ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿಂಡ್ಲೆಮನೆ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ.
ಇಂದು ಸಂಜೆ ವೇಳೆಗೆ ಕೋಡೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ದೊಡ್ಡ ಗಾತ್ರದ ಆಲಿಕಲ್ಲು ಸುರಿದಿದೆ.
ಮಳೆಯ ಅಬ್ಬರದೊಂದಿಗೆ ಯೋಗೇಂದ್ರ ಹಿಂಡ್ಲೆಮನೆ ಅವರಿಗೆ ಸೇರಿದ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಸೃಷ್ಟಿ ಮಾಡಿತ್ತು.
ಈ ಬಾರಿ ಮುಂಗಾರು ಮಳೆ ಆರಂಭಕ್ಕೂ ಮೊದಲೇ ಅನೇಕ ಕಡೆ ತನ್ನ ರೌದ್ರ ನರ್ತನ ಶುರು ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ.
(ಮಾಹಿತಿ: ಮಹೇಶ ಹಿಂಡ್ಲೆಮನೆ)
Discussion about this post