ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಅರ್ಧ ದಿನ ಲಾಕ್ ಡೌನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಖಾಕಿ ಪಡೆದ ಅಖಾಡಕ್ಕಿಳಿದಿದ್ದು, ಸ್ವತಃ ಜಿಲ್ಲಾ ರಕ್ಷಣಾಧಿಕಾರಿಗಳೇ ಪರಿಶೀಲನೆಗೆ ಇಳಿದಿದ್ದಾರೆ.
ಒಂದೆಡೆ ಲಾಕ್ ಡೌನ್ ಜಾರಿಯಾದ ಎರಡನೆಯ ದಿನವಾದ ಇಂದೂ ಸಹ ಮಧ್ಯಾಹ್ನದ ನಂತರ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದರು. ಇನ್ನೊಂದೆಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗಾಗಿ ಪೊಲೀಸರು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಎಂಆರ್’ಎಸ್ ವೃತ್ತದಲ್ಲಿ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಅವರು, ವಾಹನ ಸವಾರರ ವಿಚಾರಣೆ ನಡೆಸಿ, ಅನಾವಶ್ಯಕವಾಗಿ ಓಡಾಡದಂತೆ ಎಚ್ಚರಿಕೆ ನೀಡುತ್ತಿದ್ದರು.
ಇನ್ನು, ತುಂಗಾನಗರ ಠಾಣೆಯ ಪಿಎಸ್’ಐ ತಿರುಮಲೇಶ್ ಅವರು ತಮ್ಮ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿರುವ ಎಲ್ಲಾ ವಾಹನಗಳ ತಪಾಸಣೆಯನ್ನು ಮಾಡಿ ದಂಡ ವಿಧಿಸಿದರು.
ಅಲ್ಲದೇ, ಜನರಿಗೆ ಬುದ್ಧಿವಾದ ಹೇಳುವ ಮುಖಾಂತರ ಲಾಕ್ ಡೌನ್ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದರು.
Get In Touch With Us info@kalpa.news Whatsapp: 9481252093







Discussion about this post