ಕಲ್ಪ ಮೀಡಿಯಾ ಹೌಸ್
ಹರಪನಹಳ್ಳಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಲಾಕ್ ಡೌನ್ ಜಾರಿಮಾಡಿರುವುದಕ್ಕೆ ರಾಜ್ಯ ಸರಕಾರದಿಂದ 1250 ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಿರುವ ಮೂಲಕ ರಾಜ್ಯದಲ್ಲಿ ಇನ್ನಷ್ಟು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಕಾಂಗ್ರೇಸ್ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಗಳು ಘೋಷಿಸಿರುವ ಈ ಪ್ಯಾಕೇಜ್ ಅವೈಜ್ಞಾನಿಕವಾಗಿದ್ದು, ರಾಜ್ಯದ ಜನತೆಯು ಸಾಮಾಜಿಕ ಜಾಲತಾಣಗಳಲ್ಲಿ ಪ್ಯಾಕೇಜ್ ಘೋಷಣೆಯ ಬಗ್ಗೆ ಒತ್ತಾಯಿಸುತ್ತಿದ್ದುದ್ದು ಸಾಕಷ್ಟು ವೈರಲ್ ಗಳಾಗಿದ್ದವು. ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾದ್ಯಮಗಳಲ್ಲಿ ಪ್ಯಾಕೇಜ್ ಘೋಷಣೆ ಮಾಡುವಂತೆ ಸರ್ಕಾರವನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದರು. ಹಾಗೂ ವಿರೋಧ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಕಷ್ಟದಲ್ಲಿರುವ ವಿವಿಧ ವಲಯಗಳ ನಾಡಿನ ಜನರಿಗೆ ಪ್ಯಾಕೇಜ್ ನ್ನು ಘೋಸಿಸುವಂತೆ ಒತ್ತಾಯಿಸಿದ್ದರು ಇದರ ಫಲವಾಗಿ ಯಡಿಯೂರಪ್ಪನವರು ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಬಿಜೆಪಿ ಸಚಿವರುಗಳಿಗೆ ಆಡಳಿತದ ಅನುಭವ ಕಡಿಮೆ, ಸಿದ್ಧರಾಮಯ್ಯನವರು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ 10,000 ಕೋಟಿ ರೂ. ಗಳ ಪ್ಯಾಕೇಜ್ ಗೆ ಸಲಹೆ ಕೊಟ್ಟಿದ್ದರು. ಆದರೆ ಮುಖ್ಯಮಂತ್ರಿಯವರು ಕೇವಲ 1,250 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿರುವಂತದ್ದು ಕೇವಲ ಕಣ್ಣೊರೆಸುವ ಮತ್ತು ಸರ್ಕಾರಕ್ಕೆ ಆಗುವ ಮುಜುಗರವನ್ನು ತಪ್ಪಸಿಕೊಳ್ಳುವ ತಂತ್ರವೆಂದು ಹರಿಹಾಯ್ದಿದ್ದಾರೆ.
ದುಡಿಯುವ ವರ್ಗ ಸಂಕಷ್ಟದಲ್ಲಿದೆ, ದುಡಿಮೆ ಇಲ್ಲ, ದುಡ್ಡಿಲ್ಲ ಲಾಕ್ ಡೌನ್ ನಿಂದಾಗಿ ಜನರ ಜೀವನ ಸಂಕಷ್ಟದಲ್ಲಿದೆ ಈ ಸಂದರ್ಭದಲ್ಲಾದರೂ ಯಡಿಯೂರಪ್ಪನವರು ತಮ್ಮ ನಿರ್ಧಾರ ಪುನರ್ ಪರಿಶೀಲಿಸಿ ಜನರ ನೋವಿಗೆ ಸ್ಪಂದಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಸಲಹೆಯಂತೆ ಕನಿಷ್ಟ 10,000 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಲಿ ಹಾಗೂ ಆ ಮೂಲಕ ಕಷ್ಟದಲ್ಲಿರುವ ಬಡ ಜನರ ಸಹಾಯಕ್ಕೆ ಸರ್ಕಾರ ದಾವಿಸುವಂತಾಗಲಿ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post