ಕಲ್ಪ ಮೀಡಿಯಾ ಹೌಸ್ | ಹಮಾಸ್ |
ಈಗ ಸದ್ಯ ನಮ್ಮ ಟಾರ್ಗೆಟ್ ಇಸ್ರೇಲ್, ಮುಂದೆ ಇಡೀ ಜಗತ್ತು ನಮ್ಮ ಕಾನೂನಿನ ಅಡಿಯಲ್ಲಿ ಬರುತ್ತದೆ ಎಂದು ಹಮಾಸ್ ಉಗ್ರ ಕಮಾಂಡರ್ ಮಹಮೂದ್ ಅಲ್ ಜಹರ್ ಎಚ್ಚರಿಕೆ ನೀಡಿದ್ದಾನೆ.
ಈ ಕುರಿತ ವೀಡಿಯೋ ತುಣುಕೊಂದು ವ್ಯಾಪಕ ವೈರಲ್ ಆಗಿದೆ.
ಇಸ್ರೇಲ್ ಮೊದಲ ಗುರಿ ಮಾತ್ರ, ಇಡೀ ಜಗತ್ತು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ. ಭೂಮಿಯ ಸಂಪೂರ್ಣ 510 ಮಿಲಿಯನ್ ಚದರ ಕಿಲೋಮೀಟರ್’ಗಳು ಯಾವುದೇ ಅನ್ಯಾಯ, ದಬ್ಬಾಳಿಕೆ ಇಲ್ಲದ ವ್ಯವಸ್ಥೆಯ ಅಡಿಯಲ್ಲಿ ಇವೆ. ಆದರೆ ಎಲ್ಲಾ ಅರಬ್ ದೇಶಗಳು, ಲೆಬನಾನ್, ಸಿರಿಯಾ, ಇರಾಕ್ ಮತ್ತು ಇತರ ದೇಶಗಳಲ್ಲಿ ಪ್ಯಾಲೆಸ್ಟೀನಿಯನ್ನರು ಮತ್ತು ಅರಬ್ಬರ ವಿರುದ್ಧ ನಡೆಸುತ್ತಿರುವ ಹತ್ಯಾಕಾಂಡಗಳಿಗೆ ಅಂತ್ಯವಿಲ್ಲ. ಈ ದೇಶಗಳಲ್ಲಿ ಇನ್ನು ಮುಂದೆ ಯಾವುದೇ ಕೊಲೆಗಳು ಮತ್ತು ಅಪರಾಧಗಳಂತಹ ಅಪರಾಧಗಳು ಇರುವುದಿಲ್ಲ ಎಂದಿದ್ದಾನೆ.
Also read: ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಬಿ. ಈರಯ್ಯ ಅವರಿಗೆ ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ
ಪ್ಯಾಲೆಸ್ತೇನ್ ಹಮಾಸ್ ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ನಡೆಸಿದ ದಿಢೀರ್ ದಾಳಿಯಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಪ್ರತಿಕಾರಕ್ಕೆ ಮುಂದಾಗಿರುವ ಇಸ್ರೇಲ್ ಪ್ಯಾಲೆಸ್ಟೀನ್ ಹಮಾಸ್ ಉಗ್ರರನ್ನು ಸದೆ ಬಡೆಯಲು ಪ್ರತಿ ದಾಳಿ ನಡೆಸಿದೆ. ಎರಡು ಕಡೆಯ ದಾಳಿಗಳು ಇಂದಿಗೂ ಮುಂದುವರೆದಿದೆ.
ಜೊತೆಗೆ ಇಸ್ರೇಲಿ ಸೈನಿಕರು ಮತ್ತು ನಾಗರಿಕರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿರುವ ಹಮಾಸ್ ಉಗ್ರರು, ಎಚ್ಚರಿಕೆಯಿಲ್ಲದೆ ದಾಳಿ ಮಾಡಿದರೆ ಬಂಧಿತರಲ್ಲಿ ಒಬ್ಬನನ್ನು ಗಲ್ಲಿಗೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇಸ್ರೇಲ್ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸಿದ ಬಳಿಕ ಈ ವಿಡಿಯೋ ವೈರಲ್ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post