ಕಲ್ಪ ಮೀಡಿಯಾ ಹೌಸ್ | ಹಾಸನ |
ಜಿಲ್ಲೆಯಲ್ಲಿ ಹೃದಯಾಘಾತ ಸಾವಿನ ಪ್ರಕರಣ #Heartattack Death Case ಹೆಚ್ಚಳ ಹಿನ್ನೆಲೆ ಸರ್ಕಾರ ಈ ಕೂಡಲೇ ಜಯದೇವ ವೈದ್ಯರ ತಂಡವನ್ನು ನಗರಕ್ಕೆ ಕಳುಹಿಸಿ ಬೃಹತ್ ಹೃದಯ ತಪಾಸಣಾ ಶಿಬಿರ ಆಯೋಜಿಸಬೇಕು. ಮೈಸೂರು ಮಾದರಿಯಲ್ಲಿ ಜಯದೇವ ಆಸ್ಪತ್ರೆಯ #Jayadeva Hospital ಘಟಕವನ್ನು ತೆರೆದುಬೇಕು ಎಂದು ಜೆಡಿಎಸ್ #JDS ಆಗ್ರಹಿಸಿದೆ.
ನಗರದ ಹಿಮ್ಸ್ ಆಸ್ಪತ್ರೆಯಲ್ಲಿ #HIMS Hospital ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, #H D Revanna ಎ.ಮಂಜು, ಸ್ವರೂಪ್ ಪ್ರಕಾಶ್ ಹಾಗೂ ಸಿ.ಎನ್.ಬಾಲಕೃಷ್ಣ ಅವರ ತಂಡ ಹಿಮ್ಸ್ ನಿರ್ದೇಶಕರು, ವೈದ್ಯರೊಂದಿಗೆ ಸುದೀರ್ಘ ಸಭೆ ನಡೆಸಿ ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣ ಹಾಗೂ ಪರಿಹಾರ ಮಾರ್ಗಗಳ ಕುರಿತು ಚರ್ಚಿಸಿ ಮಾಹಿತಿ ಪಡೆದರು.
ಜಿಲ್ಲೆ ಸಹಿತ ರಾಜ್ಯದಲ್ಲಿ ಹೃದಯಾಘಾತ ಸಾವಿನ ಪ್ರಕರಣ ಹೆಚ್ಚುತ್ತಿವೆ. ಇದರಿಂದ ಜನತೆ ಗಾಬರಿಯಾಗಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಹೀಗಾಗಿ ಸರಕಾರ ಕೂಡಲೇ ಹಾಸನದಲ್ಲಿ ಹೃದದು ತಪಾಸಣೆ ಬೃಹತ್ ಶಿಬಿರ ಆಯೋಜಿಸಬೇಕು. ಇಲ್ಲವಾದರೆ ನಾವೇ ಹಣ ಹಾಕಿ ಶಿಬಿರ ಆಯೋಜಿಸುತ್ತೇವೆ’ ಎಂದು ಶಾಸಕ ರೇವಣ್ಣ ಎಚ್ಚರಿಸಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೆಡಿಕಲ್ ಕಾಲೇಜಿನಲ್ಲಿ ಕ್ಯಾತ್ ಲ್ಯಾಬ್ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಹಾಸನದ ಹಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಸಭೆ ನಡೆಯಿತು. ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಡಿಎಚ್ ಒ ಡಾ.ಅನಿಲ್ ಇದ್ದರು.
ಹೃದಯ ಚಿಕಿತ್ಸಾ ಘಟಕಕ್ಕೆ ರೂ. 20 ಕೋಟಿ ಅಗತ್ಯ
ಹೃದಯಾಘಾತದಿಂದ ಮೇನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದದ್ದು ಮಾಧ್ಯಮಗಳಲ್ಲಿ ಬಂದ ವರದಿ. ಹೃದಯಾಘಾತ ಚಿಕಿತ್ಸಾ ವಿಭಾಗಕ್ಕೆ 20 ಕೋಟಿ ರೂ. ಅಗತ್ಯವಿದೆ. ವೈದ್ಯರ ನೇಮಕವಾಗಬೇಕಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ ತಿಳಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಇಸಿಜಿ, ಎಕೋ ಪರೀಕ್ಷೆ ಮಾಡಬೇಕು. ಹೃದಯಾಘಾತ ತಡೆಗೆ ಕೇವಲ ಸೌಲಭ್ಯವಷ್ಟೇ ಅಲ್ಲ, ತಜ್ಞವೈದ್ಯರು ಬೇಕಲ್ಲವೇ’ ಎಂದು ಪ್ರಶ್ನಿಸಿದ ಶಾಸಕ ಎ. ಮಂಜು, ಆಸ್ಪತ್ರೆಗೆ ಏನು ಸೌಲಭ್ಯಬೇಕು ಎಂಬ ಮಾಹಿತಿ ನೀಡಿದರೆ ಸರಕಾರದ ಮಟ್ಟದಲ್ಲಿ ಮಂಜೂರು ಮಾಡಿಸುತ್ತೇವೆ. ಎರಡು ಅಥವಾ ಮೂರು ಲಕ್ಷ ರೂ. ವೆಚ್ಚವಾದರೆ ಶಾಸಕರ ಅನುದಾನದಲ್ಲೇ ಕೊಡುತ್ತೇವೆ ಎಂದು ಹೇಳಿದರು.
ಬಳಕೆದಾರರ ಶುಲ್ಕದಿಂದ (ಯೂರ್ಸ ಫಂಡ್) ಸಂಗ್ರಹವಾದ 20 ಕೋಟಿ ರೂ. ಇದೆ. ಅದರಲ್ಲೇ ಕ್ಯಾತ್ ಲ್ಯಾಬ್’ಗೆ ಅಗತ್ಯವಾದ ಯಂತ್ರೋಪಕರಣ ತರಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಆಯಾ ವಿಭಾಗದ ಎಚ್’ಒಡಿ ಕೆಲಸ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರೆಯಬೇಕು. ವೈದ್ಯರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ನಿಟ್ಟೂರು ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ನರ್ಸ್’ಗಳ ನೇಮಕ ಮಾಡಬೇಕು. ಈ ಸಂಬಂಧ ಡಿಎಚ್ ಒ ಕ್ರಮಕೈಗೊಂಡು ರೋಗಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಮಾಡುತ್ತಾರೋ ಅಥವಾ ಇಲ್ಲವೋ ಎಂಬು ದನ್ನು ಸಿಸಿ ಕ್ಯಾಮೆರಾ ಅಳವಡಿಸಿ ಪರಿಶೀಲಿಸ ಬೇಕು. ಆಸ್ಪತ್ರೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು. ನಿಮಗೆ ಸಮಯಾವಕಾಶ ನೀಡುತ್ತೇವೆ. ಆಸ್ಪತ್ರೆಯ ಸಮಸ್ಯೆ ಸರಿಪಡಿಸ ಬೇಕು ಎಂದು ತಾಕೀತು ಮಾಡಿದರು.
ವಾರದಲ್ಲಿ ಒಂದು ದಿನ ಆಸ್ಪತ್ರೆಗೆ ಭೇಟಿ ನೀಡಿ ಕುಂದು ಕೊರತೆ ಪರಿಶೀಲಿಸಬೇಕು. ನಿಮ್ಮ ಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ಶಾಸಕ ಸ್ವರೂಪ್’ಗೆ ರೇವಣ್ಣ ಸಲಹೆ ನೀಡಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಮೈಸೂರು ಮಾದರಿಯ ಜಯದೇವ ಘಟಕವನ್ನು ಹಾಸನದಲ್ಲಿ ತೆರೆಯಲು ಸಿಎಂಗೆ ಮನವಿ ಸಲ್ಲಿಸೋಣ ಎಂದು ಸಲಹೆ ನೀಡಿದರು.
ಡಿಎಚ್’ಒ ಡಾ.ಅನಿಲ್, ಹಿಮ್ಸ್’ನ ಆರ್ ಡಾ.ರಾಘವೇಂದ್ರ ಪ್ರಸಾದ್, ಡಾ.ಮನುಪ್ರಕಾಶ್, ಡಾ.ಪ್ರವೀಣ್ ಸೇರಿ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post