ಕೊಡಗು: ಪ್ರಕೃತಿಯ ನಾಡು ಕೊಡಗಿನ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸಾವಿರಾರು ಮಂದಿ ಸೂರು ಕಳೆದುಕೊಂಡು, ಜೀವನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದು, ಮತ್ತೆ ತಮ್ಮ ಜೀವನ ಕಟ್ಟಿಕೊಳ್ಳುವುದು ಇವರಿಗೆಲ್ಲಾ ಸವಾಲಾಗಿ ಪರಿಣಮಿಸಿದೆ. ಇಂತಹ ಪ್ರವಾಹಕ್ಕೆ ಸಿಲುಕಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಭೀಕರ ಪ್ರವಾಹಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ 2 ತಿಂಗಳ ಮಗುವನ್ನು ರಕ್ಷಿಸಿದ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಮಾನವೀಯತೆಯನ್ನು ಮೆರೆದಿದೆ.
ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಎರಡು ತಿಂಗಳ ಮಗುವನ್ನು ರಕ್ಷಿಸಿದ ಮಹತ್ವದ ಕ್ಷಣ.. #KodaguFloods #KarnatakaRains #Karnataka pic.twitter.com/TFMy4Yyrha
— CM of Karnataka (@CMofKarnataka) August 19, 2018
ಪ್ರವಾಹದ ಒಂದು ಭಾಗದಲ್ಲಿ ಸಿಲುಕಿದ್ದವರನ್ನು ರಕ್ಷಿಸುವ ವೇಳೆ 2 ತಿಂಗಳ ಮಗುವೂ ಸಹ ಸಿಲುಕಿತ್ತು. ಇನ್ನೇನು ಮಗು ಬದುಕುವುದು ಅಸಾಧ್ಯ ಎಂಬ ಸಮಯದಲ್ಲಿ ಸಾಹಸೀತನ ಮೆರೆದ ಯೋಧರು ಅದರಲ್ಲೂ ಓರ್ವ ಯೋಧ ತನ್ನ ಜೀವವನ್ನೇ ಪಣಕ್ಕಿಟ್ಟು ರೋಪ್ ಮೂಲಕ ತೆರಳಿ, ಮಗುವನ್ನು ರಕ್ಷಿಸಿದ್ದಾರೆ.
ನಿಜಕ್ಕೂ ದೇಶಕ್ಕಾಗಿ ತಮ್ಮನ್ನೇ ಮುಡುಪಾಗಿಟ್ಟುಕೊಂಡಿರುವ, ಯೋಧರು, ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲೂ ಸಹ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರನ್ನು ರಕ್ಷಿಸುತ್ತಿರುವ ಕಾರ್ಯಕ್ಕೆ ಇಡಿಯ ದೇಶವೇ ತಲೆದೂಗಬೇಕಿದೆ.
Discussion about this post