ಕಲ್ಪ ಮೀಡಿಯಾ ಹೌಸ್ | ಹಳಿಯಾಳ |
ಬಲೂನ್ #Balloon ನುಂಗಿ ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗೇನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
Also read: ಶೀಘ್ರದಲ್ಲೇ ಆಶ್ರಯ ಮನೆ ಹಸ್ತಾಂತರಿಸಿ | ವಸತಿ ಸಚಿವರಿಗೆ ತಂಗರಾಜ್ ಮನವಿ
ನವೀನ್ ನಾರಾಯಣ ಬೆಳಗಾಂವಕರ (13) ಮೃತ ಬಾಲಕ, ಸಂಜೆ ಮನೆಯಲ್ಲಿ ಬಲೂನ್ ಊದುತ್ತಿದ್ದಾಗ ಗಂಟಲಲ್ಲಿ ಬಲೂನ್ ಸಿಕ್ಕಿಹಾಕಿಕೊಂಡಿತ್ತು. ಉಸಿರಾಡಲು ಹರಸಾಹಸ ಪಡುತ್ತಿದ್ದ ಆತನನ್ನು ಪೋಷಕರು ಹಾಗೂ ನೆರೆಹೊರೆಯವರು ಹಳಿಯಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನನ್ನು ರಕ್ಷಿಸಲು ವೈದ್ಯರ ತಂಡ ಹರಸಾಹಸಪಟ್ಟರೂ ಪ್ರಯತ್ನ ಫಲಕಾರಿಯಾಗದೆ, ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಗಂಟೆಗಳಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post