ಕಲ್ಪ ಮೀಡಿಯಾ ಹೌಸ್ | ಹಾಸನ |
ವಿಶ್ವವಿಖ್ಯಾತ ಬೇಲೂರು #Belur ಶ್ರೀ ಚನ್ನಕೇಶವ ಸ್ವಾಮಿಯವರ ಬ್ರಹ್ಮ ರಥೋತ್ಸವ ಎಪ್ರಿಲ್ 10ರಂದು ನಡೆಯಲಿದ್ದು, ಎಪ್ರಿಲ್ 2ರಿಂದ 15ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕುರಿತಂತೆ ದೇವಾಲಯದ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದು, ಎಪ್ರಿಲ್ 2ರಿಂದ 15ರವರೆಗೂ ರಥೋತ್ಸವದ #Rathotsava ಕಾರ್ಯಕ್ರಮಗಳು ನಡೆಯಲಿವೆ ಎಂದದಿದ್ದಾರೆ.
Also Read>> ಸೊರಬ | ಶೀಗೇಹಳ್ಳಿ ಸಮೀಪ ಅರಣ್ಯಕ್ಕೆ ಬೆಂಕಿ | ಅಪಾರ ಪ್ರಾಕೃತಿಕ ಸಂಪತ್ತು ನಾಶ
ಯಾವತ್ತು ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಎಪ್ರಿಲ್ 2: ಶ್ರೀಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ಅನುಜ್ಞೆ, ಮೃತ್ತಿಕಾ ಸಂಗ್ರಹ ಪೂರ್ವಕ ಅಂಕುರಾರ್ಪಣ, ಅಧಿವಾಸರ, ರಕ್ಷಾ ಬಂಧನ ಹಾಗೂ ದಿವ್ಯ ಶಾರದಾಲಂಕಾರೋತ್ಸವ.
ಎಪ್ರಿಲ್ 3: ರಾತ್ರಿ-ನಿಶ್ಚಿತಾರ್ಥ ಪೂರ್ವಕ ದಿವ್ಯ ಕಲ್ಯಾಣೋತ್ಸವ ಮತ್ತು ಗರುಡ ಪ್ರತಿಷ್ಠೆ.

ಎಪ್ರಿಲ್ 5: ಹಗಲು- ಸೂರ್ಯಮಂಡಲಾರೋಹಣೋತ್ಸವ, ರಾತ್ರಿ- ದಿವ್ಯ ಅನಂತಪೀಠಾರೋಹಣೋತ್ಸವ(ಶೇಷವಾಹನ).
ಎಪ್ರಿಲ್ 6: ಹಗಲು- ದಿವ್ಯ ಅನಂತ ಪೀಠಾರೋಹಣೋತ್ಸವ(ಶೇಷವಾಹನ) ನಾಗವಲ್ಲಿ ಮಹೋತ್ಸವ, ರಾಮನವಮಿ ಉರುಟಣೆ, ರಾತ್ರಿ- ದಿವ್ಯ ಹಂಸಾರೋಹಣೋತ್ಸವ ಮತ್ತು ದಿವ್ಯ ಬೆಳ್ಳಿ ಮಂಟಪೋತ್ಸವ.
ಎಪ್ರಿಲ್ 7: ಹಗಲು- ಹಂಸಾರೋಹಣೋತ್ಸವ, ಕನಕಾಂದೋಳಿಕಾರೋಹಣೋತ್ಸವ ಮತ್ತು ದಿವ್ಯ ಪುಷ್ಪ ಮಂಟಪಾರೋಹಣೋತ್ಸವ, ರಾತ್ರಿ ವಿದ್ಯುತ್ ದೀಪಾಲಂಕೃತವಾದ ದಿವ್ಯ ಬೆಳ್ಳಿ ಮಂಟಪೋತ್ಸವ.
ಎಪ್ರಿಲ್ 8: ಹಗಲು- ಪುಷ್ಪ ಮಂಟಪಾರೋಹಣೋತ್ಸವ, ರಾತ್ರಿ- ಪ್ರಭಾ ಸಮೇತ ಗರುಢಾರೋಹಣೋತ್ಸವ ಮತ್ತು ದಿವ್ಯ ಹನುಮಂತೋತ್ಸವ.
ಎಪ್ರಿಲ್ 9: ಪ್ರಹ್ಲಾದ ಪರಿಪಾಲನೋತ್ಸವ ಮತ್ತು ಕುಂಕುಮ ವಸಂತ ಪೂರ್ವಕ ದಿವ್ಯ ಗರುಡೋತ್ಸವ.

ಎಪ್ರಿಲ್ 11: ಹಗಲು- ನಾಡಿನ ದಿವ್ಯ ರಥೋತ್ಸವ ಮತ್ತು ಶಾಂತಿ ಉತ್ಸವ ಹನುಮಮತಾರೋಹಣೋತ್ಸವ. ರಾತ್ರಿ- ದಿವ್ಯ ಡೋಲೋತ್ಸವ.
ಎಪ್ರಿಲ್ 12: ಹಗಲು- ಅಶ್ವಾರೋಹಣ ಪೂರ್ವಕ ಲಕ್ಷ್ಮೀ ಪ್ರಣಯ ಕಲಹ, ಸಂಧಾನ ಸೇವೆ, ಅವಭೃತ, ದಿವ್ಯ ಪೂರ್ಣಾಹುತಿ ಮತ್ತು ಫಣಿಮಾಲೆ, ರಾತ್ರಿ- ದಿವ್ಯ ತೆಪ್ಪೋತ್ಸವ.
ಎಪ್ರಿಲ್ 13: ಹಗಲು- ಮಹಾಭಿಷೇಕ, ಪುಷ್ಪಯಾಗ. ರಾತ್ರಿ- ದಿವ್ಯ ಸಿಂಹಾರೋಹಣೋತ್ಸವ ಮೂಲಬಲಿ.
ಎಪ್ರಿಲ್ 14: ಹಗಲು- ಗಜಾರೋಹಣ, ರಾತ್ರಿ-ಭಜಾಮ್ಯಹಂ. ದಿವ್ಯ ಮೋಹಿನಿ ಅಲಂಕಾರೋತ್ಸವ.
ಎಪ್ರಿಲ್ 15: ರಾತ್ರಿ- ಶಯನೋತ್ಸವ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post