ಕಲ್ಪ ಮೀಡಿಯಾ ಹೌಸ್ | ಹಾರನಹಳ್ಳಿ(ಶಿವಮೊಗ್ಗ) |
ನಾನು ಬಂದ ಮಾತ್ರಕ್ಕೆ ಗೀತಾ ಗೆದ್ದು ಬಿಡ್ತಾರೆ ಎಂಬ ಭ್ರಮ ನನಗಿಲ್ಲ. ಬದಲಾಗಿ ನೀವುಗಳು ಮತ ಚಲಾಯಿಸಿ ಬೆಂಬಲಿಸಿದರೆ ಮಾತ್ರ ಆಕೆ ಗೆದ್ದು ನಿಮ್ಮ ಸೇವೆ ಮಾಡಲು ಸಾಧ್ಯ ಎಂದು ನಟ ಶಿವರಾಜಕುಮಾರ್ Shivarajkumar ಹೇಳಿದರು.
ಹಾರನಹಳ್ಳಿಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಬೇಡ ಎಂದು ದೂರ ಇದ್ದೇನೆ. ಕೇವಲ ಗೀತಾಳ ಗಂಡನಾಗಿ ಇಲ್ಲಿ ಬಂದಿದ್ದೇನೆ. ಆಕೆಗೆ ರಾಜಕೀಯ ಅವರ ರಕ್ತದಲ್ಲಿಯೇ ಇದೆ. 38 ವರ್ಷ ನನ್ನ ಜೊತೆ ಸಂಸಾರ ಮಾಡಿ, ಈಗ ರಾಜಕೀಯಕ್ಕೆ ಧುಮುಕಿದ್ದಾರೆ. ಮತದ ಮೂಲಕ ಸಹಾಯ ಮಾಡಿ ಎಂದು ಕೋರಿದರು.

Also read: ಯೂಟ್ಯೂಬ್ ಜ್ಯೋತಿಷ್ಯ ಜಾಹಿರಾತು | ನಂಬಿ ಕರೆ ಮಾಡಿದ್ದ ಶಿವಮೊಗ್ಗದ ಮಹಿಳೆಗೆ ಲಕ್ಷ ಲಕ್ಷ ರೂ. ದೋಖಾ
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ Madhu Bangarappa ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅದೇ, ಧೈರ್ಯದಿಂದ ಗೀತಾಕ್ಕಗೆ ಮತ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದರು.

ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ Geetha Shivrajkumar ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯ ಮಟ್ಟದಲ್ಲಿ ಸಚಿವ ಮಧು ಬಂಗಾರಪ್ಪ ರೈತರ ಕಷ್ಟಗಳಿಗೆ ನೆರವಾದರೆ, ಕೇಂದ್ರದ ಹಂತದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಲು ನಾನು ಶ್ರಮಿಸುತ್ತೇನೆ. ಅದೇ ಕಾರಣಕ್ಕೆ ನನಗೆ ಮತ ನೀಡಿ ಎಂದು ಕೋರಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಶಕ್ತಿ ತುಂಬುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಶಕ್ತರಿಗೆ ನೆರವಾಗಿದ್ದಾರೆ. ಇದರ ಋಣ ತೀರಿಸುವ ಸಕಾಲ ಈಗ ಬಂದಿದೆ ಎಂದರು.

ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಮಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಎಸ್. ರವಿಕುಮಾರ್, ಜಿ.ಡಿ. ಮಂಜುನಾಥ್, ಎನ್. ರಮೇಶ್, ಜಿ. ಪಲ್ಲವಿ, ಕಲಗೋಡು ರತ್ನಾಕರ್, ಎಂ. ಶ್ರೀಕಾಂತ್, ವೈ.ಎಚ್. ನಾಗರಾಜ್, ಚಂದ್ರಭೂಪಾಲ್, ರವಿಕುಮಾರ್, ಮಲೆಶಂಕರ ರಮೇಶ, ಸಿ. ಹನುಮಂತ್, ಇಕ್ಕೇರಿ ರಮೇಶ್, ಅನಿತಾ ಕುಮಾರಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post