ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೈಲುಗಳ ಸಂಚಾರದ ಸಮಯ ಪಾಲನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ರೈಲು ಸಂಖ್ಯೆ 11312 ಹಾಸನ – ಸೋಲಾಪುರ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಹೊಸ ವೇಳಾಪಟ್ಟಿಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಹಾಸನ #Hassan ನಿಲ್ದಾಣದಿಂದ 16.45ರ ಬದಲಿಗೆ 16.15 ಗಂಟೆಗೆ ನಿರ್ಗಮಿಸಲಿದೆ. ಮಾರ್ಗಮಧ್ಯದ ನಿಲ್ದಾಣಗಳಾದ ಶ್ರವಣಬೆಳಗೊಳ (16.53/16.54), ಬಿ.ಜಿ. ನಗರ (17.23/17.24), ಎಡೆಯೂರು (17.37/17.38), ಕುಣಿಗಲ್ (17.53/17.54) ಮತ್ತು ನೆಲಮಂಗಲ (18.25/18.26) ನಿಲ್ದಾಣಗಳಿಗೂ ಪರಿಷ್ಕೃತ ಸಮಯದನ್ವಯ ಆಗಮಿಸಿ, ನಿರ್ಗಮಿಸಲಿದೆ.
ಯಶವಂತಪುರ ಮತ್ತು ಸೋಲಾಪುರ #Solapur ನಿಲ್ದಾಣಗಳ ನಡುವಿನ ರೈಲು ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















