ಕಲ್ಪ ಮೀಡಿಯಾ ಹೌಸ್ | ಹಾಸನ |
ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ತಿಮ್ಮನಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತ ಮಕ್ಕಳನ್ನು ಜೀವನ್ (13), ಸಾತ್ವಿಕ್ (11) ವಿಶ್ವ(12), ಪೃಥ್ವಿ (12) ಎಂದು ಗುರುತಿಸಲಾಗಿದೆ.
ಮೃತ ಎಲ್ಲ ಮಕ್ಕಳನ್ನೂ ಮುತ್ತಿಗೆ ಗ್ರಾಮದವರು ಎಂದು ಗುರುತಿಸಲಾಗಿದೆ.
Also read: ಕಾಂಗ್ರೆಸ್’ಗೆ ಬಂಡಾಯದ ಬಿಸಿ: ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಮೇಶ್ ಶೆಟ್ಟಿ ನಾಮಪತ್ರ
ಐವರು ಬಾಲಕರು ಇಲ್ಲಿನ ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿ ಈಜಲು ಇಳಿದ ವೇಳೆ ಒಬ್ಬರ ಹಿಂದೆ ಒಬ್ಬರು ಮುಳುಗಿದ್ದಾರೆ. ಈ ಪೈಕಿ ಒಬ್ಬ ಬಾಲಕ ಸ್ವಲ್ಪದರಲ್ಲಿ ಪಾರಾಗಿ ನಿವಾಸಿಗಳಿಗೆ ತಿಳಿಸಿದ್ದಾನೆ.
ಆದರೆ, ನಿವಾಸಿಗಳು ಕೆರೆ ಬಳಿ ಬಂದ ನೋಡುವ ವೇಳೆ ನಾಲ್ವರೂ ಬಾಲಕರು ಮೃತಪಟ್ಟಿದ್ದಾರೆ.
ನಾಲ್ವರು ಬಾಲಕರ ಮೃತದೇಹ ಇನ್ನೂ ದೊರಕಬೇಕಿದೆ. ಅಗ್ನಿಶಾಮಕ ಸಿಬ್ಬಂದಿ ಬಾಲಕರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























