ಕಲ್ಪ ಮೀಡಿಯಾ ಹೌಸ್ | ಹಾರನಹಳ್ಳಿ |
ರೈತರೊಡನೆ ವಿದ್ಯಾರ್ಥಿಗಳು ಸಂಯೋಜನೆಯಿಂದ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಯನ್ನು ಕಲಿಯಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ. ಆರ್.ಸಿ. ಜಗದೀಶ್ ಸಲಹೆ ನೀಡಿದರು.
2021-22ನೇ ಸಾಲಿನ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಆರಮ್ಬ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೇಷ್ಮೆ ಕೃಷಿಯ ಮಹತ್ವ ಹಾಗೂ ಸಮರ್ಪಕ ರೋಗ ನಿರ್ವಹಣೆ ಕುರಿತು ಪ್ರಗತಿಪರ ರೈತ ಮಂಜಪ್ಪ ಮತ್ತು ಸುರೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಶ್ರಮವನ್ನು ಕೃಷಿ ಅಧಿಕಾರಿ ಸತೀಶ್ ಪ್ರೋತ್ಸಾಹಿಸಿದರು. ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸುರೇಶ್, ಗ್ರಾಮದ ರೈತರು, ವಿವಿಯ ವಿದ್ಯಾರ್ಥಿನಿಯರಾದ, ಅಕ್ಷತಾ, ಭಾವನಾ, ಭೂಮಿಕಾ, ಗಗನ, ಸಿಂಧು, ಪ್ರಕೃತಿ, ರಖೀಬಾ, ರೂಪಶ್ರೀ, ರಂಜಿತಾ, ಸ್ವಾತಿ, ವೈಷ್ಣವಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post