ಕಲ್ಪ ಮೀಡಿಯಾ ಹೌಸ್ | ಹಾಸನ |
ಆರಂಭದ ದಿನದಿಂದ ಬುಧವಾರ ಮುಂಜಾನೆ ವರೆಗೆ 8,84,503 ಜನರು ಹಾಸನಾಂಬೆ #Hasanamba ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ #Minister Krishna Bairegowda ತಿಳಿಸಿದರು.
ಸಿಎಂ ಎದುರು ಈ ಮಾಹಿತಿ ನೀಡಿದ ಅವರು, ಕಳೆದ ವರ್ಷ 1 ದಿನ 1 ಲಕ್ಷ ಜನ ಬಂದಿದ್ದರೆ, ಈ ಬಾರಿ 2 ಲಕ್ಷ ಬಂದಿದ್ದಾರೆ ವಿವರಿಸಿದರು.
ಕಳೆದ 3 ದಿನಗಳಿಂದ ಸರಾಸರಿ 2 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಧರ್ಮದರ್ಶನ ಪೂರ್ಣಗೊಳ್ಳಲು 10 ಗಂಟೆ ಸಮಯ ತೆಗೆದು ಕೊಳ್ಳುತ್ತಿತ್ತು. ಈ ವರ್ಷ ಹೆಚ್ಚು ಜನ ಬಂದರೂ 5 ಗಂಟೆ ಮೀರಿಲ್ಲ ಎಂದು ವಿವರಿಸಿದರು.

ಭಕ್ತರಿಗೆ ನೀರು ಮಜ್ಜಿಗೆ, ಶೌಚಾಲಯ, ಮಳೆಗೆ ತೊಂದರೆ ಆಗದಂತೆ ಜರ್ಮನ್ ಟೆಂಟ್ ಹಾದ್ದೇವೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದರು.
ದರ್ಶನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದ್ವಿಗುಣ ವಾಗಿರುವುದರಿಂದ ಸರಾಸರಿ 3-4 ಗಂಟೆ ಸಮಯ ತೆಗೆದು ಕೊಳ್ಳುತ್ತದೆ. ಆದರೆ ಎಲ್ಲರಿಗೂ ಸುಗಮವಾಗಿ ದರ್ಶನ ಆಗುತ್ತಿದೆ ಎಂದು ತಿಳಿಸಿದರು.

ತಮ್ಮ ಸೂಚನೆ ಮೇರೆಗೆ ಸಾಮಾನ್ಯ ಜನರಿಗೆ ದರ್ಶನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post