ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಟಿವಿ ಸೀರಿಯಲ್ ಶೂಟಿಂಗ್’ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಸಚಿವ ಆರ್. ಅಶೋಕ್, ಟಿವಿ ಸೀರಿಯಲ್ ಶೂಟಿಂಗ್’ಗೆ ಅನುಮತಿ ನೀಡಲಾಗಿದೆ. ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಸೀರಿಯಲ್ ಶೂಟಿಂಗ್ ಮನೆ ಒಳಗೆ ಮಾತ್ರ ನಡೆಯುತ್ತವೆ. ಹೀಗಾಗಿ ಅನುಮತಿ ನೀಡಿದ್ದೇವೆ ಎಂದರು.
ಕೊರೋನಾ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಬಹುದಾಗಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಚಲನಚಿತ್ರಗಳ ಶೂಟಿಂಗ್’ಗೂ ಅವಕಾಶವಿಲ್ಲ. ರಿಯಾಲಿಟಿ ಶೋಗಳ ಶೂಟಿಂಗ್’ಗೂ ಅವಕಾಶವಿಲ್ಲ. ಮನೆ ಒಳಭಾಗದಲ್ಲಿ ನಡೆಸಲಾಗುವ ಸೀರಿಯಲ್ ಶೂಟಿಂಗ್ ಗೆ ಮಾತ್ರ ಅನುಮತಿ ನೀಡಲಾಗಿದೆ ಎಂದಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093






Discussion about this post