ನವದೆಹಲಿ: ಭಾರತದ ಬಾರ್ಬಿ ಡಾಲ್ ಎಂದೇ ಫೇಮಸ್ ಆಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಫಿಟ್ನೆಸ್ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಆದರೆ, ಫಿಟ್ನೆಸ್‌ಗಾಗಿ ಜಿಮ್ ಮಾಡುವ ಕತ್ರೀನಾ ಅವರ ಜಿಮ್ ಫ್ರೆಂಡ್ ಯಾರು ಗೊತ್ತಾ? ಇನ್ನಾರು ಅಲ್ಲ ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.
ಸೆಲೆಬ್ರಟಿಗಳ ಫಿಟ್ನೆಸ್ ಎಕ್‌ಸ್ ಪರ್ಟ್ ಯಾಸ್ಮಿಸ್ ಕರಚಿವಾಲಾ ಅವರ ಬಾಡಿ ಇಮೇಜ್ ಸೆಂಟರ್‌ನಲ್ಲಿ ಇಬ್ಬರೂ ಸೆಲೆಬ್ರಟಿಗಳು ಒಟ್ಟಾಗಿ ಜಿಮ್ ಮಾಡುತ್ತಾರೆ. ಈ ಕುರಿತಂತೆ ಜಿಮ್‌ನಲ್ಲಿ ಪಾರ್ಟಿ ಸೆಲೆಬ್ರಟ್ ಮಾಡುತ್ತಿರುವ ಒಂದು ವೀಡಿಯೋ ಈಗ ಸಖತ್ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಕತ್ರಿನಾ ಹಾಗೂ ಜಾಹ್ನವಿ ಇಬ್ಬರೂ ಫ್ರೆಂಡ್ ಒಬ್ಬರ ಬರ್ತ್ ಡೇ ಆಚರಿಸಿದ್ದಾರೆ.
ವೀಡಿಯೋ ನೋಡಿ:
ಅಭಿಮಾನಿಯೊಬ್ಬರು ಶೇರ್ ಮಾಡಿರುವ ಈ ವೀಡಿಯೋವನ್ನು ಸುಮಾರು 12 ಲಕ್ಷದಷ್ಟು ಮಂದಿ ವೀಕ್ಷಿಸಿದ್ದಾರೆ.

















