ಕಲ್ಪ ಮೀಡಿಯಾ ಹೌಸ್ | ಹಾಸನ |
ದೇಶದಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ಮಾತ್ರ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕತ ಸುಸ್ಥಿರತೆ ಸಾಧ್ಯವಾಗ ಬಲ್ಲದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ #Cheluvarayaswamy ಅಭಿಪ್ರಾಯಪಟ್ಟಿದ್ದಾರೆ.
ಕಾರೆ ಕೆರೆ ಕೃಷಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಗೆ ನೀಡಿರುವ ಆದ್ಯತೆ ಕಡಿಮೆಯಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದರು.
Also read: ದಾಖಲೆಗಾಗಿ ಅಷ್ಟೇ ಐಪಿ ಸೆಟ್ RR ನಂಬರ್’ಗಳಿಗೆ ಅಧಾರ್ ಜೋಡಣೆ: ಸಚಿವ ಜಾರ್ಜ್

ಕೇವಲ ಉದ್ಯೋಗಕ್ಕಾಗಿ ಕೃಷಿ ಕಾಲೇಜಿನಲ್ಲಿ ಕಲಿಯದೆ ಇತರರಿಗೆ ಕೆಲಸ ನೀಡುವಂತೆ ಬೆಳೆಯಬೇಕು. ನೀವು ಪಡೆಯುವ ಶಿಕ್ಷಣ, ಮಾಡುವ ಸಂಶೋಧನೆ ಕೃಷಿಕರಿಗೆ ಸುಲಭವಾಗಿ ಸಿಗುವಂತಾಗಲಿ. ಕಾರೆಕೆರೆ ಕಾಲೇಜಿಗೆ ಹಾಸ್ಟೆಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post