No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬಾಲ್ಯದಲ್ಲೇ ಹಲವು ಕಲೆಗಳಲ್ಲಿ ಹಿರಿತನ ಸಾಧಿಸಿದ ಬಾಲಕಿ ಖುಷಿ ಹರೀಶ್ ಶೆಟ್ಟಿ

kalpa News by kalpa News
September 23, 2020
in Special Articles
0
ಬಾಲ್ಯದಲ್ಲೇ ಹಲವು ಕಲೆಗಳಲ್ಲಿ ಹಿರಿತನ ಸಾಧಿಸಿದ ಬಾಲಕಿ ಖುಷಿ ಹರೀಶ್ ಶೆಟ್ಟಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸ್ವಾಮಿ ವಿವೇಕಾನಂದರು ಸಾಧಕರ ಕುರಿತು ಒಂದೆಡೆ ಹೀಗೆ ಹೇಳುತ್ತಾರೆ. ಸಾಧನೆ ಸುಮ್ಮನೆ ಆಗುವುದಿಲ್ಲ. ಆ ದಾರಿಯಲ್ಲಿ ನಡೆಯಲು ಕಾಲುಗಳು ಗಟ್ಟಿ ಇದ್ದರೆ ಸಾಲದು. ಸಾಗುವ ಮನಸ್ಸೂ ಇರಬೇಕು. ’ಸಾಧನೆ’ ಎನ್ನುವುದು ಒಂದು ಮೂರಕ್ಷರದ ಪದ. ಸಾಧಕರು ಮಾತ್ರ ಸಾಧನೆಯನ್ನು ತಮ್ಮ ಪದತಲದಲ್ಲಿ ಕೆಡವಿಕೊಳ್ಳಬಲ್ಲರು. ಸಾಧನೆ ಎಂಬ ಈ ಸರಳವಾದ ಪದದಲ್ಲಿ ಸಾವಿರ ದುಮ್ಮಾನಗಳಿರುತ್ತವೆ, ಸಂಕಷ್ಟಗಳಿರುತ್ತವೆ.

ಸಾಧನೆ ಲೋಕದ ಮುನ್ನೆಲೆಗೆ ಬರಬೇಕಾದರೆ ಹಿನ್ನೆಲೆಯಲ್ಲಿ ಸಾಧಕರು ಸತತವಾದ ಅಧ್ಯಯನ, ಚಿಂತನ, ಮಂಥನ ಮಾಡಬೇಕು. ಒಮ್ಮೆ ಹೆಜ್ಜೆ ಇಟ್ಟ ಮೇಲೆ ಗುರುತು ಮೂಡಿಸದೆ ಅಲ್ಲಿಂದ ಕದಲುವುದಿಲ್ಲ ಎಂಬ ಸ್ವಯಂ ಬದ್ಧತೆಗೆ ಒಳಗೊಂಡಿರಬೇಕು. ಸಾಧನೆ ಪ್ರಯತ್ನಿಸದೆ, ಪರಿಶ್ರಮ ಪಡದೆ, ಪರಿತಪಿಸದೆ, ಹಪಹಪಿಸದೆ, ಬೆವರು ಸುರಿಸದೆ, ನಿರಂತರ ಅಭ್ಯಾಸ ಮಾಡದೆ ಸುಲಭವಾಗಿ ಅಥವಾ ಸರಳವಾಗಿ ಬಂದು ಕೈಗೂಡುವುದಿಲ್ಲ. ಎಲ್ಲರಲ್ಲೂ ಜ್ಞಾನ ಅಥವಾ ಪ್ರತಿಭೆ ಎಂಬ ಬೆಳಕು ಇರುತ್ತದೆ. ಈ ಬೆಳಕು ಪ್ರಜ್ವಲಿಸಬೇಕಾದರೆ ಸೂಕ್ತ ಅವಕಾಶ, ವಾತಾವರಣ, ಮಾರ್ಗದರ್ಶನ, ಮಾರ್ಗ ದೊರೆಯಬೇಕಾಗುತ್ತದೆ. ಆದರೂ ಕೆಲವೇ ಕೆಲವು ಮಂದಿಗೆ ಮಾತ್ರ ಅಂತರಂಗದಲ್ಲಿರುವ ಪ್ರತಿಭೆಯನ್ನು ವಿಕಸನಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಪ್ರತಿಭೆಯನ್ನು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ವಿಕಸನಗೊಳ್ಳಿಸಿ ಸಾಧನೆಯ ಹಿರಿತನ ಸಾಧಿಸಿದ ಬಾಲಕಿ ಖುಷಿ ಹರೀಶ್ ಶೆಟ್ಟಿ ಅವರು.


ಹಿಂದಿನ ಕಾಲದಲ್ಲಿ ಮೂರರ ಹರೆಯದ ಮಕ್ಕಳು ತಾಯ ಎದೆ ಹಾಲನ್ನು ಬಿಟ್ಟಿರುವುದಿಲ್ಲ. ಈ ಕಾಲದಲ್ಲಾದರೂ ತಾಯ ಸೆರಗನ್ನಂತು ಬಿಡುವುದಿಲ್ಲ. ಈ ಪ್ರಾಯದಲ್ಲೆ ತನ್ನ ಪುಟ್ಟ ಪುಟ್ಟ ಕಾಲ್ಗಳಿಗೆ ಗೆಜ್ಜೆಕಟ್ಟಿಸಿ ಭರತ ನಾಟ್ಯದ ಹೆಜ್ಜೆ ಹಾಕಿದವರು ಬಾಲೆ ಖುಷಿ ಶೆಟ್ಟಿ. ಗುರು ಇನ್ನಂಜೆ ಸುಕನ್ಯಾ ಭಟ್ ಅವರ ರಾಧಾಕೃಷ್ಣ ನೃತ್ಯ ಅಕಾಡೆಮಿ ಎಂಬ ನೃತ್ಯಶಾಲೆಯ ಶಿಷ್ಯತ್ವದ ದೀಕ್ಷೆ ಪಡೆದವರು. ಆರರ ಹರೆಯದಲ್ಲಿ ’ರಂಗಪ್ರವೇಶ’ (ಆರಂಗೇಟ್ರಂ) ಮಾಡಿ ದಾಖಲೆ ನಿರ್ಮಿಸುತ್ತಾರೆ. ಬೊರಿವೆಲಿ ಪಶ್ಚಿಮದ ಪ್ರಬೋಧನ್ ಠಾಕ್ರೆ ಸಭಾಗೃಹದಲ್ಲಿ ನಡೆದದ್ದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಕಲಾ ರಸಿಕರು ಸಾಕ್ಷಿಯಾಗಿದ್ದರು.

ಸುಮಾರು ಎರಡೂವರೆ ಗಂಟೆಗಳ ನಡೆದಿದ್ದ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಅಲರಿಪು, ನಟೇಶ ಕೌತಕಂ, ಜತಿಸ್ವರಂ, ಶಬ್ದಂ ವರ್ಣ, ಹೇ ರಘುನಂದನ, ಸ್ವಾಗತಂ ಕೃಷ್ಣ ಮೊದಲಾದ ಗೀತೆಗಳಿಗೆ ಹೆಜ್ಜೆ ಹಾಕಿದವರು. ಹಲವು ನಾಟ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದಾರೆ. ಗುರುವಾಯೂರು, ಧರ್ಮಸ್ಥಳ, ಕೊಲ್ಲೂರು, ಉಡುಪಿ, ಬೆಂಗಳೂರು, ಚೋಟ ಚಿದಂಬರಂ, ಮಂತ್ರಾಲಯ, ಮುಂಬೈ, ಪುಣೆ ಮೊದಲಾದ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಮನತಣಿಸಿದ್ದಾರೆ.

ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯ ನಡೆಸಿದ್ದ ’ಮಧ್ಯಮ ಪೂರ್ಣ’’ ಪರೀಕ್ಷೆ ಹಾಗೂ ಕರ್ನಾಟಕ ಬೋರ್ಡು ನಡೆಸುವ ’ಸೀನಿಯರ್’ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ಗುರು ಡಾ. ಸುಕನ್ಯಾ ಭಟ್ ಅವರ ರಾಧಾಕೃಷ್ಣ ನೃತ್ಯ ಅಕಾಡೆಮಿಯ ವತಿಯಿಂದ ನಡೆದ ಭಾರತ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಮೂಹಿಕ ನೃತ್ಯ ಪ್ರದರ್ಶನಲ್ಲಿ ನೃತ್ಯ ಮಾಡಿದ್ದಾರೆ. ಮೀರಾ ರೋಡಿನ ಬಾಳಾ ಸಾಹೇಬ್ ಠಾಕ್ರೆ ಮೈದಾನದಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮ ನಡೆದಿತ್ತು. 738 ಭರತನಾಟ್ಯ ನರ್ತಕಿಯರು ಕಣ್ಣಿಗೆ ಬಟ್ಟೆಕಟ್ಟಿಕೊಂಡು 70 ನಿಮಿಷಗಳ ಕಾಲ ನೃತ್ಯ ಮಾಡಿದ್ದರು.

ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020

2011ರಲ್ಲಿ, ಎತ್ತರ, ಬಿತ್ತರದಿಂದಲೂ ಮಹತ್ತ್‌ ಹಾಗೂ ಬೃಹತಾಗಿರುವ ಚಿಣ್ಣರ ಬಿಂಬ ಸಂಸ್ಥೆಯ ಮೀರಾ ರೋಡ್ ಶಿಬಿರದ ವಿದ್ಯಾರ್ಥಿಯಾಗಿ ಕನ್ನಡ ಶಿಕ್ಷಣ ಪಡೆಯುತ್ತಾರೆ. ಏಕಪಾತ್ರಾಭಿನಯ ಮತ್ತು ಛದ್ಮವೇಷ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ. 2012 ರಲ್ಲಿ ಮದರ್ ಇಂಡಿಯಾ ವಿದ್ಯಾ ಸಂಸ್ಥೆಯವರು ಏರ್ಪಡಿಸಿದ್ದ ’ಭರತ ವೈಭವ’ ನೃತ್ಯ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆಯುತ್ತಾರೆ. ಸಮೂಹ ನೃತ್ಯದಲ್ಲಿ ಇವರ ತಂಡಕ್ಕೆ ದ್ವಿತೀಯ ಬಹುಮಾನ ಬರುತ್ತದೆ. ’ಪಾರ್ಲಾ ಮಹೋತ್ಸವ’ದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುತ್ತಾರೆ. ಯುನೈಟೆಡ್ ಸ್ಪೋರ್ಟ್ಸ್‌ ಕ್ಲಬ್ ಸಂಯೋಜಿಸುತ್ತಿದ್ದ ನಾಟ್ಯ ಸ್ಪರ್ಧೆಯಲ್ಲಿ ಸತತ ನಾಲ್ಕು ವರ್ಷ ಬಹುಮಾನಿತರಾಗಿದ್ದಾರೆ. ಮೀರಾ ರೋಡಿನ ರಾಯಲ್ ಗಲ್ಸರ್ ಹೈಸ್ಕೂಲಿನ ವಿದ್ಯಾರ್ಥಿಯಾಗಿರುವ ಖುಷಿ ಶಾಲಾ ಪಠ್ಯ ಶಿಕ್ಷಣದಲ್ಲಿಯೂ ಅತ್ಯುತ್ತಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಶಾಲೆಯ ಕ್ರಿಡೆಗಳಲ್ಲಿ ಸತತವಾಗಿ ಭಾಗವಹಿಸುತ್ತ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ, ಕರಾಟೆಯನ್ನೂ ಕಲಿತಿದ್ದಾರೆ.

ಬಾಬಾ ಪ್ರಸಾದ್ ಅರಸ್ ಕುತ್ಯಾರು ಅವರ ನೇತೃತ್ವದ ಕಲಾ ಸ್ಪಂದನ ಸಂಸ್ಥೆಯ ಸದಸ್ಯೆಯಾಗಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಂಬೈಯ ಕರ್ನಾಟಕ ಸಂಘದಲ್ಲಿ ನಡೆದಿದ್ದ ಕುವೆಂಪು ಏಕಾಂಕ ನಾಟಕ ಸ್ಪರ್ಧೆಯಲ್ಲಿ ’ಸೋತು ಗೆದ್ದವಳು’ ನಾಟಕದಲ್ಲಿ ನಟಿಸಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಇದೇ ನಾಟಕವು ಮುದ್ರಾಡಿಯ ನಾಟ್ಕದೂರು ನವರಂಗೋತ್ಸವ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಾಗ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಾಸ್ತ್ರೀಯವಾದ ಭರತ ನಾಟ್ಯ, ಜಾನಪದ, ಆಧುನಿಕ ನೃತ್ಯ, ರಂಗಭೂಮಿಯೊಂದಿಗೆ ಪಳಗಿರುವ ಖುಷಿಯವರು ಕರ್ನಾಟಕ ಕರಾವಳಿಯ ಗಂಡುಕಲೆ ಯಕ್ಷಗಾನದ ಉಭಯ ತಿಟ್ಟುಗಳನ್ನು ನಿಯತವಾಗಿ ಕಲಿತವರು. ಬಡಗು ತಿಟ್ಟು ಯಕ್ಷಗಾನವನ್ನು ಯಕ್ಷಗುರು ಶಂಕರ್ ನಾಯಕ್ ಎಳ್ಳಾರೆ ಅವರ ಯಕ್ಷ ವೈಭವ ಮಕ್ಕಳ ಮೇಳದ ಸದಸ್ಯೆಯಾಗಿ ಅಭ್ಯಾಸ ಮಾಡಿದವರು.


ಬಾಲಗೋಪಾಲ, ಪಿಠೀಕಾ ಸ್ತ್ರೀವೇಷಗಳನ್ನು ತನ್ನ ನೃತ್ಯ ಚತುರತೆಯಿಂದ ಮೆಚ್ಚುವಂತೆ ಅಭಿನಯಿಸುತ್ತಾರೆ. ಸುಧನ್ವಾರ್ಜುನದ ಕುವಲೆ, ಪ್ರಭಾವತಿ, ವೃಷಕೇತು, ಪ್ರದ್ಯುಮ್ನ ಮುಂತಾದ ಪಾತ್ರಗಳಲ್ಲಿ ಮಿಂಚಿದವರು. ಪ್ರಭಾವತಿಯಾಗಿ ’ಸತಿ ಶಿರೋಮಣಿ’ ಹಾಗೂ ’ಆವಲ್ಲಿಗೆ ಪಯಣವಯ್ಯ’ ಹಾಡುಗಳಿಗೆ ವೃತ್ತಿಪರ ಕಲಾವಿದರಂತೆ ಅಭಿನಯಿಸುತ್ತಾರೆ. ಪಾಪಣ್ಣ ವಿಜಯದ ಯಕ್ಷಿಣಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತೆಂಕು ತಿಟ್ಟಿನ ಯಕ್ಷಗಾನವನ್ನು ಯಕ್ಷಗುರುಗಳಾದ ಸದಾನಂದ್ ಶೆಟ್ಟಿ ಕಟೀಲು ಹಾಗೂ ನಾಗೇಶ್ ಪೊಳಲಿಯವರಿಂದ ಕಲಿತವರು. ದೇವಿ ಮಹಾತ್ಮೆಯ ಮಾಲಿನಿ, ಸುದರ್ಶನ ವಿಜಯದ ಲಕ್ಷ್ಮೀ, ಛಲದಂಕ ಮಲ್ಲ ಕೌರವೇಶ್ವರದ ಕೃಷ್ಣ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಭಾಗೀರಥಿ, ಶನೀಶ್ವರ ಮಹಾತ್ಮೆಯ ಅಲೋಲಿಕೆ ಮುಂತಾದ ಪಾತ್ರಗಳನ್ನು ಯಕ್ಷರಸಿಕರು ಮೆಚ್ಚುವಂತೆ ನಿರ್ವಹಿಸುತ್ತಾರೆ.

ಸಂದ ಪ್ರಶಸ್ತಿ ಪುರಸ್ಕಾರಗಳು
ಪ್ರತಿಭೆಯೊಂದಿಗೆ ಪರಿಶ್ರಮವೂ ಮೇಳೈಸಿದರೆ ಪಲಿತಾಂಶ ಮತ್ತು ಪರಿಣಾಮಗಳೂ ಕಳೆಗಟ್ಟುವುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗೆ ಕೊನರಿದ ಖುಷಿ ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಹಲವು ಪ್ರಶಸ್ತಿ ಪುರಸ್ಕಾರಗಳು ಪ್ರಾಪ್ತವಾಗಿವೆ. ಮುಂಬೈಯ ದೈನಿಕ, ಮಾಸಿಕಗಳಲ್ಲಿ ಅವರ ಕುರಿತ ಲೇಖನಗಳು ಬಂದಿವೆ.

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪ್ರಶಸ್ತಿ, ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ, ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಲೋಕ ಕಲ್ಯಾಣ ಮಾನವ ಸೇವಾ ಪ್ರಶಸ್ತಿ, ದಾನ ಪ್ರಕಾಶ ಶ್ರೀ ಎನ್. ತಿಮ್ಮಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಾ ಟ್ರಸ್ಟ್‌ ಬೆಂಗಳೂರು ಇವರಿಂದ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ನಾಟ್ಯ ಮಯೂರಿ ಪ್ರಶಸ್ತಿ, ಯಕ್ಷ ತುಳು ಪರ್ಬ ಸಮಿತಿ ಕುಡ್ಲ ಇವರಿಂದ ಪ್ರತಿಭಾ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಬೊರಿವೆಲಿ ಕ್ಷೇತ್ರದ ಲೋಕಸಭಾ ಸದಸ್ಯ ಶ್ರೀ ಗೋಪಾಲ ಶೆಟ್ಟಿಯವರಿಂದ ಸನ್ಮಾನ, ಅಪ್ಪಾಜಿಬೀಡು ರಮೇಶ್ ಗುರುಸ್ವಾಮಿ ದಂಪತಿಗಳಿಂದ ಸನ್ಮಾನ, ಯಕ್ಷ ಕಲಾ ರಕ್ಷಣಾ ವೇದಿಕೆ ಮುಂಬಯಿ ಇವರಿಂದ ಸನ್ಮಾನಗಳು ಸಂದಿವೆ. ಯಕ್ಷಗಾನ ವಿಮರ್ಶಕ ಪ್ರಸಂಗಕರ್ತ, ಕಲಾವಿದರೂ ಆಗಿರುವ ಕೋಲ್ಯಾರು ರಾಜು ಶೆಟ್ಟಿಯವರಿಂದ ಹಾಗೂ ಯಕ್ಷಗಾನದ ಹಿತಚಿಂತಕ, ಕಲಾ ಪೋಷಕರೂ ಆಗಿರುವ ಪೊಲ್ಯ ಉಮೇಶ್ ಶೆಟ್ಟಿಯವರಿಂದ ಶ್ಲಾಘನೆಗೆ ಪಾತ್ರರಾದವರು ಖುಷಿ.

ಮುಂಬೈ, ಮೀರಾ ರೋಡಿನ ನಿವಾಸಿ, ಹೋಟೆಲ್ ಉದ್ಯಮಿ, ನಿಂಜೂರು ಹರೀಶ್ ಶೆಟ್ಟಿ ಹಾಗೂ ಪಂಜಿಮಾರು ಜಲಜ ನಿವಾಸ ವಿನಯ ಶೆಟ್ಟಿ ದಂಪತಿಗಳ ಪ್ರಥಮ ಪುತ್ರಿ ಖುಷಿ ಪ್ರಸ್ತುತ ಹತ್ತನೆ ತರಗತಿಯ ವಿದ್ಯಾರ್ಥಿ. ಎರಡನೆ ಮಗಳು ಕೃತಿ ಆರನೆ ತರಗತಿಯ ವಿದ್ಯಾರ್ಥಿ. ಖುಷಿ ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಕಲಾ ಬದುಕು ಹಸನಾಗುತ್ತ ಸಾಗಲಿ. ಅವರಿಂದ ಮತ್ತಷ್ಟು ಕಲಾ ಸೇವೆ ನಡೆಯಲಿ.


Get In Touch With Us info@kalpa.news Whatsapp: 9481252093

Tags: coastal newsKannada News WebsiteLatest News KannadaMumbaiSouth KendraSpecial ArticleYakshaganaಖುಷಿ ಹರೀಶ್ ಶೆಟ್ಟಿದಕ್ಷಿಣ ಕನ್ನಡಮುಂಬೈ
Share223Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೆಹಲಿಯ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಶಿವಮೊಗ್ಗ ನಾಗರಾಜ್‌ಗೆ ಚಿನ್ನ ಬೆಳ್ಳಿ ಪದಕ

Next Post

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶ: ಪ್ರಧಾನಿ ಮೋದಿ ದಿಗ್ಬ್ರಮೆ

kalpa News

kalpa News

Next Post
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶ: ಪ್ರಧಾನಿ ಮೋದಿ ದಿಗ್ಬ್ರಮೆ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶ: ಪ್ರಧಾನಿ ಮೋದಿ ದಿಗ್ಬ್ರಮೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL