ಕಲ್ಪ ಮೀಡಿಯಾ ಹೌಸ್ | ಹಾವೇರಿ/ಬೆಂಗಳೂರು |
ಯುವ ರೈತರಿಗೆ ಕನ್ಯೆ ನೀಡಲು ಹೆಣ್ಣು ಹೆತ್ತವರು ಹಿಂದೇಟು ಹಾಕುತ್ತಿದ್ದು, ಇದರಿಂದ ಬೇಸತ್ತ ಯುವಕರು ಕನ್ಯಾ ಭಾಗ್ಯ ಯೋಜನೆ ರೂಪಿಸಿ ಎಂದು ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿರುವ ಹಾವೇರಿ #Haveri ಜಿಲ್ಲೆಯ ಯುವ ರೈತರು, ಕನ್ಯಾ ಭಾಗ್ಯ ಎಂಬ ವಿಶೇಷ ಯೋಜನೆ ರೂಪಿಸಿ ಎಂದು ಮನವಿ ಮಾಡಿದ್ದಾರೆ.
5 ರಿಂದ 6 ಎಕರೆ ಜಮೀನು #Land ಇದ್ದರು ಸಹಿತ ರೈತರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕ ಎಂದ ಮಾತ್ರಕ್ಕೆ ಎಷ್ಟೋ ಜನ ಕನ್ಯೆಯನ್ನು ತೋರಿಸುತ್ತಿಲ್ಲ ಎಂದು ಬೇಸರು ವ್ಯಕ್ತಪಡಿಸಿದ್ದಾರೆ.
Also read: ಊಟಕ್ಕೆ ಕರೆದಿದ್ರು ಹೋಗಿದ್ದೆ ಅಷ್ಟೇ, ಇದರಲ್ಲಿ ತಪ್ಪೇನಿದೆ? ಸ್ಪೀಕರ್ ಖಾದರ್ ತಿರುಗೇಟು
ಕೇವಲ 5 ಸಾವಿರ ಸಂಬಳ ಬರುವ ವ್ಯಕ್ತಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ. ಆದರೆ, ನಾವು ಕೂಡ ಉತ್ತಮ ಮಳೆ ಬಂದರೆ ಲಕ್ಷಾಂತರ ರೂಪಾಯಿ ಗಳಿಸುತ್ತೇವೆ. ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸುತ್ತಿದ್ದೇವೆ. ಕೃಷಿ ಮಾಡುತ್ತಿರುವವನು ಕೂಡ ತನ್ನ ಮಗಳನ್ನು ಕೃಷಿಕನಿಗೆ ಕೊಡಲು ಹಿಂದೇಟು ಹಾಕುವ ಪರಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಯುವ ರೈತರ ಬೇಡಿಕೆಯೇನು?
- ಯುವ ರೈತರ ವಿವಾಹಕ್ಕಾಗಿ ಕನ್ಯಾಭಾಗ್ಯ ಯೋಜನೆ ಜಾರಿಗೆ ತನ್ನಿ
- ಯುವ ರೈತರನ್ನು ವಿವಾಹವಾದ ಯುವತಿಯರಿಗೆ ಕನಿಷ್ಠ 2 ಲಕ್ಷ ರೂ. ಪ್ರೋತ್ಸಾಹಧನ ನೀಡಿ
- ರೈತರನ್ನು ಮದುವೆ ಆದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಿ
- ಮನೆಯೊಡತಿಗೆ 2 ಸಾವಿರ ಕೊಡುವ ಮಾದರಿಯಲ್ಲಿ ರೈತರನ್ನು ಮದುವೆ ಆದವರಿಗೂ ಹಣ ನೀಡಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post