಿ ಮುಂದಿನ ದಿನಗಳಲ್ಲಿ ಭಕ್ತರಿಗೆ ಒಂದು ಶ್ರದ್ದೆಯ ಕೇಂದ್ರವಾಗಲಿದೆ’ ಎಂದು ಹೇಳಿದ್ದಾರೆ.

Also read: ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕಾರಿನಲ್ಲಿ 20 ಸೀರೆ, 14 ಮೊಬೈಲ್ ಪತ್ತೆ: ದೂರು ದಾಖಲು
ಶಾ ರವರು ಗುರುವಾರ ಸಾಲಂಗಪುರದಲ್ಲಿ 55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಕಷ್ಟಭಂಜನದೇವ ಭೋಜನಾಲಯವನ್ನು ಕೂಡ ಉದ್ಘಾಟಿಸಿದರು. 25 ಯಾತ್ರಾ ಸ್ಥಳಗಳ ಮಣ್ಣಿನಿಂದ ನಿರ್ಮಾಣವಾದ ಈ ಹೈಟೆಕ್ ಕಿಚನ್ನಲ್ಲಿ ಒಂದು ಗಂಟೆಯಲ್ಲಿ 20,000 ಭಕ್ತಾದಿಗಳಿಗೆ ಆಹಾರ ತಯಾರಿಸಬಹುದು. ‘ಇದೊಂದು ಶ್ರೀ ಕಷ್ಟಭಂಜನ ದೇವಸ್ಥಾನದ ಮಹತ್ವದ ಸಾರ್ವಜನಿಕ ಸೇವೆಯಾಗಿದೆ’ ಎಂದು ತಮ್ಮ ಟ್ವೀಟ್ನಲ್ಲಿ ಶಾ ರವರು ಹೇಳಿದರು.












Discussion about this post