ಕಲ್ಪ ಮೀಡಿಯಾ ಹೌಸ್ | ಹಾಸನ |
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ವಿಜಯನಗರ ಫೀಡರ್ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು.18 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿಜಯನಗರ, ತಣ್ಣೀರುಹಳ್ಳ, ಎ.ಪಿ.ಎಂ.ಸಿ ಯಾರ್ಡ್, ಗುಡ್ಡೇನಹಳ್ಳಿ, ಗುಡ್ಡೇನಹಳ್ಳಿ ಕೊಪ್ಪಲು, ಚಿಕ್ಕಮಂಡಿಗನಹಳ್ಳಿ, ಗುಹೆಕಲ್ಲಮ್ಮ ದೇವಸ್ಥಾನದ ಹತ್ತಿರ, ದೊಡ್ಡಮಂಡಿಗನಹಳ್ಳಿ, ಹಾಲುವಾಗಿಲು, ಸಕಲೇಶಪುರ ರಸ್ತೆ, ಅಶೋಕ, ರಾಘವೇಂದ್ರ ನಗರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾ.ವಿ.ಸ.ನಿ.ನಿ., ಕಾರ್ಯ ಮತ್ತು ಪಾಲನಾ ಹಾಸನ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post