ಕಲ್ಪ ಮೀಡಿಯಾ ಹೌಸ್ | ಹಾಸನ |
ಸಾಮಾನ್ಯವಾಗಿ ಎಲ್ಲರಿಗೂ ಒಬ್ಬರು ತಾಯಿ ಇರುತ್ತಾರೆ. ಆದರೆ, ಸ್ವರೂಪ್’ಗೆ ಇಬ್ಬರು ತಾಯಂದಿರು ಎಂದು ಜೆಡಿಎಸ್ ನಾಯಕಿ ಭವಾನಿ ರೇವಣ್ಣ Bhavani Revanna ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.
ಪತಿ ರೇವಣ್ಣ, ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ HPSwaroop ಹಾಗೂ ಸಾವಿರಾರು ಮುಖಂಡರೊAದಿಗೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನಂತರ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಹಾಸನ ಅಭ್ಯರ್ಥಿ ಯಾರು ಅಂತ ಗೊಂದಲ ಇತ್ತು. ನಾನು ಕೂಡ ಆಕಾಂಕ್ಷಿ ಆಗಿದ್ದೆ. ನನ್ನ ಜೊತೆ ನೀವು ನಿಂತಿದ್ದು ನಿಜ. ಆದರೆ ದಿನ ಕಳೆದಂತೆ ದೇವೇಗೌಡರ ಆದೇಶ ಧಿಕ್ಕರಿಸಲು ಆಗಲಿಲ್ಲ. ಹಾಗಾಗಿ ನಾನೇ ತೀರ್ಮಾನ ಮಾಡಿ ಕುಮಾರಣ್ಣ ಅವರಿಗೆ ಸ್ಚರೂಪನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದೆ. ಈಗ ಸ್ವರೂಪ್’ಗೆ ಇಬ್ಬರು ತಾಯಂದಿರು. ಲಲಿತಕ್ಕ ಹೆತ್ತವಳು. ನಾನು ಈ ಭಾರ ಹೊತ್ತುಕೊಂಡವಳು ಎಂದು ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post